ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕಿಸ್ತಾನಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಪ್ರವಾಸಿಗರು ಬಲಿಯಾಗಿದ್ದರು. ಅದಕ್ಕಾಗಿ ಭಾರತೀಯ ಸೇನೆ ಪಾಕಿಸ್ತಾನ ಉಗ್ರರ ವಿರುದ್ಧ “ಆಪರೇಶನ್ ಸಿಂಧೂರ್” ಕಾರ್ಯಾಚರಣೆ ನಡೆಸಿದೆ.
ಭಾರತೀಯ ಸೇನೆ ಶ್ರೇಯಸ್ಸಿಗಾಗಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮ್ಮದ್ ಖಾನ್ ಸೂಚಿಸಿದ್ದಾರೆ.
ಭಯೋತ್ಪಾದಕರನ್ನು ದಮನ ಮಾಡಿ ದೇಶದ ಶಾಂತಿಗೆ ಮುಂದಾಗುತ್ತಿರುವ ನಮ್ಮ ಹೆಮ್ಮೆಯ ದೇಶದ ಸೈನಿಕರಿಗೆ ಶಕ್ತಿ ತುಂಬಲು ಅವರ ಶ್ರೇಯಸ್ಸಿಗಾಗಿ ರಾಜ್ಯದ ಎಲ್ಲಾ ವಕ್ಸ್‌ಗೆ ಸೇರಿದ ಮಸೀದಿಗಳಲ್ಲಿ ಹಾಗೂ ಇತರೆ ಮಸೀದಿಗಳಲ್ಲಿ ಪ್ರಾರ್ಥಿಸಲು ಸೂಚನೆ ನೀಡಿದ್ದಾರೆ.