ಬಜೆಟ್‌ನಲ್ಲಿ ಘೋಷಣೆಗೊಂಡಿರುವ ಅಂಶಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಚರ್ಚೆ ನಡೆಸಿದರು.
ಪಡಿತರ ಚೀಟಿ ಸಂಬಂಧಿತವಾಗಿ ಈಗಾಗಲೇ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ. ಪರಿಷ್ಕರಣೆ ಪೂರ್ಣಗೊಂಡ ನಂತರ, ಹೊಸ ಪಡಿತರ ಕಾರ್ಡ್‌ಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.
ಇಲಾಖೆಯಲ್ಲಿ ಅನುಷ್ಠಾನ ಮಾಡಲು ನಿರ್ದೇಶಿಸಿರುವ ಅಂಶಗಳು:
• ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ತಂತ್ರಜ್ಞಾನ ಬಳಸುವ ನಿರ್ಧಾರ. 5 ಕೋಟಿ ವೆಚ್ಚದಲ್ಲಿ:
– ಸಗಟು ಗೋದಾಮುಗಳಿಗೆ CCTV ಅಳವಡಿಕೆ
– GPS ಆಧಾರಿತ ವಾಹನ ಟ್ರಾಕಿಂಗ್ ವ್ಯವಸ್ಥೆ
– Command Control Centre ಸ್ಥಾಪನೆ
• 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮಾತ್ರ ಇರುವ ಮನೆಗಳಿಗೆ ಆಹಾರ ಧಾನ್ಯ ತಲುಪಿಸುವ “ಅನ್ನ-ಸುವಿಧಾ” ಯೋಜನೆಯ ವ್ಯಾಪ್ತಿಯನ್ನು 75 ವರ್ಷ ಮೇಲ್ಪಟ್ಟವರಿಗೆ ವಿಸ್ತರಿಸುವ ಬಗ್ಗೆ ಚರ್ಚೆ.
– ಇದರಿಂದ 3.30 ಲಕ್ಷ ಫಲಾನುಭವಿಗಳಿಗೆ ಲಾಭವಾಗಲಿದೆ.
• ನ್ಯಾಯಬೆಲೆ ಅಂಗಡಿಗಳಲ್ಲಿ Electronic Weighing Machine ಮತ್ತು Point of Sale Systemಗಳನ್ನು IT ವ್ಯವಸ್ಥೆಯೊಂದಿಗೆ ಸಂಯೋಜಿಸಲು ಕ್ರಮ
• ಅನ್ನಭಾಗ್ಯ ಯೋಜನೆಯ ಸಗಟು ಲಾಭಾಂಶವನ್ನು ಪ್ರತಿ ಕ್ವಿಂಟಾಲ್‌ಗಾಗಿ ರೂ. 35 ರಿಂದ ರೂ. 45ಕ್ಕೆ ಹೆಚ್ಚಿಸುವ ನಿರ್ಧಾರ
• ಹೊಸ ನ್ಯಾಯಬೆಲೆ ಅಂಗಡಿಗಳನ್ನು ಅವಶ್ಯಕತೆಗನುಗುಣವಾಗಿ ಪ್ರಾರಂಭಿಸಲು, ಪರಿಶಿಷ್ಟ ಜಾತಿ/ಪಂಗಡ ಹಾಗೂ ಸಹಕಾರ ಸಂಘಗಳಿಗೆ ಹಂಚಿಕೆಯಲ್ಲಿ ಆದ್ಯತೆ ನೀಡುವು ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಆಹಾರ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ಆಯುಕ್ತ ವಾಸಿ ರೆಡ್ಡಿ ವಿಜಯಜ್ಯೋತ್ನಾ, ನಿಗಮ ನಿರ್ದೇಶಕ ಚಂದ್ರಕಾತ್, ಸಚಿವರ ಆಪ್ತ ಕಾರ್ಯದರ್ಶಿ ಡಾ. ಹೆಚ್. ನಟರಾಜ್, ಮತ್ತು ಕಾನೂನು ಮಾಪನ ಇಲಾಖೆ ನಿಯಂತ್ರಕ ಎಂ.ಎಸ್.ಎನ್. ಬಾಬು ಉಪಸ್ಥಿತರಿದ್ದರು.