Categories: ಕೋಲಾರ

ಆಲೂಗಡ್ಡೆ ಬಿತ್ತನೆಗೆ ಸಬ್ಸಿಡಿಗೆ ಒತ್ತಾಯ: ಅ.22 ರಂದು ರೈತ ಸಂಘದಿಂದ ತೋಟಗಾರಿಕೆ ಕಚೇರಿಗೆ ಮುತ್ತಿಗೆ

ಕೋಲಾರ: ತೋಟಗಾರಿಕೆ ಇಲಾಖೆಯಿಂದ ಬಿತ್ತನೆ ಆಲೂಗಡ್ಡೆಯನ್ನು ಸಬ್ಸಿಡಿ ದರದಲ್ಲಿ ರೈತರಿಗೆ ನೀಡಬೇಕು ಹಾಗೂ ಖಾಸಗಿ ಆಲೂಗಡ್ಡೆ ವ್ಯಾಪಾರಸ್ಥರು ಮತ್ತು ನರ್ಸರಿಗಳು ಕಡ್ಡಾಯವಾಗಿ ತೋಟಗಾರಿಕೆ ಇಲಾಖೆಯಿಂದ ಪರವಾನಗಿ ಪಡೆದು ರೈತರು ಕೊಳ್ಳುವ ಸಸಿಗಳಿಗೆ ಮತ್ತು ಬಿತ್ತನೆ ಆಲೂಗಡ್ಡೆಗೆ ಕಡ್ಡಾಯವಾಗಿ ರಸೀದಿ ನೀಡಬೇಕೆಂದು ಅಗ್ರಹಿಸಿ ರೈತ ಸಂಘದಿಂದ ಅ.22 ರಂದು ತೋಟಗಾರಿಕೆ ಇಲಾಖೆ ಮುತ್ತಿಗೆ ಹಾಕಲು ಬಂಗಾರಪೇಟೆ ನಗರದ ಅರಣ್ಯ ಉದ್ಯಾನವನದಲ್ಲಿ ಕರೆದಿದ್ದ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.

ಪ್ರತಿ ವರ್ಷ ಆಲೂಗಡ್ಡೆ ಬೆಳೆಗಾರರು ಅನುಭಿಸುತ್ತಿರುವ ನಷ್ಟಕ್ಕೆ ಕಾರಣ ತಿಳಿಯಲು ವಿಜ್ಞಾನಿಗಳ ತಂಡ ರಚನೆ ಮಾಡುವ ಜೊತೆಗೆ ಬೆಳೆ ನಷ್ಟವಾದರೆ ನಿರ್ಲಕ್ಷವಹಿಸುವ ಅಧಿಕಾರಿಗಳ ಆಸ್ತಿ ಹರಾಜು ಹಾಕಿ ರೈತರಿಗೆ ಪರಿಹಾರ ನೀಡುವ ಕಾನೂನು ಜಾರಿ ಮಾಡಬೇಕೆಂದು ತೋಟಗಾರಿಕಾ ಸಚಿವರನ್ನು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.

ಜಿಲ್ಲಾದ್ಯಾಂತ ನಾಯಿಕೊಡೆಗಳಂತೆ ನರ್ಸರಿಗಳು ತಲೆಯೆತ್ತಿವೆ ಜೊತೆಗೆ ನಕಲಿ ಬಿತ್ತನೆ ಬೀಜಗಳ ಕಂಪನಿಗಳು ರೈತರ ಜೊತೆ ಚೆಲ್ಲಾಟವಾಡುವುದು ಒಂದು ಕಡೆಯಾದರೆ ಮತ್ತೊಂದೆಡೆ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆ ಪ್ರಮುಖ ಬೆಳೆಯಾಗಿದ್ದು, ಪ್ರತಿ ವರ್ಷವೂ ಬಿತ್ತನೆ ಗಡ್ಡೆಯಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲೆಯ ವ್ಯಾಪಾರಸ್ಥರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ರೈತರಿಗೆ ಬಿತ್ತನೆ ಗಡ್ಡೆ ಹೆಸರಿನಲ್ಲಿ ತಿನ್ನುವ ಆಲೂಗಡ್ಡೆ ಮಾರಾಟವೂ ನಡೆಯುತ್ತಿದ್ದು, ಸಂಬಂದ ಪಟ್ಟ ಇಲಾಖೆಗಳು ಮೌನಕ್ಕೆ ಶರಣಾಗಿದ್ದು, ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಸರ್ಕಾರದ ಕ್ರಮ ವಹಿಸಬೇಕು ವ್ಯಾಪಾರಸ್ಥರು ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ನಿಯಮಗಳನ್ನು ಮಾರಾಟ ಮಾಡಿಕೊಂಡಿದ್ದಾರೆ ವ್ಯಾಪಾರಸ್ಥನು ತೋಟಗಾರಿಕೆ, ಕೃಷಿ, ಎ.ಪಿ.ಎಂ.ಸಿ ಯಿಂದ ಪರವಾನಗಿ ಕಡ್ಡಾಯವಾಗಿ ಪಡೆದಿರಬೇಕು. ಮತ್ತು ಜಲಂದರ್‌ನಲ್ಲಿ ಪರೀಕ್ಷೆಗೊಳಪಟ್ಟ ಪ್ರಮಾಣೀಕೃತ ಬಿತ್ತನೆ ಗಡ್ಡೆಯನ್ನು ಮಾರಾಟ ಮಾಡಬೇಕು. ಬಿತ್ತನೆ ಆಲೂಗಡ್ಡೆ ಕೊಂಡ ಪ್ರತಿ ರೈತನಿಗೂ ಕಡ್ಡಾಯವಾಗಿ ರಸೀದಿ ನೀಡಬೇಕು. ಬೆಳೆ ನಷ್ಟವಾದರೆ ರೈತನಿಗೆ ಸರ್ಕಾರದ ವಿಮೆ ಮತ್ತು ಪರಿಹಾರ ಸಿಗುವಂತೆ ವ್ಯವಸ್ಥೆಗೆ ರಸೀದಿ ಕಡ್ಡಾಯಗೊಳಿಸಿ, ರೈತನ ಬೆಳೆ ನಷ್ಟದಿಂದ ಪಾರು ಮಾಡಬೇಕೆಂದು ಅಗ್ರಹಿಸಿದರು.

ಅತಿವೃಷ್ಠಿ ಅನಾವೃಷ್ಠಿ ಜೊತೆಗೆ ಟೊಮೆಟೊ ಬೆಳೆಗೆ ಬಾಧಿಸುತ್ತಿರುವ ಬಿಂಗಿರೋಗದಿಂದ ತತ್ತರಿಸಿ ಲಕ್ಷಾಂತರ ರೂಪಾಯಿ ನಷ್ಟದಲ್ಲಿರುವ ರೈತರ ನೋವಿಗೆ ಸ್ಪಂದಿಸುವ ಇಚ್ಚಾಶಕ್ತಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿದಿಗಳಿಗೆ ಇದ್ದರೆ ಬಿತ್ತನೆ ಆಲೂಗಡ್ಡೆಯನ್ನು ಶೇ.೭೫ ರಷ್ಟು ಸಬ್ಸಿಡಿ ದರದಲ್ಲಿ ನೀಡುವ ಮುಖಾಂತರ ಮಾನವೀಯತೆ ತೋರಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಈ ಕಾನೂನನ್ನು ಅಧಿಕಾರಿಗಳ ಪುಸ್ತಕದಲ್ಲಿ ನೋಡಬಹುದಾಗಿದ್ದು ಹಾಸನ, ಶಿವಮೊಗ್ಗ, ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಸರ್ಕಾರ ಮತ್ತು ಎ.ಪಿ.ಎಂ.ಸಿ ಕಾನೂನನ್ನು ಸಮರ್ಪಕವಾಗಿ ಜಾರಿ ಮಾಡಿದೆ. ಆದರೆ ಜಿಲ್ಲೆಯಲ್ಲಿ ಲಾಭದ ದೃಷ್ಠಿಯಿಂದ ತಿನ್ನುವ ಆಲೂಗಡ್ಡೆ ಮೂಟೆಗೆ ಸೀಲ್ ಹಾಕಿ ಬಿತ್ತನೆಗೆ ಮಾರುತ್ತಿರುವ ಪ್ರಕರಣಗಳು ೧೦ವರ್ಷಗಳಿಂದ ಮರುಕಳಿಸಿ ಬೆಳೆ ನಷ್ಟ ಮತ್ತು ಇಳುವರಿ ಕುಂಟಿತವಾಗಿ ರೈತರಿಗೆ ತೊಂದರೆಯಾದಾಗ ವ್ಯಾಪಾರಸ್ಥರು ನುಣಿಚಿಕೊಂಡು ರೈತರ ಮೇಲೆ ಗೂಬೆ ಕೂರಿಸುವ ಪ್ರಕರಣಗಳು ಸುಮಾರು ನಡೆದಿದ್ದು, ಸರ್ಕಾರದಿಂದ ಸಿಗುವ ವಿಮೆ ಮತ್ತು ಬೆಳೆ ನಷ್ಟವೂ ರೈತರಿಗೆ ಕಳಪೆ ಬಿತ್ತನೆಯಿಂದ ಸಿಗದಂತೆ ಮಾಡಿ ಅಧಿಕಾರಿಗಳು ವ್ಯಾಪಾರಸ್ಥರ ಗುಲಾಮರಂತೆ ವರ್ತಿಸುತ್ತಿದ್ದು, ಸರ್ಕಾರದ ನಿಯವನ್ನು ಪಾಲಿಸದ ವ್ಯಾಪಾರಸ್ಥರ ಹಾಗೂ ನಕಲಿ ಬೀಜ ಕಂಪನಿಗಳು ಮತ್ತು ರಸೀದಿ ನೀಡದ ನರ್ಸರಿಗಳ ವಿರುದ್ದ ಮುಲಾಜಿಲ್ಲದೆ ಕ್ರಮ ಕೈಗೊಂಡು ರೈತರ ಉಳಿವಿಗಾಗಿ ಬಿತ್ತನೆಯಲ್ಲಿ ತಿನ್ನುವ ಆಲೂಗಡ್ಡೆ ಮಾರಾಟ ಮಾಡುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತೋಟಗಾರಿಕೆ, ಕೃಷಿ, ಎ.ಪಿ.ಎಂ.ಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಪರವಾನಗಿ ಪಡೆಯದೆ ವ್ಯಾಪಾರಸ್ಥರ ವಿರುದ್ದ ಕ್ರಮ ಕೈಗೊಂಡು ರೈತರಿಗೆ ಬಿತ್ತನೆ ಗಡ್ಡೆಯಲ್ಲಿ ಮೋಸವಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿ ಮುಂದೆ ಆಗುವ ಆನಾಹುತಗಳನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾ.ಅ ಕದರಿನತ್ತ ಅಪ್ಪೋಜಿರಾವ್, ಲಕ್ಷಣ್, ಮುನಿಕೃಷ್ಣ, ವಿಶ್ವ, ಮುನಿರಾಜು, ಚಾಂದ್‌ಪಾಷ, ಅಹಮದ್, ಕೃಷ್ಣಪ್ಪ, ಮುನಿಯಪ್ಪ ಮಂಗಸಂದ್ರ ತಿಮ್ಮಣ್ಣ, ಗೀರೀಶ್, ಪುತ್ತೇರಿ ರಾಜು, ಮುಂತಾದವರಿದ್ದರು,

Ramesh Babu

Journalist

Recent Posts

ಅಭಿಮಾನಿಗಳ ಅತಿರೇಕ….ಯಾಕಪ್ಪಾ, ಏನಾಗಿದೆ ಸಮಸ್ಯೆ…?

ಅಭಿಮಾನಿಗಳ ಅತಿರೇಕ.... ಹುಚ್ಚುತನದ ಪರಮಾವಧಿ..... ದಚ್ಚು - ಕಿಚ್ಚ. (ದರ್ಶನ್ - ಸುದೀಪ್) + (ಡೆವಿಲ್ - ಮಾರ್ಕ್)........ ಅವರ…

9 minutes ago

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ

ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…

19 hours ago

ಜಗತ್ತಿನ ಬೆಳಕಿನ ಹಬ್ಬ – ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ…..

ಕ್ರಿಸ್ಮಸ್ ಮತ್ತು ಜೀಸಸ್, ಪ್ರೀತಿ ಮತ್ತು ಸೇವೆ.......... ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ..... ಯೇಸುಕ್ರಿಸ್ತನ…

22 hours ago

ಖಾಸಗಿ ಬಸ್ ಲಾರಿಗೆ ಡಿಕ್ಕಿ: ಹೊತ್ತಿ ಉರಿದ ಬಸ್: 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬಸ್ ಒಳಗಡೆಯೇ ಸಜೀವ ದಹನ

ಎಲ್ಲರನ್ನು ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗದ ಬಳಿ ನಡೆದಿದ್ದು, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' ಖಾಸಗಿ ಬಸ್…

22 hours ago

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು ಇಲ್ಲಿವೆ ನೋಡಿ…

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…

1 day ago