ಇನ್ನೇನು ತಾಳಿ ಕಟ್ಟೋ ಟೈಮ್ ಗೆ ಮುರಿದು ಬಿದ್ದ ಮದುವೆ: ಕಾರಣವೇನು ಗೊತ್ತಾ…?

ರಾತ್ರಿ ರಿಸೆಪ್ಷನ್ ಮುಗಿಸಿಕೊಂಡು ಬೆಳಗ್ಗೆ ತಾಳಿ ಕಟ್ಟುವ ವೇಳೆ ಮದುವೆ ಮುರಿದು‌ ಹೋಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಾಲೆಪುರದ ಕಲ್ಯಾಣ ಮಂಟಪದಲ್ಲಿಂದು ನಡೆದಿದೆ..

ರಾತ್ರಿ ರಿಸೆಪ್ಷನ್ ಮಾಡಿಕೊಂಡ ವರ, ಬೆಳಗ್ಗೆ ತಾಳಿ ಕಟ್ಟುವ ವೇಳೆ ವಧುವಿನ ಮೇಲೆ ವರ ಅನುಮಾನಗೊಂಡು ತಾಳಿ ಕಟ್ಟದೇ ಮದುವೆ ಮಂಟಪದಿಂದ ಹಾರ ತೆಗೆದು ಬಿಸಾಕಿ ಹೋಗಿದ್ದಾನೆ.

ಯುವತಿ ಮೇಲೆ ಅನುಮಾನವಿದೆ ಎಂದು ಹೇಳಿದ ಯುವಕ ಕೊನೆ ಕ್ಷಣದಲ್ಲಿ ಮದುವೆ ನಿರಾಕರಿಸಿದ್ದಾನೆ ಎನ್ನಲಾಗಿದೆ.

ಈ ಹಿಂದೆ ಹುಡುಗಿ ಬೇರೆಯವನನ್ನ ಲವ್ ಮಾಡಿದ್ದಾಳೆ ಅಂತ ವರನ ಕಿರಿಕ್ ಮಾಡಿದ್ದಾನೆ. ಈ ಯುವತಿ ಮದುವೆಗೂ ಮುಂಚೆಯೆ ಯುವಕನ ಬಳಿ ಎಲ್ಲಾ ವಿಚಾರ  ಹೇಳಿದ್ದಳು ಎನ್ನಲಾಗಿದೆ.

ಎಲ್ಲಾ ಆಗಿದ್ದು ಆಗಿದೆ ಎಂದೇಳಿ ಮದುವೆ ಒಪ್ಪಿಕೊಂಡು, ಮದುವೆ ಮಂಟಪಕ್ಕೂ ಬಂದು ನಿನ್ನೆ ರಾತ್ರಿ ನಗು ನಗುತ್ತಾ ಆರತಕ್ಷತೆ ಮಾಡಿಕೊಂಡಿಸಿಕೊಂಡ ವರ, ಬೆಳಗ್ಗೆ ತಾಳಿ ಕಟ್ಟುವ ಸಮಯಕ್ಕೆ ಮದುವೆ ಬೇಡ ಎಂದು ಹೇಳಿ ಹೈಡ್ರಾಮ ಮಾಡಿ ಮದುವೆ ನಿಲ್ಲಿಸಿದ್ದಾನೆ ಎಂದು ತಿಳಿದುಬಂದಿದೆ…

ಇದೀಗ ವಧು ಮತ್ತು ವರನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ವಧುವಿಗೆ ನ್ಯಾಯ ಕೊಡಿಸಿ ಅಂತ ವಧು ಕುಟುಂಬಸ್ಥರ ಒತ್ತಾಯ ಮಾಡಿದ್ದಾರೆ.

ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *