ಇನ್ನೇನು ನಾಲ್ಕು ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ವಿಧಿಯ ಕ್ರೂರ ಆಟಕ್ಕೆ ಬಲಿ: ಕೈಯಲ್ಲಿ ಮದುವೆ ಆಮಂತ್ರಣ ಪತ್ರ ಹಿಡಿದೇ ಸಾವಿನ ಮನೆ ಸೇರಿದ ನವವಧು

ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಿತ್ತು. ಇನ್ನೇನು ನಾಲ್ಕೇ ನಾಲ್ಕು ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಆಕೆಯ ಕೈಗಳಿಗೆ ಮೆಹಂದಿ ರಂಗು ಏರಬೇಕಿತ್ತು. ಆದರೆ, ವಿಧಿಯ ಕ್ರೂರ ಆಟಕ್ಕೆ ಅದೇ ಕೈಯಲ್ಲಿದ್ದ ಮದುವೆ ಆಮಂತ್ರಣ ಪತ್ರಿಕೆಗಳು ರಕ್ತಸಿಕ್ತವಾಗಿ ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಬೆಂಗಳೂರು-ಮೈಸೂರು ರಸ್ತೆಯ ದೀಪಾಂಜಲಿನಗರ ಮೆಟ್ರೋ ನಿಲ್ದಾಣದ ಬಳಿ ನಡೆದ ಭೀಕರ ರಸ್ತೆ ಅಪಘಾತವೊಂದು ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಬರುವ ಸೋಮವಾರ ಸಪ್ತಪದಿ ತುಳಿಯಬೇಕಿದ್ದ ಸಿಂಧುಶ್ರೀ (29) ಮತ್ತು ಆಕೆಯ ಅತ್ತೆ ಮಗಳು ವಿದ್ಯಾ (19) ಲಾರಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಆಗಿದ್ದೇನು?
ಸಿಂಧುಶ್ರೀ ಅವರ ಮದುವೆ ಮುಂದಿನ ಸೋಮವಾರ ನಿಶ್ಚಯವಾಗಿತ್ತು. ಮದುವೆಗೆ ಆಪ್ತರು, ನೆಂಟರಿಷ್ಟರನ್ನು ಕರೆಯಲು, ಕತ್ರಿಗುಪ್ಪೆಗೆ ತೆರಳಿ ಆಮಂತ್ರಣ ಪತ್ರಿಕೆ ಹಂಚಲು ಸಿಂಧುಶ್ರೀ ತನ್ನ ಅತ್ತೆಯ ಮಗಳು ವಿದ್ಯಾರೊಂದಿಗೆ ಸ್ಕೂಟಿಯಲ್ಲಿ ಹೊರಟಿದ್ದರು. ಸಂಜೆ ಸುಮಾರು 3:30ರ ಸಮಯ, ದೀಪಾಂಜಲಿನಗರ ಮೆಟ್ರೋ ನಿಲ್ದಾಣದ ಬಳಿ ಇವರ ಸ್ಕೂಟರ್ ಸಾಗುತ್ತಿದ್ದಾಗ, ಹಿಂಬದಿಯಿಂದ ಅತಿವೇಗವಾಗಿ ಬಂದ ಲಾರಿಯೊಂದು ರಭಸವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಗೆ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದು, ದುರಂತವೆಂದರೆ ಅಷ್ಟಕ್ಕೇ ನಿಲ್ಲದ ಲಾರಿ ಇಬ್ಬರ ಮೇಲೂ ಹರಿದುಹೋಗಿದೆ. ಪರಿಣಾಮ, ದೇಹಗಳು ಛಿದ್ರಗೊಂಡು ಇಬ್ಬರೂ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.

ಕಣ್ಣೀರಲ್ಲಿ ಮುಳುಗಿದ ಕುಟುಂಬ
ಮದುವೆ ಮಂಟಪದಲ್ಲಿ ನಗುನಗುತ್ತಾ ಕಾಣಬೇಕಿದ್ದ ಸಿಂಧುಶ್ರೀ, ಮಸಣದ ಹಾದಿ ಹಿಡಿದಿರುವುದು ಕುಟುಂಬಸ್ಥರ ಕರುಳು ಕಿತ್ತುಬರುವಂತೆ ಮಾಡಿದೆ. ಮದುವೆ ಮನೆ ಕ್ಷಣಾರ್ಧದಲ್ಲಿ ಸೂತಕದ ಮನೆಯಾಗಿ ಮಾರ್ಪಟ್ಟಿದೆ.

ಅಪಘಾತವೆಸಗಿದ ಲಾರಿ ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಬ್ಯಾಟರಾಯನಪುರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಚಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಅತಿವೇಗ, ಅಜಾಗರೂಕ ಚಾಲನೆಗೆ ಇನ್ನೆಷ್ಟು ಮುಗ್ಧ ಜೀವಗಳು ಬಲಿಯಾಗಬೇಕು? ಮದುವೆ ಸಂಭ್ರಮದಲ್ಲಿದ್ದ ಮನೆಯವರ ಆಕ್ರಂದನ ನೋಡಿದರೆ ಕಲ್ಲೆದೆಯವರ ಕಣ್ಣಲ್ಲೂ ನೀರು ಬರುತ್ತದೆ.

Ramesh Babu

Journalist

Recent Posts

ಕನ್ನಡ ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆ ಕಾಪಾಡುವುದು ಪ್ರತಿಯೊಬ್ಬರ ಹೊಣೆ- ಕರ್ನಾಟಕದಲ್ಲಿ ನೆಲೆಸುವ ಅನ್ಯಭಾಷಿಕರು ಕನ್ನಡ ಭಾಷೆಗೆ ನಿಷ್ಠರಾಗಿರಬೇಕು- ಹಂಸಲೇಖ

ದೊಡ್ಡಬಳ್ಳಾಪುರ: ಕರ್ನಾಟಕದಲ್ಲಿ ಎಲ್ಲ ಭಾಷೆಗಳ ಜನರು ನೆಲೆಸಿದ್ದಾರೆ. ಆದರೆ ಬೇರೆ ಭಾಷೆಯವರು ಯಾರೇ ಆಗಿರಲಿ, ಕರ್ನಾಟಕದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ…

1 hour ago

ಬೆಲೆ ಏರಿಕೆ, ವಿದ್ಯುತ್ ಅಭಾವ, ಭೂಸ್ವಾಧೀನ ನೀತಿ ಖಂಡಿಸಿ ಜೆಡಿಎಸ್ ಪ್ರತಿಭಟನೆ: ಹಳ್ಳಿ ಗುಗ್ಗುಗಳ ಶಕ್ತಿ ಏನೆಂಬುದು ಸರ್ಕಾರಕ್ಕೆ ತೋರಿಸುತ್ತೇವೆ- ಹರೀಶ್ ಗೌಡ

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ನೀತಿಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆ, ರೈತರ ಸಮಸ್ಯೆಗಳು ಹಾಗೂ ವಿವಿಧ ಇಲಾಖೆಗಳಲ್ಲಿನ ಅವ್ಯವಸ್ಥೆ…

2 hours ago

₹50 ಸಾವಿರ ಲಂಚ ಸ್ವೀಕರಿಸುವಾಗ ನಗರಸಭೆ ಆಯುಕ್ತ ಎಸಿಬಿ ಬಲೆಗೆ: ಬಾಕಿ ಬಿಲ್ ಪಾವತಿಗೆ ಗುತ್ತಿಗೆದಾರನಿಂದ ಲಂಚಕ್ಕೆ ಬೇಡಿಕೆ; ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಹಣ ಪತ್ತೆ

ನಿರ್ಮಲ್: ಗುತ್ತಿಗೆದಾರನಿಗೆ ಬಾಕಿ ಉಳಿದಿದ್ದ ಕಾಮಗಾರಿಗಳ ಹಣ ಬಿಡುಗಡೆ ಮಾಡಲು ₹50 ಸಾವಿರ ಲಂಚ ಸ್ವೀಕರಿಸುತ್ತಿದ್ದ ಭೈಂಸಾ ನಗರಸಭೆಯ ಪ್ರಭಾರ…

14 hours ago

ಸರ್ಕಾರದ ನೀತಿಗಳ ವಿರುದ್ಧ ನಾಳೆ ಜೆಡಿಎಸ್ ಬೃಹತ್ ಪ್ರತಿಭಟನೆ: ಬಸ್ ಪ್ರಯಾಣ ದರ ಏರಿಕೆ, ವಿದ್ಯುತ್ ಸಮಸ್ಯೆ, ರೈತರ ನಿರ್ಲಕ್ಷ್ಯ ಖಂಡಿಸಿ ಹೋರಾಟ- ಹರೀಶ್ ಗೌಡ

ದೊಡ್ಡಬಳ್ಳಾಪುರ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ನೀತಿಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ವಿವಿಧ ಇಲಾಖೆಗಳಲ್ಲಿನ ಸಮಸ್ಯೆಗಳನ್ನು ಖಂಡಿಸಿ…

1 day ago

ರೈತ ಮಹಿಳೆಯರ ಸ್ವಾವಲಂಬನೆಗೆ ಕ್ಷೀರ ಸಂಜೀವಿನಿ ಆಸರೆ- ಬಿ.ಸಿ. ಆನಂದ್ ಕುಮಾರ್

ದೊಡ್ಡಬಳ್ಳಾಪುರ: ರೈತ ಮಹಿಳೆಯರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಬಮೂಲ್ ನಿರ್ದೇಶಕ…

2 days ago

ಮೂರನೇ ಮದುವೆಗೂ ಗುಡ್‌ಬೈ ಹೇಳಿದ ಪವನ್ ಕಲ್ಯಾಣ್!

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಖ್ಯಾತ ನಟ ಪವನ್ ಕಲ್ಯಾಣ್ ಅವರ ವೈಯಕ್ತಿಕ ಬದುಕಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪವನ್ ಕಲ್ಯಾಣ್ ಕೊನಿಡೆಲಾ…

2 days ago