ಆಟೋ ಎಲ್‌ಪಿಜಿಗಾಗಿ ಡಿಕ್ರಾಸ್ ರಸ್ತೆಯ ಸೂಪರ್ ಗ್ಯಾಸ್ ಬಂಕ್ ಬಳಿ ನೂರಾರು ಆಟೋಗಳು ಸಾಲುಗಟ್ಟಿ ನಿಂತಿವೆ. ಆಟೋ ಎಲ್ಪಿಜಿ ಇಲ್ಲದೆ ಕಂಗಾಲಾಗಿರುವ ಆಟೋ ಚಾಲಕರಿಗೆ ನಗರದ ಏಕೈಕ ಎಲ್ಪಿಜಿ ಕೇಂದ್ರದಲ್ಲಿ ಎಲ್ಪಿಜಿ ಸಿಗುವ ಮಾಹಿತಿ ಮೇರೆಗೆ ಆಟೋ ಚಾಲಕರು ಕಿಲೊ ಮೀಟರ್ ಗಟ್ಟಲೆ ಸಾಲಿನಲ್ಲಿ ಆಟೋಗಳನ್ನ ನಿಲ್ಲಿಸಿ ಕಾಯುತ್ತಿದ್ದಾರೆ.
ಪಕ್ಕದ ಚಿಕ್ಕಬಳ್ಳಾಪುರ, ವಿಜಯಪುರ, ನೆಲಮಂಗಲ ಗೌರಿಬಿದನೂರು, ಯಲಹಂಕ, ದೇವನಹಳ್ಳಿ, ಕೆಆರ್ ಪುರಂ ಸೇರಿದಂತೆ ಹಲವು ದೂರದ ಊರುಗಳಿಂದಲೂ ಆಟೋ ಚಾಲಕರು ಆಗಮಿಸಿ ಮಧ್ಯಾಹ್ನದಿಂದಲೇ ಕಾಯುತ್ತಿದ್ದಾರೆ.
ಎಲ್ಪಿಜಿ ಇಲ್ಲದೆ ಜೀವನ ನಿರ್ಹವಣೆ ಅಸಾಧ್ಯವಾಗಿದೆ. ನಮ್ಮ ಜೀವನ ಬೆಳಗ್ಗೆಯಿಂದ ಸಂಜೆವರೆಗೂ ದುಡಿದು ಬದುಕುವುದು. ಈಗ ಎಲ್ಪಿಜಿ ಇಲ್ಲದೆ ಆಟೋ ನಿಲ್ಲಿಸಿ 10 ದಿನಗಳಾಗಿವೆ. ಮನೆ ಬಳಿ ಸಾಲ ಕೊಟ್ಟವರು ಬರುತ್ತಿದ್ದಾರೆ. ಸಾಲ ಕಟ್ಟಲಾಗದೆ ಪರಿತಪಿಸುವಂತಾಗಿದೆ. ಒಮ್ಮೆ ಸಾಲ ಕೊಟ್ಟವರು ಮತ್ತೊಮ್ಮೆ ಸಾಲ ನೀಡುತ್ತಿಲ್ಲ. ಸರ್ಕಾರ ಅಧಿಕೃತ ಆಟೊ ಚಾಲಕರನ್ನ ಗುರುತಿಸಿ ಸಹಾಧನ ನೀಡಬೇಕು ಎಂದು ಆಟೋ ಚಾಲಕ ಮಂಜುನಾಥ‌್ ಮನವಿ ಮಾಡಿದರು.
ಬೆಲೆ ಏರಿಕೆಗೆ ಆಟೋ ಚಾಲಕರು ತತ್ತರ:
ಮಧ್ಯಪ್ರಾಚ್ಯ ಯುದ್ಧ ಆರಂಭಕ್ಕೂ ಮುನ್ನ ಎಲ್ಪಿಜಿ ದರವೂ ಪ್ರತಿ ಕೆಜಿಗೆ 52 ರೂ. ಇತ್ತು. ಕಳೆದ 15 ದಿನಗಳಲ್ಲಿ ಬರೋಬ್ಬರಿ 25 ರಿಂದ 30 ರೂ. ಏರಿಕೆಯಾಗಿದೆ. ಇಂದು ಕೂಡ ಬಂಕ್ ಮಾಲೀಕರು ದರ ನಿಗದಿ ಪಡಿಸಲು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಕಳೆದ ವಾರ 85 ರೂ. ನೀಡಿ ಆಟೋ ಚಾಲಕರು ಎಲ್ಪಿಜಿ ಖರೀದಿಸಿದ್ದರು. ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆ ದರವನ್ನು ಏರಿಕೆ ಆಗುವ ಭೀತಿ ಕಾಡುತ್ತಿದೆ. ಸದ್ಯ ಇರುವ ಎಲ್ಪಿಜಿ ಪ್ರಮಾಣದಲ್ಲಿ ಪ್ರತಿ ಆಟೊ ಚಾಲಕರಿಗೆ 500 ರೂ.ಗೆ ವಿತರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ..
ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ…
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ….
2026-27 ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ(ಆಂಗ್ಲ ಮಾಧ್ಯಮ)ಗೆ ಸೇರಲು ಪರಿಶಿಷ್ಟ ಪಂಗಡದ ಪ್ರತಿಭಾವಂತ…
ಛಲವಾದಿ ಮಹಾಸಭಾ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾಗಿ ಎಸ್ ಯು ರಮೇಶ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಜಿಲ್ಲಾಧ್ಯಕ್ಷ ನರೇಶ್ ನೇತೃತ್ವದಲ್ಲಿ ನಗರದ…
ಬೆಳಗಾವಿಯ ಸಂಕೇಶ್ವರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದೆ. ಅಂತಾರಾಜ್ಯ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಲಾಗಿದೆ. ಬಂಧಿತರಿಂದ 18.30 ಲಕ್ಷ ಮೌಲ್ಯದ…
ಯುದ್ಧದ ವಿರುದ್ಧವೇ ಯುದ್ಧ ಸಾರಬೇಕಿದೆ, " War against war... " ಅಸಹಾಯಕರ ನೋವಿನ ಧ್ವನಿ,... ದಯವಿಟ್ಟು ಬನ್ನಿ ಭಾಗವಹಿಸಿ......…
ಇಬ್ಬರು ಸ್ನೇಹಿತರು ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ರಾಮಸಮುದ್ರ ಕೆರೆಯಲ್ಲಿ…
ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲವೆಂದು ಮನನೊಂದು ಒಂದೇ ದಿನ ರಾಜ್ಯದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಗಳು ಚಿಕ್ಕಮಗಳೂರು…