ಹಿಂದೂಗಳಲ್ಲಿ ಸಾಂಸ್ಕೃತಿಕ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸಹಭಾಗಿತ್ವದಲ್ಲಿ ಇಂದಿನಿಂದ (ಏ.11) ಮೂರು ದಿನಗಳ ಕಾಲ ಶ್ರೀರಾಮ ಶೋಭಾಯಾತ್ರೆ ನಡೆಸಲಾಗುತ್ತಿದೆ.
ಇದರ ಭಾಗವಾಗಿ ಇಂದು ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದು, ಬೈಕ್ ರ‍್ಯಾಲಿಗೆ ಶಾಸಕ ಧೀರಜ್ ಮುನಿರಾಜ್ ಅವರು ಚಾಲನೆ ನೀಡಿದರು.
ರ‍್ಯಾಲಿಯಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಭಾಗಿಯಾಗಿ, ರ‍್ಯಾಲಿ ಉದ್ದಕ್ಕೂ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಸಾಗಿದರು.
ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಏ.13ರವರೆಗೆ ಶ್ರೀರಾಮೋತ್ಸವ ನಡೆಯಲಿದ್ದು, ಈಗಾಗಲೇ ಸಕಲ ಸಿದ್ಧತೆ ನಡೆಸಲಾಗಿದೆ.
ಮಾದಕ ವಸ್ತುಗಳ ನಿಷೇಧ, ಗೋ ಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿ, ಲವ್ ಜಿಹಾದ್ ನಿರ್ಮೂಲನೆ, ವಕ್ಫ್ ಹೆಸರಿನಲ್ಲಿ ಆಸ್ತಿ ಕಬಳಿಕೆಗೆ ಅಂಕುಶ, ಹಿಂದೂಗಳ ಮತಾಂತರಕ್ಕೆ ತಡೆ, ಅಕ್ರಮ ವಲಸಿಗರ ಹಾವಳಿಗೆ ಕಡಿವಾಣಕ್ಕಾಗಿ ಹೋರಾಟ ನಡೆಸುವ ಪಂಚ ನಿರ್ಣಯ ಕೈಗೊಳ್ಳಲಾಗಿದೆ.