Categories: ಆರೋಗ್ಯ

“ಇನ್ಮೇಲೆ ನಿಮ್ಮ ಕಿಡ್ನಿ ಸೇಫ್” – ಇದು ಮೆಡಿಕವರ್ ಆಸ್ಪತ್ರೆ ಪ್ಲ್ಯಾನ್

ಕಿಡ್ನಿ ನಮ್ಮ ದೇಹದ ಬಹು ಮುಖ್ಯ ಅಂಗ. ಪ್ರತಿ ಕ್ಷಣ ನಾವು ಕಿಡ್ನಿ ಆರೋಗ್ಯದ ಬಗ್ಗೆ ಚಿಂತಿಸಬೇಕಾದ ಅಗತ್ಯವಿದೆ. ಹೀಗಿರುವಾಗ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಇರುವ ಮೆಡಿಕವರ್ ಆಸ್ಪತ್ರೆ ಕಿಡ್ನಿ ತಪಾಸಣೆಗಾಗಿ ವಿಶೇಷ ಪ್ಯಾಕೇಜ್ ಆರಂಭಿಸಿದೆ. ಮುಂಚಿತವಾಗಿ ಕಿಡ್ನಿಗೆ ಸಂಬಂಧಿಸಿದ ತಪಾಸಣೆ ನಡೆಸಲು ಮತ್ತು ಯಾವುದೇ ಸಮಸ್ಯೆ ಆಗದಂತೆ ತಡೆಯಲು ಈ ಪ್ಯಾಕೇಜ್ ಸಹಾಯವಾಗಲಿದೆ.

ಈ ವಿಶೇಷ ಆರೋಗ್ಯ ಯೋಜನೆ 10ನೇ ಫೆಬ್ರವರಿ ರಿಂದ 28ನೇ ಫೆಬ್ರವರಿ ರವರೆಗೆ, ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ (ಭಾನುವಾರಗಳು ಮತ್ತು ಸಾರ್ವಜನಿಕ ರಜಾದಿನಗಳು ಹೊರತುಪಡಿಸಿ) ಲಭ್ಯವಿರುತ್ತದೆ.
ಕಿಡ್ನಿ ಆರೋಗ್ಯ ನಮ್ಮ ದೇಹದ ಸಂಪೂರ್ಣ ಸುರಕ್ಷತೆಯ ಸಂಕೇತವಾಗಿದೆ. ಕಿಡ್ನಿ ಸಮಸ್ಯೆಯನ್ನು ಮುಂಚಿತ ಪತ್ತೆ ಮಾಡುವುದರಿಂದ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು. ಈ ತಪಾಸಣೆ ಪ್ಯಾಕೇಜ್ ಕಡಿಮೆ ದರದಲ್ಲಿ ಸಮಗ್ರ ತಪಾಸಣೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ಅಪಾಯದಲ್ಲಿರುವ ವ್ಯಕ್ತಿಗಳು ಸಕಾಲದಲ್ಲಿ ವೈದ್ಯಕೀಯ ಸಲಹೆ ಪಡೆಯಬಹುದು.

ಪ್ಯಾಕೇಜ್ ವಿವರಗಳು:
ಈ ತಪಾಸಣೆ ಪ್ಯಾಕೇಜ್ ಒಳಗೊಂಡಿದೆ:
-ಸಂಪೂರ್ಣ ಮೂತ್ರ ಪರೀಕ್ಷೆ
-ಸೀರಮ್ ಕ್ರಿಯಾಟಿನಿನ್ ಪರೀಕ್ಷೆ
-ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ (KUB)
-ನಫ್ರೋಲಾಜಿಸ್ಟ್ ಸಮಾಲೋಚನೆ
-ಆಹಾರ ತಜ್ಞರ ಸಮಾಲೋಚನೆ
ಈ ಪ್ಯಾಕೇಜ್‌ನ ಪ್ರಾರಂಭಿಕ ದರ 4140ರೂ ಆಗಿದ್ದು, ಇದನ್ನು ಈಗ ವಿಶೇಷ ರಿಯಾಯಿತಿ ದರದಲ್ಲಿ ₹1000 ಗೆ ನೀಡಲಾಗುತ್ತಾ ಇದೆ .

*ಯಾರು ತಪಾಸಣೆ ಮಾಡಿಸಿಕೊಳ್ಳಬೇಕು?*
ಕೆಳಕಂಡ ಲಕ್ಷಣಗಳು ಅಥವಾ ಸ್ಥಿತಿಯುಳ್ಳವರು ಈ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಉತ್ತಮ.

ಮಧುಮೇಹ, ರಕ್ತದೊತ್ತಡ ಪೆಲ್ವಿಕ್ ನೋವು ಹಾಗೂ ಮೂತ್ರದಲ್ಲಿ ರಕ್ತ ಅಸಹಜ ಬಣ್ಣದ ಮೂತ್ರ ವಿಸರ್ಜನೆ ಉರಿಯುವುದು.‌ಈ ಎಲ್ಲಾ ರೋಗ ಲಕ್ಷಣಗಳು ಇರುವವರು ಬಂದು ಪರೀಕ್ಷೆ ಮಾಡಿಕೊಳ್ಳ ಬಹುದು.

ಹಿರಿಯ ತಜ್ಞ ನಫ್ರೋಲಾಜಿಸ್ಟ್ ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟೇಷನ್ ವೈದ್ಯರಾದ ಡಾ. ರವಿ ಶಂಕರ್ ರವರನ್ನಜ ಭೇಟಿಯಾಗಿ ಸಲಹೆ ಪಡೆಯಬಹುದಾಗಿದೆ .
ಸಂದರ್ಶನಕ್ಕೆ ಅಥವಾ ಹೆಚ್ಚಿನ ಮಾಹಿತಿಗಾಗಿ 040 68334455 ಅನ್ನು ಸಂಪರ್ಕಿಸಿ…

Ramesh Babu

Journalist

Recent Posts

ಏ.12ರಂದು ದೊಡ್ಡಬಳ್ಳಾಪುರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.12 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು…

5 hours ago

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರ ಸಾವು

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…

10 hours ago

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…

10 hours ago

ಹುಚ್ಚನೊಬ್ಬನ ಕನಸು….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…

15 hours ago

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

1 day ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

1 day ago