ಆಂಧ್ರಪ್ರದೇಶದ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಆದಿಮುಲಪು ಸುರೇಶ್ ಅವರ ಬೆಂಗಾವಲು ವಾಹನವು ಪ್ರಕಾಶಂ ಜಿಲ್ಲೆಯ ತ್ರಿಪುರಾಂತಕಂ ಮಂಡಲದಲ್ಲಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಸಚಿವರು ವಿಜಯವಾಡದಿಂದ ಮಾರ್ಕಪುರಂಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದಾಗ ಸಚಿವರು ಮತ್ತೊಂದು ವಾಹನದಲ್ಲಿದ್ದರು ಎನ್ನಲಾಗಿದೆ.