
ಇಂಟರ್ ನ್ಯಾಷನಲ್ ಟೇಕ್ವಾಂಡೋ ಫೆಡೆರೇಷನ್ ಆಫ್ ಇಂಡಿಯಾ (ಐ ಟಿ ಎಫ್) ಅಹಮದಾಬಾದ್, ಗುಜರಾತ್ ನಲ್ಲಿ ನಡೆದ 40th ನ್ಯಾಷನಲ್ ಟೇಕ್ವಾಂಡೋ ಚಾಂಪಿಯನ್ ಶಿಪ್ ಮತ್ತು ಎರಡನೆಯ IL-DO ಮಾರ್ಷಲ್ ಆರ್ಟ್ಸ್ ನ್ಯಾಷನಲ್ ಡಿಸೆಂಬರ್ 23 ರಿಂದ 31 ವರೆಗೆ ನಡೆದಿತ್ತು. ಇದರಲ್ಲಿ 18ಕ್ಕೂ ಹೆಚ್ಚು ರಾಜ್ಯಗಳು ಭಾಗವಹಿಸಿದ್ದವು, ಕರ್ನಾಟಕದಿಂದ ಕೊಡಿಗೆಹಳ್ಳಿ ನಿವಾಸಿಗಳಾದ ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ (ವಿದ್ಯಾರಣ್ಯಪುರ) ವಿದ್ಯಾರ್ಥಿಗಳಾದ ಸೌಜನ್ಯ ಮಂಜುನಾಥ್ 11ನೇ ತರಗತಿ ಕಾಮರ್ಸ್ ವಿಭಾಗ, 40th ನ್ಯಾಷನಲ್ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಒಂದು ಚಿನ್ನದ ಪದಕ, ಎರಡು ಬೆಳ್ಳಿ ಪದಕ ಹಾಗೂ ಒಂದು ಕಂಚಿನ ಪದಕ ಗೆದ್ದಿರುತ್ತಾರೆ, ಹಾಗೂ IL-DO ನ್ಯಾಷನಲ್ ನಲ್ಲಿ ಒಂದು ಕಂಚಿನ ಪದಕ ಗೆದ್ದು ಜಯಶಾಲಿ ಆಗಿದ್ದಾರೆ.

ಶಶಾಂಕ್ ಮಂಜುನಾಥ್ 9ನೆ ತರಗತಿ , 40th ನ್ಯಾಷನಲ್ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ, 3 ಚಿನ್ನದ ಪದಕ, ಒಂದು ಬೆಳ್ಳಿಯ ಪದಕ ಹಾಗೂ ಒಂದು ಕಂಚಿನ ಪದಕ ಗೆದ್ದಿರುತ್ತಾರೆ, IL-DO ನ್ಯಾಷನಲ್ ನಲ್ಲಿ ಎರಡು ಚಿನ್ನದ ಪದಕ ಹಾಗೂ ಒಂದು ಬೆಳ್ಳಿಯ ಪದಕ ಗೆದ್ದು ನಮ್ಮ ಕರ್ನಾಟಕಕ್ಕೆ ಜಯ ತಂದುಕೊಟ್ಟಿದ್ದಾರೆ.

ಸೌಜನ್ಯ ಮಂಜುನಾಥ್ ಮತ್ತು ಶಶಾಂಕ್ ಮಂಜುನಾಥ್ ಸಹೋದರರು ತಮ್ಮ ಗುರುಗಳಾದ ಪ್ರದೀಪ್ ಜನಾರ್ಧನ್ ಮತ್ತು ಅವರ ತಂದೆ ತಾಯಿ ಹಾಗೂ ರಾಜ್ಯಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ.