ಆಸ್ಟ್ರೇಲಿಯಾದ ವಿರುದ್ಧ ಆರಂಭವಾಗಿರುವ ಐದು ಪಂದ್ಯಗಳ ಟಿ-ಟ್ವೆಂಟಿ ಸರಣಿಯ ಎರಡನೇ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ನೇತೃತ್ವದ ಭಾರತದ ತಂಡದ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾದ ಬೌಲಿಂಗ್ ಪಡೆಗೆ ಬೆವರಿಳಿಸಿ ಬೃಹತ್ ಮೊತ್ತ ಕಲೆಹಾಕಿದರು.
ಟಾಸ್ ಸೋತರೂ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ (53) ಹಾಗೂ ಉಪನಾಯಕ ಋತುರಾಜ್ ಗಾಯಕ್ವಾಡ್ (58) ಉತ್ತಮ ಆರಂಭವನ್ನು ನೀಡಿದರು.
ನಂತರ ಬಂದ ಇಶಾನ್ ಕಿಶನ್ ಇನ್ನಿಂಗ್ಸ್ ಗೆ ವೇಗ ತುಂಬಿದರು, ಕೇವಲ 32 ಬಾಲ್ ಗೆ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿ ಸಹಿತ (52) ರನ್ ಗಳಿಸಿದರು.
ನಾಯಕ ಸೂರ್ಯ ಕುಮಾರ್ ಯಾದವ್ (19) ಹಾಗೂ ಕೊನೆಗೆ ಬಂದ ಮಧ್ಯಮ ಕ್ರಮಾಂಕದ ಆಟಗಾರ ರಿಂಕು ಸಿಂಗ್ ಕೇವಲ 9 ಎಸೆತಗಳಲ್ಲಿ 31ರನ್ ಸಿಡಿಸಿ ತಂಡದ ಮೊತ್ತವನ್ನು 235 ರನ್ ಏರಿಸಿದರು.
ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಅನುಭವಿಸಿತು, ಭಾರತದ ಕರಾರುವಾಕ್ ದಾಳಿಗೆ ಬೆದರಿದ ಆಸೀಸ್ 191 ರನ್ ಗೆ ಆಲೌಟ್ ಆಯಿತು.
ಸ್ಟೀವನ್ ಸ್ಮಿತ್ (19), ಮ್ಯಾಥ್ಯೂ ಶಾಟ್೯ (19), ಜೋಶ್ ಇಂಗ್ಲಿಷ್ (2), ಮ್ಯಾಕ್ಸ್ ವೆಲ್ (12) ನಿರಾಸೆ ಮೂಡಿಸಿದರು, ಆದರೆ ಅಲ್ ರೌಂಡರ್ ಮಾಕ್೯ ಸ್ಟೋನಿಸ್ (45), ಟೀಮ್ ಡೇವಿಡ್ (37) ಹಾಗೂ ಮ್ಯಾಥ್ಯೂ ವೆಡ್ (42) ರನ್ ಗಳಿಸಿ 191 ರನ್ ಗಳಿಸಿದರು.
ಭಾರತದ ಪರವಾಗಿ ವೇಗಿ ಪ್ರಸಿದ್ಧ ಕೃಷ್ಣ ಹಾಗೂ ರವಿ ಬಿಷ್ಣೋಯಿ ತಲಾ 3 ವಿಕೆಟ್ ಪಡೆದರೆ ಅಕ್ಷರ್ ಪಟೇಲ್, ಮುಖೇಶ್ ಕುಮಾರ್ ಹಾಗೂ ಅಶ೯ದೀಪ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.