ರಾಯಪುರದಲ್ಲಿ ನಡೆದ ಟಿ -ಟ್ವೆಂಟಿ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ನ ಸಂಘಟಿತ ಪ್ರಯತ್ನದಿಂದ ಐದು ಪಂದ್ಯಗಳ ಸರಣಿಯನ್ನು 3-1 ಅಂತರದಿಂದ ಜಯಿಸಿದ್ದು ಇನ್ನೂ ಒಂದು ಪಂದ್ಯ ಇರುವಾಗಲೇ ಸೂರ್ಯ ಕುಮಾರ್ ನೇತೃತ್ವದ ಭಾರತ ತಂಡ ಸರಣಿ ಗೆದ್ದು ಬೀಗಿದೆ.
ಟಾಸ್ ಸೋತರು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ (37)ಹಾಗೂ ಋತುರಾಜ್ ಗಾಯಕ್ವಾಡ್(32) ಉತ್ತಮ ಆರಂಭವನ್ನು ನೀಡಿದರು , ಇಬ್ಬರೂ ವೇಗವಾಗಿ ರನ್ ಗಳಿಸಿ ಅಧ೯ಶತಕದ ಜೊತೆಯಾಟ ನಡೆಸಿದರು.
ನಂತರ ಬಂದ ಅನುಭವಿ ಆಟಗಾರ ಶ್ರೇಯಸ್ ಅಯ್ಯರ್ (8) ಹಾಗೂ ನಾಯಕ ಸೂರ್ಯ ಕುಮಾರ್ ಯಾದವ್ (1) ರನ್ ಗಳಿಸಿ ಔಟಾದರು, ನಂತರ ಬಂದ ಸ್ಪೋಟಕ ಬ್ಯಾಟ್ಸ್ಮನ್ ರಿಂಕು ಸಿಂಗ್ (46) ಹಾಗೂ ಜಿತೇಶ್ ಶರ್ಮಾ (35) ರನ್ ಗಳಿಸಿ ತಂಡವನ್ನು 175 ರನ್ ಗಡಿ ದಾಟಿಸಿದರು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಎದುರಿಸಿತು, ಫಿಲಿಪ್ಸ್ (8)ರನ್ ಗಳಿಸಿ ರವಿ ಬಿಷ್ಣೋಯಿ ಅವರಿಗೆ ವಿಕೆಟ್ ಒಪ್ಪಿಸಿದರು, ಟ್ರಾವಿಸ್ ಹೆಡ್ (31), ಹಾಗೂ ಬೆನ್ (19) , ಆರೋನ್ (8) ರನ್ ಗಳಿಸಿದರೆ ಮ್ಯಾಥ್ಯೂ ವೆಡ್ (36)ರನ್ ಗಳಿಸಿದರು ಯಾವುದೇ ಪ್ರಯೋಜನವಾಗದೆ 20 ರನ್ ಸೋಲನ್ನು ಅನುಭವಿಸಿದರು.
ಭಾರತದ ತಂಡದ ಪರವಾಗಿ ಅಕ್ಷರ್ ಪಟೇಲ್ 3 ವಿಕೆಟ್, ದೀಪಕ್ ಚಹರ್ 2 ವಿಕೆಟ್ ಪಡೆದರೆ ರವಿ ಬಿಷ್ಣೋಯಿ ಹಾಗೂ ಆವೇಶ್ ಖಾನ್ ತಲಾ ಎರಡು ವಿಕೆಟ್ ಕಬಳಿಸಿದರು , ಬಿಗಿ ಬೌಲಿಂಗ್ ದಾಳಿ ನಡೆಸಿದ ಅಕ್ಷರ್ ಪಟೇಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.