ಇಡೀ ದೇಶದಲ್ಲಿ ಕರ್ನಾಟಕ ಹಲವು ವಲಯಗಳಲ್ಲಿ ಮುನ್ನಡೆಯಲ್ಲಿದೆ-ಜೆ.ರಾಜೇಂದ್ರ

ದೊಡ್ಡಬಳ್ಳಾಪುರ: ನಗರದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಲಯನ್ಸ್‌ ಕ್ಲಬ್‌ ಆಫ್ ಆರ್.ಎಲ್.ಜಾಲಪ್ನ ಇನ್ಸ್‌ಟಿಟ್ಯೂಷನ್ಸ್ ಸಹಯೋಗದಲ್ಲಿ ಶುಕ್ರವಾರ 69ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಶ್ರೀ ದೇವರಾಜ ಅರಸ್‌ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ವಿವಿಧ ಶೈಕ್ಷಣಿಕ ಘಟಕಗಳಲ್ಲಿ ಧ್ವಜಾರೋಹಣ ನೆರವೇರಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ನಾಡಿನ ಅನನ್ಯತೆಯ ಬಗ್ಗೆ ಹೆಮ್ಮೆ ಪಡುವ ಜೊತೆಗೆ ವಾಸ್ತವ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಅಗತ್ಯ. ಭ್ರಷ್ಟಾಚಾರವನ್ನು ನಿಗ್ರಹಿಸಿ ಮುನ್ನಡೆದಾಗ ಮಾತ್ರ ರಾಜ್ಯದ ಅಭಿವೃದ್ದಿ ಸಾಧ್ಯ. ಜಾತಿ, ಮತ, ಧರ್ಮಗಳ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸಗಳು ನಡೆಯುತ್ತಿರುವುದು ಆತಂಕಕಾರಿ. ಸಾಮಾಜಿಕ ಶಾಂತಿ ಮತ್ತು ಸಾಮರಸ್ಯವನ್ನು ರೂಢಿಸಿಕೊಳ್ಳದೇ ಹೋದರೆ ರಾಜ್ಯದ ಪ್ರಗತಿ ಸಾಧ್ಯವಿಲ್ಲ. ಇಂದು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆಯೂ ನಾವು ಕಾಳಜಿ ವಹಿಸಿ, ನ್ಯಾಯದ ಹಾದಿಯಲ್ಲಿ ಅವಕಾಶಗಳನ್ನು ಪಡೆಯುವಂತಾಗಬೇಕು ಎಂದರು.

ಜಿಲ್ಲಾ ಲಯನ್ಸ್‌ ಕನ್ನಡ ಮತ್ತು ಸಂಸ್ಕೃತಿ ಸಂಯೋಜಕರಾದ ನಾಗರತ್ನ ಮಾತನಾಡಿ, ಕನ್ನಡ ನಾಡಿಗೆ ಅನನ್ಯ ಇತಿಹಾಸವಿದೆ. ಹರಿದು ಹಂಚಿ ಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಒಟ್ಟುಗೂಡಿಸಿ ಕರ್ನಾಟಕದ ಏಕೀಕರಣವಾಯಿತು. ಸಮೃದ್ದವಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕನ್ನಡ ಹೊಂದಿದೆ. ಇಡೀ ದೇಶದಲ್ಲಿ ಕರ್ನಾಟಕ ಹಲವು ವಲಯಗಳಲ್ಲಿ ಮುನ್ನಡೆಯಲ್ಲಿದೆ ಎಂದರು.

ದೇವರಾಜ ಅರಸ್‌ ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಚಿಕ್ಕಣ್ಣ, ಅಂ.ರಾ.ವಸತಿ ಶಾಲೆ ಪ್ರಾಂಶುಪಾಲ ಧನಂಜಯ್‌ ಮಾತನಾಡಿದರು. ಲಯನ್ಸ್‌ ಕ್ಲಬ್‌ ಅಧ್ಯಕ್ಷ ಜೆ.ಆರ್.ರಾಕೇಶ್‌, ಜಿಇಟಿ ಜಿಲ್ಲಾ ಸಂಯೋಜಕ ಎಂ.ಆರ್.ಶ್ರೀನಿವಾಸ್, ಪ್ರಾಂಶುಪಾಲರಾದ ಡಾ.ವಿಜಯ ಕಾರ್ತಿಕ್, ನರಸಿಂಹರೆಡ್ಡಿ, ಮಹಂತೇಶಪ್ಪ, ಜಿಯಾವುಲ್ಲಾಖಾನ್, ಲಯನ್ಸ್‌ ಕ್ಲಬ್ ಕಾರ್ಯದರ್ಶಿ ಕೆ.ಸಿ.ನಾಗರಾಜ್, ಖಜಾಂಚಿ ಎಸ್.ರವಿಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

*ಕನ್ನಡ ಪುರಸ್ಕಾರ ಪ್ರದಾನ:*

ಇದೇ ವೇಳೆ ಪ್ರೊ.ಕೆ.ಆರ್.ರವಿಕಿರಣ್, ಡಾ.ಎಂ.ಚಿಕ್ಕಣ್ಣ, ರವಿಕುಮಾರ್, ಎಂ.ಬಿ.ರಮೇಶ್, ಕೆ.ಎಲ್.ಸ್ವರ್ಣ, ಎಂ.ಎನ್.ಸತ್ಯನಾರಾಯಣರಾವ್, ಬಿ.ಎಂ.ಸತೀಶ್‌ಕುಮಾರ್, ದೇವರಾಜ್, ಬಿ.ರಜನಿ, ಎಸ್.ಮಂಜುಳಾ, ಟಿ.ಸತ್ಯವತಿ, ಎ.ಕಿರಣ್, ಮಾಲತಿ, ವೆಂಕಟೇಶ್, ಮಾಲಿನಿ, ಪ್ರತಿಭಾವಂತ ವಿದ್ಯಾರ್ಥಿನಿ ದೀಕ್ಷಿತಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

Leave a Reply

Your email address will not be published. Required fields are marked *