
ಮಾಲೂರು ತಾಲ್ಲೂಕಿನ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಕೊಲೆ ಮಾಡಲಾಗಿತ್ತು.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಆರ್ನಬ್ ಎಂಬ ಯುವಕನನ್ನು ರಾತ್ರಿ 10:45 ಗಂಟೆಗೆ ಕೆಲಸದ ಪಾಳಿ ಮುಗಿಸಿ ನಡೆದುಕೊಂಡು ಹೋಗುತ್ತಿದ್ದವನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.
ಶಿವಾರಪಟ್ಟಣದ ಬಳಿ ಚಾಕುವಿನಿಂದ ಇರಿದು ಕೊಲೆ ಮಾಡಿ ಯಾವುದೇ ಸಣ್ಣ ಕುರುಹು ಇಲ್ಲದೇ ದುರುಳರು ಎಸ್ಕೆಪ್ ಆಗಿದ್ದರು.
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಕೈಗಾರಿಕಾ ಪ್ರದೇಶ ದಲ್ಲಿರುವ ವೆಸ್ಟ್ರಾನ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಆರ್ನಬ್ ಎಂಬ ಯುವಕನನ್ನು ರಾತ್ರಿ 10:45 ಗಂಟೆಗೆ ಕೆಲಸದ ಪಾಳಿ ಮುಗಿಸಿ ನಡೆದುಕೊಂಡು ಹೋಗುತ್ತಿದ್ದವನನ್ನು ಶಿವಾರಪಟ್ಟಣದ ಬಳಿ ಚಾಕುವಿನಿಂದ ಇರಿದು ಕೊಲೆ ಮಾಡಿ ಯಾವುದೇ ಸಣ್ಣ ಕುರುಹು ಇಲ್ಲದೇ ಬಾಂಬೆ (ಮುಂಬೈ) ಯಲ್ಲಿ ತಲೆಮಾರೆಸಿಕೊಂಡಿದ್ದ ಆರೋಪಿಗಳನ್ನು ಮಾಲೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶ್ರೀ ರಾಮಪ್ಪ. ಬಿ ಗುತ್ತೆರ್ ಹಾಗೂ ಕ್ರೈಂ ಟೀಮ್ ಸತತ 3 ತಿಂಗಳ ಪರಿಶ್ರಮದಿಂದ ಆರೋಪಿಗಳಾದ ಮಾಲೂರಿನ 1) ಸಯ್ಯದ್ ವಸಿಮ್, 2) ಸಯ್ಯದ್ ಸಮೀರ್ ರನ್ನು *ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.