ಆಮಿಷಕ್ಕೆ ಒಳಗಾಗಿ ತಮ್ಮ ಮತ ಮಾರಾಟ ಮಾಡಬೇಡಿ- ಎಎಪಿ ರಾಜ್ಯ ಸಹ ಸಂಚಾಲಕ ವಿಜಯ್ ಶರ್ಮ

ನಾವು ಕಟ್ಟುತ್ತಿರುವ ತೆರಿಗೆ ಹಣ ನಮ್ಮ ಜೇಬಿಗೆ ವಾಪಾಸ್ ಬರಬೇಕಾದರೇ ಈ ಬಾರಿ ವಿಧಾನಸಭಾ ಚುನಾವಣೆ ಆಪ್ ಚುನಾವಣೆ ಆಗಬಾರದು, ಒಬ್ಬ ಅಭ್ಯರ್ಥಿ ಚುನಾವಣೆ ಆಗಬಾರದು, ಪ್ರತಿ ಮನೆಯ ಚುನಾವಣೆ ಇದಾಗಬೇಕು ಆಗಷ್ಟೆ ಬದಲಾವಣೆ ಸಾಧ್ಯ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕ ವಿಜಯ್ ಶರ್ಮ ಹೇಳಿದರು.

ನಗರದ ಆಪ್ ಕಛೇರಿಯಲ್ಲಿ ಪದಾಧಿಕಾರಿಗಳ ಆಯ್ಕೆ ಮತ್ತು ಬೈಕ್ ರ್ಯಾಲಿ ಕುರಿತು ಗುರುವಾರ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು, ದೆಹಲಿ ಚುನಾವಣೆಯಲ್ಲಿ ಹಿಂದು ಮುಸ್ಲಿಂ, ದಲಿತ, ಬ್ರಾಹ್ಮಣ, ಜಾತಿ, ಧರ್ಮ, ಭಾಷೆ ಎಲ್ಲಾ ಬಿಟ್ಟು ಒಂದಾದ ಮೇಲೆ 70 ಕ್ಷೇತ್ರಗಳಲ್ಲಿ ಗಳಿಗೆ 62 ಕ್ಷೇತ್ರದಲ್ಲಿ ಜಯಗಳಿಸಿ ದೆಹಲಿ ಗದ್ದುಗೆ‌ ಏರಲು ಸಹಕಾರಿಯಾಯಿತು.

ಆಪ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಲ್ಲಿನ ಪ್ರತಿ ಮನೆಗೂ ಉಚಿತ ಮತ್ತು ಉತ್ತಮವಾದ ಆರೋಗ್ಯ, ಶಿಕ್ಷಣ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ವಿದ್ಯುತ್, ನೀರು, ಲೈಸೆನ್ಸ್ , ಹೀಗೆ ಹಲವು ಸೌಲಭ್ಯಗಳನ್ನು ಪಡೆಯಲು ಜನ ಕಛೇರಿ ಅಲೆದಾಟ ಇಲ್ಲ ಪ್ರತಿ ತಿಂಗಳು 10 ರಿಂದ 12 ಸಾವಿರ ಉಳಿತಾಯ ಪ್ರಾರಂಭವಾಗಿದೆ,

ನಾಲಾಯಕ್ ಕಾಂಗ್ರೆಸ್,ಜೆಡಿಎಸ್ ಪಕ್ಷ ಇಷ್ಟು ಅವಕಾಶ ನೀಡಿದ್ದೆವು ಇವರು ಯಾಕೆ‌ ಮಾಡಿಲ್ಲ, ಸದ್ಯ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ‌ ಇವರ ಕೈಲಿ ಯಾಕೆ ಮಾಡೊಕೆ ಆಗ್ತಾ ಇಲ್ಲ ಇದನ್ನು ರಾಜ್ಯದ ಜನತೆ ಯೋಚಿಸಬೇಕು ಎಂದರು.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಪುರುಷೋತ್ತಮ್ ಮಾತನಾಡಿ, ನಮ್ಮ ಪಕ್ಷ ಇತರೇ ಪಕ್ಷಗಳಂತೆ ಯಾವುದೇ ಆಮಿಷಗಳನ್ನು ಕೊಡುವುದಿಲ್ಲ, ಅರವಿಂದ್ ಕೇಜ್ರಿವಾಲ್ ಆದೇಶದಂತೆ ಪ್ರತಿ ಮನೆಗೂ ವಿದ್ಯೆ,ಆರೋಗ್ಯ ಮತ್ತು ನೆಮ್ಮದಿ ಅಂದೋಲನವನ್ನು ಮಾಡುತ್ತ ಹೋದರೇ ಜನಗಳೇ ಅರ್ಥ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ,

ಈಗ ತಾಲ್ಲೂಕಿನಾದ್ಯಂತ ದೇವಾಲಯಗಳಿಗೆ ಪ್ರವಾಸ, ಉಚಿತ ಸೀರೆ, ಕುಕ್ಕರ್ ಆಮಿಷಗಳಿಗೆ ಜನರು ಮರುಳಾಗುವುದಿಲ್ಲ ಮತ್ತು ಇವರ ಆಟ ಹೆಚ್ಚು ದಿನ ನಡೆಯುವುದಿಲ್ಲ, ಮತದಾರರು ಜಾಗೃತರಾಗಿದ್ದೂ ತಮ್ಮ ಮತಗಳನ್ನು ಹಣಕ್ಕಾಗಿ ಮಾರಿಕೊಳ್ಳದಿರಿ ಸೂಕ್ತ ವ್ಯಕ್ತಿಯನ್ನು ಆಯ್ಕೆ‌ ಮಾಡಿ ಎಂದು ಮನವಿ ಮಾಡಿದರು.

ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಪದಾಧಿಕಾರಿಗಳು :
ತಾಲ್ಲೂಕು ಅಧ್ಯಕ್ಷರಾಗಿ ಜೆ.ಹರೀಶ್, ಉಪಾಧ್ಯಕ್ಷ ಇರ್ಫಾನ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಕೃಷ್ಣಮೂರ್ತಿ, ಕಾರ್ಯದರ್ಶಿ ಸುರೇಶ್,ಶೋಯೇಬ್ ಖಾನ್, ನರೇಂದ್ರಮೂರ್ತಿ, ವೀರಭದ್ರಯ್ಯ ಆಯ್ಕೆಯಾಗಿದ್ದಾರೆ.

ಈ ವೇಳೆ ಆಪ್ ನ ರಾಜ್ಯ ಕಾರ್ಯದರ್ಶಿ ಸುರೇಶ್ ರಾಥೋಡ್,ಜಂಟಿ ಕಾರ್ಯದರ್ಶಿ ಬಿ.ಕೆ.ಶಿವಪ್ಪ, ರಾಥೊಡ್ , ದೀಪಕ್ ಮತ್ತು ಕಾರ್ಯಕರ್ತರು ಇದ್ದರು.

Ramesh Babu

Journalist

Recent Posts

ಹಸಿವಿನ ಔಷಧಿ ಮತ್ತು ಮತದಾನ…..

ಇತ್ತೀಚೆಗೆ Social Media ಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ...... ಒಬ್ಬ ಬಾಲಕ ಡಾಕ್ಟರ್ ಬಳಿ " ಹಸಿವು ಹೋಗಲಾಡಿಸಲು…

1 hour ago

ಶಾಲಾ ಆವರಣ ಸುತ್ತಮುತ್ತ ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ: 9 ಕೆಜಿ ತಂಬಾಕು ಉತ್ಪನ್ನ, ನಿರ್ಬಂಧಿತ ಏಕಬಳಕೆ ಪ್ಲಾಸ್ಟಿಕ್ ಪತ್ತೆ: ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ, ದಂಡ ವಿಧಿಸಿದ ಅಧಿಕಾರಿಗಳು

ದೊಡ್ಡಬಳ್ಳಾಪುರ ನಗರದ ಶಾಲಾ ಆವರಣದ ಸುತ್ತಮುತ್ತ ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಏ.4ರಂದು ದೊಡ್ಡಬಳ್ಳಾಪುರ…

12 hours ago

ವಕೀಲ ಪ್ರತಾಪ್ ಜಮೀನು ವ್ಯಾಜ್ಯಕ್ಕೆ ಬಿಗ್ ಟ್ವಿಸ್ಟ್: ‘ಕಾಂಪೌಂಡ್ ನಿರ್ಮಾಣಕ್ಕೆ ಅಡ್ಡಿಪಡಿಸಲು ಹೇಳಿದ್ದೇ ಶಾಸಕ ಧೀರಜ್ ಮುನಿರಾಜ್’- ವಕೀಲ ಪ್ರತಾಪ್ ಗಂಭೀರ ಆರೋಪ

ನಾನು ವೃತ್ತಿಯಲ್ಲಿ ವಕೀಲನಾಗಿದ್ದೇನೆ. ವಕೀಲ ವೃತ್ತಿಯಲ್ಲಿ ಬಂದಂತಹ ಹಣದಿಂದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ದಡಘಟ್ಟಮಡಗು ಸಮೀಪ ಸರ್ವೇ ನಂ…

13 hours ago

ಸೋಲು – ಸಾವು – ಭಯ – ಬದುಕು……

"ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ " - ಡಾಕ್ಟರ್ ಬಾಬಾ ಸಾಹೇಬ್…

1 day ago

Understanding Cheap Emotional Support Animal Letters(6)

Cheap Emotional Support Animal Letter: Your Guide Understanding Cheap Emotional Support Animal Letters In recent…

1 day ago

The Role of ESA Letters in Mental Health Therapy

Understanding ESA Letters for Mental Health Support The Role of ESA Letters in Mental Health…

1 day ago