ಇಂದು ಪ್ರಜಾತಂತ್ರದ ಹಬ್ಬ ಅದ್ಧೂರಿ ಆಚರಣೆ: ಮತದಾನ ದಿನದಂದು ಸಹ ಮುಂದುವರಿದ ಮತದಾನ ಅರಿವು ಕಾರ್ಯಕ್ರಮ: 100% ಮತದಾನಕ್ಕೆ ಜಾಗೃತಿ

ಇಂದು ಕರ್ನಾಟಕ ರಾಜ್ಯದಲ್ಲಿ ಪ್ರಜಾತಂತ್ರದ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಬೆಳಗ್ಗೆ 7ರಿಂದ ಆರಂಭವಾದ ಮತದಾನ ಪ್ರಕ್ರಿಯೆ, ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಸ್ವೀಪ್ ಸಮಿತಿ ವತಿಯಿಂದ ವಿನೂತನವಾಗಿ ಹಲವು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಇಂದು ಸಹ ಕ್ಷೇತ್ರದಲ್ಲಿ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಿ ಚುನಾವಣೆ ಯಶಸ್ವಿಗೊಳಿಸುವಂತೆ ಮತದಾರರಲ್ಲಿ ಮನವಿ ಮಾಡಲಾಯಿತು.

ಪ್ರಜಾತಂತ್ರ ಹಬ್ಬವನ್ನು ಸಂಪೂರ್ಣ, ಶಾಂತಿಯುತ, ನ್ಯಾಯಸಮ್ಮತ, ಪಾರದರ್ಶಕವಾಗಿ ಆಚರಿಸಲು ಅವಿರತವಾಗಿ ದುಡಿಯುತ್ತಿರುವ ಅಧಿಕಾರಿಗಳು, ಚುನಾವಣಾ ಸಿಬ್ಬಂದಿ.

ವೃದ್ಧರಿಗೆ, ವಿಶೇಷಚೇತನರಿಗೆ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಲು ವಾಹನ ವ್ಯವಸ್ಥೆ, ವೀಲ್ ಚೇರ್ ವ್ಯವಸ್ಥೆ ಒದಗಿಸಿ ಮತದಾನ ಮಾಡಲು ಸಹಕರಿಸುತ್ತಿರುವ ಅಧಿಕಾರಿಗಳು. ಮತದಾರರಿಂದಲೇ ವಿನೂತನವಾಗಿ ಮತದಾನ ಜಾಗೃತಿ ಮೂಡಿಸಲಾಯಿತು.

ಕ್ಷೇತ್ರದ ಮತಗಟ್ಟೆಗಳಿಗೆ ನೋಡಲ್ ಅಧಿಕಾರಿ ಶ್ರೀನಾಥ್ ಗೌಡ, ಸಹಾಯಕ ಚುನಾವಣಾ ಅಧಿಕಾರಿ ಮೋಹನ ಕುಮಾರಿ ಭೇಟಿ ನೀಡಿ ಪರಿಶೀಲನೆ‌ ನಡೆಸಿ ಶಾಂತಿಯುತ ಮತದಾನಕ್ಕೆ ಸಹಕರಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *