ಕೋಲಾರ: ನಗರದಲ್ಲಿರುವ ಪ್ರಾದೇಶಿಕ ಸಾರಿಗೆ (ಆರ್.ಟಿ.ಒ) ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಲೋಕಾಯುಕ್ತ ತನಿಖೆಗೆ ಒತ್ತಾಯಿಸಿ ಕರ್ನಾಟಕ ರಿಪಬ್ಲಿಕನ್ ಸಂಘಟನೆ ವತಿಯಿಂದ ಮಾ.25 ರಂದು ಮಂಗಳವಾರ ಕಚೇರಿ ಮುಂದೆ ತಮಟೆ ಚಳುವಳಿ ನಡೆಯಲಿದೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಕ್ಕನಾರಾಯಣ ತಿಳಿಸಿದರು.
ನಗರದ ಆರ್.ಟಿ.ಒ ಕಚೇರಿ ಮುಂದೆ ಮಾತನಾಡಿದ ಅವರು ಕೋಲಾರ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಡ್ರೈವಿಂಗ್ ತರಬೇತಿ ಕೇಂದ್ರಗಳ ಮಾಲೀಕರ ಜೊತೆಗೆ ಕೈ ಜೋಡಿಸಿ ಅನರ್ಹ ಅಭ್ಯರ್ಥಿಗಳಿಗೆ ಪರವಾನಗಿಗಳನ್ನು ನೀಡುವ ಮೂಲಕ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಜೊತೆಗೆ ಲೋಕಾಯುಕ್ತ ತನಿಖೆ ನಡೆಸಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುತ್ತದೆ ಎಂದರು.
ಕೋಲಾರ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳಿಗೆ ಅಸಲಿ ಮಾರ್ಗಗಳು ಇಲ್ಲದೇ ಇದ್ದರೂ ಬೇಕಾಬಿಟ್ಟಿ ಮಾರ್ಗಗಳಲ್ಲಿ ಚಲುಸುತ್ತಿವೆ ಜೊತೆಗೆ ಪರವಾನಿಗೆಗೆ ಇಂತಿಷ್ಟು ಹಣ ನಿಗದಿ ಮಾಡಲಾಗಿದೆ ಕೇವಲ ಕಡೆಗಳಲ್ಲಿ ನಕಲಿ ರಸೀದಿಯನ್ನು ಬಳಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಶಾಲಾ ಕಾಲೇಜುಗಳ ವಾಹನಗಳಿಂದ ತಿಂಗಳ ಮಾಮೂಲಿ ನಡೆಯಯತ್ತಿದೆ ಈ ಎಲ್ಲಾ ಭ್ರಷ್ಟಾಚಾರಕ್ಕೆ ಕಡಿವಾಣವಾಗಲು ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ನಡೆಸಲು ಒತ್ತಾಯಿಸಿ ಮಾ 25 ರಂದು ಕಚೇರಿ ಮುಂದೆ ತಮಟೆ ಚಳುವಳಿ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಪಿವಿಸಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಪಿವಿಸಿ ಮಣಿ, ಕರ್ನಾಟಕ ರಿಪಬ್ಲಿಕನ್ ಸಂಘಟನೆ ರಾಜ್ಯ ಸಂಘಟನಾ ಕಾರ್ಯದರ್ಶಿ ವಿ ಮಂಜುನಾಥ್, ಜಿಲ್ಲಾ ಅಧ್ಯಕ್ಷ ವಿ.ಅಮರೇಶ್, ಬಂಗಾರಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿ ತಿಪ್ಪಯ್ಯ ಇದ್ದರು.