ಎಟಿಎಂ ಹಣ ತುಂಬುವ ವ್ಯಾನ್‌ನಲ್ಲಿದ್ದ 66 ಲಕ್ಷ ಹಣವನ್ನು ಕಳ್ಳರು ಕದ್ದು ಆಲದ ಮರದ ಬುಡದಲ್ಲಿ ಬಚ್ಚಿಟ್ಟಿದ್ದಾರೆ.
ಆಂಧ್ರಪ್ರದೇಶದ ಒಂಗೋಲ್ ಪಟ್ಟಣದಲ್ಲಿ ಗುರುವಾರ ಎಟಿಎಂನಲ್ಲಿ ಹಣ ತುಂಬುವ ವ್ಯಾನ್‌ನಿಂದ ₹66 ಲಕ್ಷ ದೋಚಿದ್ದ ದುಷ್ಕರ್ಮಿಗಳನ್ನು ಪ್ರಕಾಶಂ ಪೊಲೀಸರು ಬಂಧಿಸಿದ್ದಾರೆ. ಕಳವು ಮಾಡಿದ ಸಂಪೂರ್ಣ ಹಣವನ್ನು ಆಲದ ಮರದ ಬುಡದಲ್ಲಿ ಬಚ್ಚಿಟ್ಟಿರುವುದು ಪತ್ತೆಯಾಗಿದೆ.
ಒಂಗೋಲ್‌ನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂ ಬಳಿ ಈ ಘಟನೆ ನಡೆದಿದೆ. ಆರೋಪಿಗಳನ್ನು ಸಿಎಂಎಸ್ ಮಾಜಿ ಉದ್ಯೋಗಿ ಸಣ್ಣಮೂರು ಮಹೇಶ್ ಬಾಬು (22), ರಾಚರ್ಲ ರಾಜಶೇಖರ್ (19), ಸಿಎಂಎಸ್ ಒಂಗೋಲ್ ಶಾಖಾ ವ್ಯವಸ್ಥಾಪಕ ಗುಜ್ಜುಲ ವೆಂಕಟ ಕೊಂಡರೆಡ್ಡಿ (40) ಎಂದು ಗುರುತಿಸಲಾಗಿದೆ.
ಪ್ರಕಾಶಂ ಎಸ್ಪಿ ಗರುಡ್ ಸುಮಿತ್ ಔನಿಲ್ ಮಾತನಾಡಿ, ಸಿಎಂಎಸ್ ಸೆಕ್ಯುರಿಟಿ ಕಂಪನಿ ಸಿಬ್ಬಂದಿ ವಿವಿಧ ಎಟಿಎಂಗಳಲ್ಲಿ ನಗದು ತುಂಬಲು ತಮ್ಮ ಶಾಖೆಯಿಂದ ₹ 68 ಲಕ್ಷ ತೆಗೆದುಕೊಂಡಿದ್ದಾರೆ. ಕರ್ನೂಲ್ ರಸ್ತೆಯ ವರ್ಮಾ ಹೋಟೆಲ್ ಬಳಿ ವಾಹನ ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಹಿಂತಿರುಗಿ ನೋಡಿದಾಗ ₹66 ಲಕ್ಷ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.