ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿ ಏಪ್ರಿಲ್ 20 ರವರೆಗೆ ಅವಕಾಶ ಇದೆ. ನಾಮಪತ್ರ ಸಲ್ಲಿಸುವಂತ ಅಭ್ಯರ್ಥಿಗಳು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯೊಳಗೆ ಚುನಾವಣಾ ಕಾರ್ಯಾಲಯಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಬಹುದು ಎಂದು ಚುನಾವಣಾಧಿಕಾರಿ ತೇಜಸ್ ಕುಮಾರ್ ಮಾಹಿತಿ ನೀಡಿದರು.
ಉಪವಿಭಾಗಧಿಕಾರಿ ಕಚೇರಿಯಲ್ಲಿ ತೆರೆಯಲಾಗಿರುವ ಚುನಾವಣಾ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕ್ಷೇತ್ರದಲ್ಲಿನ 276 ಮತಗಟ್ಟೆಗಳಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಮತದಾರರು ಹಾಗೂ ರಾಜಕೀಯ ಮುಖಂಡರಿಗೆ ಎಲ್ಲಾ ರೀತಿಯ ಮಾಹಿತಿಯನ್ನ ಸ್ಪಷ್ಟವಾಗಿ ರವಾನೆ ಮಾಡಲಾಗಿದೆ. ಚುನಾವಣಾ ಕಾರ್ಯಾಲಯದ ಸುತ್ತಲೂ ಡಿವೈಎಸ್ಪಿ ನೇತೃತ್ವದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಾಮಪತ್ರ ಸಲ್ಲಿಕೆ ಆಗಮಿಸುವಂತ ಅಭ್ಯರ್ಥಿ ತಮ್ಮೊಂದಿಗೆ ಇತರ ನಾಲ್ವರನ್ನು ಕಚೇರಿಯೊಳಗೆ ಕರೆದೊಯ್ಯಬಹುದು ಎಂದು ಮಾಹಿತಿ ನೀಡಿದರು.
80 ವರ್ಷ ಮೀರಿದ ಮತದಾರರಲ್ಲಿ 3,349 ಮಂದಿಯನ್ನು ಗುರುತಿಸಲಾಗಿದ್ದು, ಮನೆಯಿಂದಲೇ ಅಂಚೆ ಮತದಾನ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ತಹಶೀಲ್ದಾರ್ ಮೋಹನಕುಮಾರಿ ಮಾತನಾಡಿ ಕಳೆದ ಅಕ್ಟೋಬರ್ ನಿಂದಲೇ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ.
ಕ್ಷೇತ್ರದ 276 ಮತಗಟ್ಟೆಗಳಲ್ಲಿ ಅಗತ್ಯ ಮೂಲಸೌಕರ್ಯ ಖಾತ್ರಿಪಡಿಸಿಕೊಳ್ಳಲಾಗಿದೆ. ವಿದ್ಯುತ್, ವೀಲ್ ಚೇರ್, ನೀರು, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಸಂಪೂರ್ಣ ಮಾಡಿದ್ದೇವೆ ಎಂದರು.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಅಂಕಿ – ಅಂಶ
ದೊಡ್ಡಬಳ್ಳಾಪುರ ಒಟ್ಟು ಮತದಾರರು 2,12,028
ಪುರುಷರು : 1,05,606
ಮಹಿಳಾ ಮತದಾರರು: 1,06,420
ಇತರೆ : 02.
80ಕ್ಕೂ ಹೆಚ್ಚು ವಯಸ್ಸಿನ ಮತದಾರರು; 3349
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳ ವಿವರ
ಒಟ್ಟು ಮತಗಟ್ಟೆಗಳು : 276
ಹೋಬಳಿವಾರು ಮತಗಟ್ಟೆಗಳು:
ಕಸಬಾ ಹೋಬಳಿ – 63,
ಮಧುರೆ ಹೋಬಳಿ – 37
ದೊಡ್ಡ ಬೆಳವಂಗಲ ಹೋಬಳಿ – 49
ಸಾಸಲು ಹೋಬಳಿ – 34
ನಗರಸಭೆ ವ್ಯಾಪ್ತಿ -79
ಬಾಶೆಟ್ಟಿಹಳ್ಳಿ ಪ.ಪಂ – 14
ಸೂಕ್ಷ್ಮ ಮತಗಟ್ಟೆಗಳು: 80
ಸಾಮಾನ್ಯ ಮತಗಟ್ಟೆಗಳು :196
ದೊಡ್ಡಬಳ್ಳಾಪುರ ವಿ.ಕ್ಷೇತ್ರದ
ಕಂಟ್ರೋಲ್ ರೂಂ ನಂಬರ್
080 27622002.
ವಯಸ್ಸಿನ ವಾರು ಮತದಾರರ ವಿವರ:
ವಯಸ್ಸು – ಮತದಾರರ ಸಂಖ್ಯೆ
18-19 5,186
20 -29. 40,234
30-39. 50,287
40-49. 46,352
50-59. 33,052
60-69. 20,452
70-79. 11,458
80-89. 4,021
90-99. 915
100+. 71
ಅಂಚೆ ಮತಗಳ ವಿವರ ಒಟ್ಟು :8,356
80 ವರ್ಷ ವಯಸ್ಸಿನವರ ಮತದಾರರ ಸಂಖ್ಯೆ – 5007
ಅಂಗವಿಕಲ ಮತದಾರರ ಸಂಖ್ಯೆ : 3349
ಸ್ಟ್ರಾಂಗ್ ರೂಂ ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರ, ದೊಡ್ಡಬಳ್ಳಾಪುರ.
ಮತ ಎಣಿಕೆ ಕೇಂದ್ರ: ಆಕಾಶ್ ಇಂಟರ್ ನ್ಯಾಶನಲ್ ಸ್ಕೂಲ್, ದೇವನಹಳ್ಳಿ.