
ಆರ್. ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಪ್ರಾಜೆಕ್ಟ್ ಎಕ್ಸಿಬಿಷನ್ ಅನ್ನು ಆಯೋಜಿಸಲಾಗಿದ್ದು, ಸುಮಾರು ಎಂಟು ವಿವಿಧ ರೀತಿಯ ಸಂಶೋಧನೆಯನ್ನು ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಮಾಡಿರುತ್ತಾರೆ.
ಇದರಲ್ಲಿ ಪ್ರಮುಖವಾಗಿ ಸೋಲಾರ್ ವಾಟರ್ ಫಿಲ್ಟರ್, ರೋಬೋಟ್, ಮಲ್ಟಿ ಗ್ರೌಂಡ್ ಟ್ರಾನ್ಸ್ಲೇಟರ್ ಕೃಷಿಕರಿಗಾಗಿ ವಿನ್ಯಾಸ ಪಡಿಸಲಾದಂತಹ ಸಂಶೋಧನೆ ಇದಾಗಿರುತ್ತದೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆರ್ .ಎಲ್ ಜಾಲಪ್ಪ ಸಮೂಹ ಸಂಸ್ಥೆಗಳ ಸಿಇಓ ಜೆ ನಾಗೇಂದ್ರ ಸ್ವಾಮಿ ಆಗಮಿಸಿರುತ್ತಾರೆ, ಆರ್ ಎಲ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪಿ ವಿಜಯ ಕಾರ್ತಿಕ್ ,ಉಪ ಪ್ರಾಂಶುಪಾಲ ಡಾ. ಶಿವಪ್ರಸಾದ್, ಡೈರೆಕ್ಟರ್ ಕ್ವಾಲಿಟಿ ಅಕಾಡೆಮಿಕ್ಸ್ ಡಾ ಶ್ರೀನಿವಾಸ ರೆಡ್ಡಿ, ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸುನಿಲ್ ಕುಮಾರ್ ಕೆ , ಎಲ್ಲಾ ವಿಭಾಗದ ಮುಖ್ಯಸ್ಥರು , ಪ್ರಾಧ್ಯಾಪಕರು ಉಪಸ್ಥಿತಿ ಇದ್ದರು.