ಆನ್ ಲೈನ್ ಗೇಮ್ ಚಟ: ಕೈತುಂಬಾ ಸಾಲ: ಹೆಡ್‌ ಕಾನ್ಸ್ಟೇಬಲ್‌ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಆತ ಪೊಲೀಸ್ ಹೆಡ್‌ ಕಾನ್ಸ್ಟೇಬಲ್‌. ಒಂದೇ ಠಾಣೆಯಲ್ಲಿ ಸುಮಾರು ಮೂರು ವರ್ಷಗಳಿಂದ ಕೆಲಸ ಮಾಡಿದ್ದ ಅನುಭವ ಹೊಂದಿದ್ದ. ಉತ್ತಮ ಜನಸ್ನೇಹಿ ಪೊಲೀಸ್‌ ಆಗಿ ಕೂಡ ಕೆಲಸ ಮಾಡ್ತಿದ್ದ. ತನ್ನ ಸಹಪಾಟಿಳೊಂದಿಗೂ ಫ್ರೆಂಡ್ಲಿಯಾಗಿಯೇ ಇದ್ದ. ನಿನ್ನೆ ರಾತ್ರಿ ಜಾತ್ರೆಗೆ ಬಂದೋಬಸ್ತ್‌ ನೈಟ್‌ ಡ್ಯೂಟಿ ಮುಗಿಸಿ…. ರಾತ್ರಿ ಮೂರು ಗಂಟೆಗೆ ಮನೆಗೆ ಹೋಗಿ ಸ್ವಲ್ಪ ಸಮಯ ರೆಸ್ಟ್‌ ಮಾಡಿದ್ದಾನೆ. ಪುನಃ ಮುಂಜಾನೆ ಏಳೂವರೆಗೆ ಡ್ಯೂಟಿಗೆ ಹೋಗ್ಬೇಕು ಅಂತ ಮನೆಯವರಿಗೆ ಹೇಳಿ ಠಾಣೆ ಬಳಿ ಬಂದವನು, ಠಾಣೆ ಆವರಣದ ರೆಸ್ಟ್‌ ರೂಮ್‌ ನಲ್ಲಿ ಹೆಣವಾಗಿ ಕಂಡುಬಂದಿದ್ದಾನೆ.

ಪೊಲೀಸ್‌ ಠಾಣೆಯ ಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಪೊಲೀಸಪ್ಪನ ಹೆಸರು ರಾಜಶೇಖರ್(48), ಇಪ್ಪತ್ತೈದು ವರ್ಷ ಹಿಂದೆ ಪೊಲೀಸ್‌ ಹುದ್ದೆಗೆ ಸೇರಿದ್ದ. ಶಿಡ್ಲಘಟ್ಟ ಚಿಂತಾಮಣಿ ಸೇರಿದಂತೆ ಜಿಲ್ಲೆಯ ಹಲವು ಪೊಲೀಸ್‌ ಠಾಣೆಗಳಲ್ಲಿ ಕೆಲಸ ಮಾಡಿರುವ ಅನುಭವ ಇತ್ತು. ಜನಸಾಮಾನ್ಯರೊಂದಿಗೆ ಉತ್ತಮ ಬಾಂದವ್ಯ ಇಟ್ಟುಕೊಂಡಿದ್ದ. ಕೈ ತುಂಬಾ ಸಂಬಳ. ಮಡದಿ ಇಬ್ಬರು ಮಕ್ಕಳೊಂದಿಗೆ ನೆಮ್ಮದಿಯಿಂದ ಇದ್ದ. ಹೆಚ್ಚಿನ ಹಣ ಸಂಪಾದಣೆ ಆಸಗೆ ಅಡ್ಡದಾರಿ ಹಿಡಿದ ಪೊಲೀಸಪ್ಪ ರಮ್ಮಿಸರ್ಕಲ್‌ ಎಂಬ ಆನ್‌ಲೈನ್‌ ಗೇಮ್‌ ಚಟ ಬೆಳಸಿಕೊಂಡಿದ್ದ. ದಿನದಿಂದ ದಿನಕ್ಕೆ ಹಣ ಕಳೆದುಕೊಂಡು ಕೊನೆಗೆ ನಲವತ್ತ ಲಕ್ಷಕ್ಕೂ ಹೆಚ್ಚಿನ ಹಣ ಕಳೆದುಕೊಂಡಿದ್ದಾನೆ. ಇಷ್ಟೇ ಅಲ್ಲದೆ ಸಾಲ ಮಾಡಿದ್ದಾನೆ. ಇದೇ ವಿಚಾರಕ್ಕೆ ಮನೆಯಲ್ಲಿ ಮನಸ್ತಾಪ ಮೂಡಿದೆ. ಇದರಿಂದ ಮನನೊಂದು ಬೇರೆ ದಾರಿ ಕಾಣದ ರಾಜಶೇಖರ್‌ ತಾನು ಕೆಲಸ ಮಾಡುತಿದ್ದ ಪೊಲೀಸ್‌ ಠಾಣೆ ಆವರಣದ ವಿಶ್ರಾಂತಿಗೃಹದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..

ಬೇರೆಯವರಿಗೆ ಬುದ್ದಿವಾದ ಹೇಳಬೇಕಾದ ಪೊಲೀಸ್ ಕಾನ್ಸ್ಟೇಬಲ್ ಆನ್ ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ ಮನನೊಂದು ಪೊಲೀಸ್ ಠಾಣೆ ಆವರಣದಲ್ಲೇ ಸೂಸೈಡ್ ಮಾಡಿಕೊಂಡಿದ್ದಾನೆ. ಈತ ಹಲವು ವರ್ಷಗಳಿಂದ ರಮ್ಮಿ ಸರ್ಕಲ್ ಆನ್ ಲೈನ್ ಗೇಮ್ ಹುಚ್ಚುಬೆಳೆಸಿಕೊಂಡಿದ್ದು, ಸಾಕಷ್ಟು ಹಣ ಕಳೆದುಕೊಂಡಿದ್ದಲ್ಲೆ ಅದಕ್ಕೆ ಸಾಲ ಸಹ ಮಾಡಿಕೊಂಡಿದ್ದನಂತೆ.

ಇದೇ ವಿಚಾರದಲ್ಲಿ ಹಣ ಕಳೆದುಕೊಂಡಿರೋದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಘಟನೆ ಸಂಬಂದ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಹಾಗೂ ಮಂಚೇನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಶವವನ್ನ ಮರಣೋತ್ತರ ಪರೀಕ್ಷೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ..

ಇನ್ನೂ ಈ ಬಗ್ಗೆ ದೂರು ದಾಖಲಿಸಿಕೊಂಡ ಮಂಚೇನಹಳ್ಳಿ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. ಒಟ್ಟಾರೆ ಜನಸಾಮನ್ಯರು ತಪ್ಪು ಮಾಡಿದರೆ ತಿದ್ದು ಬುದ್ದಿ ಹೇಳಬೇಕಾದ ಪೊಲೀಸರೇ ಮಾಡಬಾರದ ತಪ್ಪು ಪೊಲೀಸ್‌ ಠಾಣೆ ಆವರಣದಲ್ಲೇ ಆತ್ಮಹತ್ಯೆ ಮಡಿಕೊಂಡರೇ, ಸಮಾಜವನ್ನು ತಿದ್ದಿ ಬುದ್ದಿ ಹೇಳೋರು ಯಾರು…?

ಆನ್‌ ಲೈನ್‌ ವಂಚಕರನ್ನ ಎಡೆಮುರಿ ಕಟ್ಟಬೇಕಿದ್ದ ಪೊಲೀಸರೇ ಆನ್‌ ಲೈನ್‌ ಗೇಮ್‌ ವಂಚನೆಗೆ ಇದ್ದಬದ್ದ ಹಣದ ಜೊತೆಗೆ ಪ್ರಾಣ ಕಳೆದುಕೊಂಡು ಇದ್ದ ಇಬ್ಬರು ಮಕ್ಕಳು ಮಡದಿಯನ್ನು ಅನಾಥರನ್ನಾಗಿ ಮಾಡಿರುವುದು ದುರಂತ…..

Leave a Reply

Your email address will not be published. Required fields are marked *

error: Content is protected !!