ಪ್ರತಿವರ್ಷದಂತೆ ಈ ವರ್ಷವೂ ಸಹ ಆಷಾಡ ಮಾಸದ ಏಕಾದಶಿಯಾದ ಮಾರನೇ ದಿನವಾದ ದ್ವಾದಶಿ ಪ್ರಯುಕ್ತ ನಗರದ ಹೇಮಾವತಿ ಪೇಟೆಯಲ್ಲಿ ಹೇಮಾವತಿಪೇಟೆ ಯುವಕರ ಸಂಘದ ವತಿಯಿಂದ ಗಂಗಮ್ಮ, ಚೌಡೇಶ್ವರಿ, ಮುತ್ಯಾಲಮ್ಮ, ಲಕ್ಷ್ಮಿದೇವಿ, ಕಾಳಮ್ಮ ದೇವತೆಗಳ ಉತ್ಸವ ಅದ್ಧೂರಿಯಾಗಿ ನಡೆಸಲಾಗುತ್ತಿದೆ.
ಈ ಉತ್ಸವ ಐದು ದಿನಗಳು ನಡೆಯಲಿದ್ದು, ಪ್ರತಿದಿನ ವಿಶೇಷ ಆರತಿ, ಲಲಿತ ಪಾರಾಯಣ, ಮಕ್ಕಳಿಂದ ಭರತನಾಟ್ಯ ಸೇರಿದಂತೆ ಸ್ಥಳೀಯ ಕಲಾವಿದರಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಸುಮಾರು 70ರಿಂದ 80 ವರ್ಷಗಳ ಇತಿಹಾಸ ಇರುವ ನಾಗರ ಕಲ್ಲುಗಳು ಇರುವ ಜಾಗದಲ್ಲಿ ಐದು ದೇವತೆಗಳನ್ನು ಪ್ರತಿಷ್ಠಾಪಿಸಿ ವಿಶೇಷ ಆರತಿ, ಪೂಜಾ ಪುನಸ್ಕಾರ, ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿರುವುದು ಎಲ್ಲರ ಕಣ್ಮನ ಸೆಳೆಯಿತು. ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ನಡೆಸಲಾಗುತ್ತಿದೆ.
ಹೇಮಾವತಿಪೇಟೆ ಯುವಕರ ಸಂಘದಿಂದ ಕಳೆದ 30 ವರ್ಷಗಳಿಂದ ದೇವತೆಗಳ ಉತ್ಸವ ನಡೆಸಲಾಗುತ್ತಿದೆ. ಆಷಾಡ ಮಾಸದ ಪ್ರಯುಕ್ತ ಐದು ದೇವತೆಗಳಿಗೆ ಅದ್ಧೂರಿಯಾಗಿ ಪೂಜಾ ಕಾರ್ಯಕ್ರಮಗಳನ್ನ ನಡೆಸಲಾಗುತ್ತದೆ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಸಂಘದ ಉಪಾಧ್ಯಕ್ಷರಾದ ಮಹೇಶ್ ತಿಳಿಸಿದರು.
ಈ ವೇಳೆ ಕಿರಣ್ ಖಜಾಂಚಿ, ಮಾರ್ಗದರ್ಶಕಾರಾದ ಎಂಪಿಸಿ ರಾಮಮೂರ್ತಿ, ಶೇಖರ್ ಮತ್ತು ಹರೀಶ್ ಇದ್ದರು.