ಇಂದು ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ಅದ್ಧೂರಿ ಚಾಲನೆ ದೊರೆಯಿತು. ಎಲ್ಲರೂ ಬಸ್ ಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ, ಪ್ರಯಾಣಿಕರಿಗೆ ಟಿಕೆಟ್ ಕೊಡಯವ ಮೂಲಕೆ ಚಾಲನೆ ನೀಡಿದ್ದಾರೆ. ಆದರೆ ಕೋಲಾರ ಜಿಲ್ಲೆಯ ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಕಲಾ ಅವರು ಸ್ವತಃ ತಾವೇ ಬಸ್ ಚಾಲನೆ ಮಾಡುವ ಮೂಲಕ ವಿನೂತನವಾಗಿ ಚಾಲನೆ ನೀಡಿ ಎಲ್ಲರ ಗಮನಸೆಳೆದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ಶಾಸಕಿ ಕೆಜಿಎಫ್ ನಗರದ ರಾಬರ್ಟ್ಸನ್ ಪೇಟೆಯ ಕುವೆಂಪು ಬಸ್ ನಿಲ್ದಾಣದಿಂದ ಸ್ವಲ್ಪ ದೂರ ಬಸ್ ಚಲಾಯಿಸಿದ್ದು, ಈ ವೇಳೆ ಪಕ್ಕದಲ್ಲೇ ಇದ್ದು ಬಸ್ಸಿನ ಚಾಲಕ ಚಾಲನೆ ಬಗ್ಗೆ ಮಾರ್ಗದರ್ಶನ ಕೊಟ್ಟಿದ್ದಾರೆ. ಶಾಸಕಿ ಬಸ್ ಚಾಲನೆ ಮಾಡಿದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಜೈಕಾರ ಹಾಕಿ ಖುಷಿ ಪಟ್ಟಿದ್ದಾರೆ.