ಇಂದು ಬೆಳಗ್ಗೆ ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯಕ್ತ ಶಾಕ್….

ಸರ್ಕಾರಿ ಅಧಿಕಾರಿಗಳು ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಕರ್ನಾಟಕ ಲೋಕಾಯಕ್ತ ಶಾಕ್‌ ಕೊಟ್ಟಿದೆ. ಬೆಂಗಳೂರು ಸೇರಿ 10 ಸರ್ಕಾರಿ ಅಧಿಕಾರಿಗಳ ವಿರುದ್ಧ 40 ಕಡೆ ಲೋಕಾಯುಕ್ತ ದಾಳಿ ನಡೆಸಿದೆ.

ತುಮಕೂರು, ಚಿಕ್ಕಮಗಳೂರು, ಮಂಡ್ಯ, ಹಾಸನ, ಕೊಪ್ಪಳ, ಚಾಮರಾಜನಗರ, ಮೈಸೂರು, ಬಳ್ಳಾರಿ, ವಿಜಯನಗರ, ಮಂಗಳೂರಿನಲ್ಲಿಯೂ ಬೆಳ್ಳಂಬೆಳಗ್ಗೆ ಅಧಿಕಾರಿಗಳು ಮನೆಗಳಿಗೆ ಎಂಟ್ರಿ ಕೊಟ್ಟಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ.

ಲೋಕಾಯುಕ್ತ ದಾಳಿಗೊಳಗಾದ ಅಧಿಕಾರಿಗಳು

1.ಬಿ.ರಬಿ, ಅಸಿಸ್ಟೆಂಟ್ ಪ್ರೊಫೆಸರ್ ಬಳ್ಳಾರಿ.

2.ಹನುಮಂತರಾಯಪ್ಪ, ಕೆಆರ್ ಐಡಿಎಲ್ ತುಮಕೂರು.

3.ಹರ್ಷ, ಲೋಕೋಪಯೋಗಿ ಇಲಾಖೆ  ಮಂಡ್ಯ.

4. ಪಿ.ರವಿ, ರೂರಲ್ ಡೆವಲಪ್ಮೆಂಟ್ ಇಲಾಖೆ ಚಾಮರಾಜನಗರ.

5. ಜಗನ್ನಾಥ್ ಜಿ, ಆಹಾರ ನಿರೀಕ್ಷಕರು, ಹಾಸನ.

6.ಶಾಂತಕುಮಾರ್ ಹೆಚ್ ಎಮ್, ಮೆಸ್ಕಾಂ ಮಂಗಳೂರು

7.ರೇಣುಕಮ್ಮ, ಅರಣ್ಯ ಇಲಾಖೆ ಕೊಪ್ಪಳ.

8.ಯಗ್ನೇಂದ್ರ, ಮುಡಾ ಮೈಸೂರು.

9.ಭಾಸ್ಕರ್, ವಿದ್ಯುತ್ ಇಲಾಖೆ ವಿಜಯನಗರ.

10.ನೇತ್ರಾವತಿ, ಸಿಟಿಓ ಚಿಕ್ಕಮಗಳೂರು.

ಬಳ್ಳಾರಿಯಲ್ಲಿ ಮೆಗಾ ರೈಡ್..

ಸಂಡೂರಿನ ಕೃಷ್ಣದೇವರಾಯ ವಿವಿಯ ಅಧಿಕಾರಿಯಾದ ಡಾ.ರವಿ ಮನೆ,ಕಚೇರಿಯಲ್ಲಿಯೂ ಲೋಕಾಯಕ್ತ ಎಂಟ್ರಿ ಕೊಟಿದ್ದಾರೆ. ಸಂಡೂರಿನ ಪಿಜಿ ಸೆಂಟರ್ ಕಚೇರಿ,ಗಾಂಧಿನಗರದ ಮನೆ, ದಾವಣಗೆರೆಯಲ್ಲಿನ ಮನೆಯ ಮೇಲೆ ,ಬಳ್ಳಾರಿಯ ಲೋಕಯುಕ್ತ ಎಸ್ಪಿ ಸಿದ್ದರಾಜುರವರ ನೇತೃತ್ವದಲ್ಲಿ ದಾಳಿ ನಡೆಯುತ್ತಿದೆ.

ತುಮಕೂರಿನ ಇಂಜಿನಿಯರ್ ಅಧಿಕಾರಿ ಹನುಮಂತರಾಯಪ್ಪ

ಕೆಆರ್​ಡಿಎಲ್ ಇಂಜಿನಿಯರ್ ಹನುಮಂತರಾಯಪ್ಪ ವಿರುದ್ಧವೂ ಅಕ್ರಮ ಆಸ್ತಿ ಗಳಿಕೆಯ ಆರೋಪ ಕೇಳಿ ಬಂದಿತ್ತು. ತುಮಕೂರಿನ ಶಿರಾ ಗೇಟ್‌ ನ 80 ಫೀಟ್ ಬಳಿಯಿರುವ ನಿವಾಸ,ಮಿಡಿಗೇಶಿಯ ಫಾರಂ ಹೌಸ್ ಹಾಗೂ ಕೊರಟಗೆರೆಯ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ಮುಂದುವರಿಯುತ್ತಿದೆ.

ಮಂಡ್ಯದಲ್ಲಿ ಲೋಕಾಯುಕ್ತ ರೈಡ್

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ PWD ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಹರ್ಷ ಮೇಲೆ ಅಕ್ರಮ ಆಸ್ತಿ ಗಳಿಕೆಯ ಆರೋಪ. ಆರು ಸ್ಥಳಗಳಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮನೆ, ಕಚೇರಿ, ಕುಟುಂಬಸ್ಥರು, ಸಂಬಂಧಿಕರ ಮನೆ ಮೇಲೆ ದಾಳಿನಡೆಯುತ್ತಿದ್ದು ,ಮಂಡ್ಯ ಲೋಕಾಯುಕ್ತ ಎಸ್ಪಿ ಸಜೀತ್ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದೆ.

ಚಾಮರಾಜನಗರದ ಜಿಲ್ಲೆಯಲ್ಲೂ ಲೋಕಾಯುಕ್ತ ದಾಳಿ

ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಆಗಿರುವ ಪಿ.ರವಿಕುಮಾರ್ ವಿರುದ್ಧ ಲೋಕಾಯುಕ್ತ ದಾಳಿ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಆಲನಹಳ್ಳಿ ಗ್ರಾಮದ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.ಚಾಮರಾಜನಗರ,ಮೈಸೂರು ಎರಡು ಕಡೆ ದಾಳಿ ನಡೆದಿದೆ.

ಹಾಸನದಲ್ಲಿ ಐಟಿ ಶಾಕ್!

ಹಾಸನದ ಆಹಾರ ನೀರಿಕ್ಷಕ ಜಗನ್ನಾಥ್ ನಿವಾಸ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.ಜಗನ್ನಾಥ್ ಸಹೋದರ ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್ ನಿವಾಸ ಮತ್ತು ಕಚೇರಿ ಮೇಲೂ ದಾಳಿ ನಡೆದಿದೆ.

ಲೋಕಾಯುಕ್ತ ಎಸ್​​ಪಿ ಮಲ್ಲಿಕ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ತಿರುಮಲೇಶ್, ಇನ್ಸ್‌ಪೆಕ್ಟರ್‌ಗಳಾದ ಬಾಲು,ಶಿಲ್ಪಾ ನೇತೃತ್ವದ ತಂಡ ದಾಳಿ ನಡೆದಿದೆ.

ಮಂಗಳೂರಿನಲ್ಲಿಯೂ ಪರಿಶೀಲನೆ

ಮಂಗಳೂರಿನ ಅತ್ತಾವರ ವಿಭಾಗದ ಮೆಸ್ಕಾಂ ಇಇ ಶಾಂತಕುಮಾರ್ ನಿವಾಸ ಮತ್ತು ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.ಶಾಂತಕುಮಾರ್ ಕಳೆದ ಐದಾರು ವರ್ಷಗಳಿಂದ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *