ಆಕ್ಸಿಡೆಂಟ್ ಝೋನ್ ಗಳಲ್ಲಿ ವೇಗ ನಿಯಂತ್ರಕ ಹಂಪ್ ಅಳವಡಿಕೆಗೆ ಚಿಂತನೆ: ಸಂಚಾರಿ ನಿಯಮ‌ ಗಾಳಿಗೆ ತೂರಿ ವಾಹನ ಚಲಾಯಿಸಿದರೆ ದಂಡ, ಶಿಕ್ಷೆ ಗ್ಯಾರೆಂಟಿ- ನಗರ ಪೊಲೀಸ್ ಇನ್ಸ್‌ಪೆಕ್ಟರ್ ಅಮರೇಶ್ ಗೌಡ ಎಚ್ಚರಿಕೆ

ಇತ್ತೀಚೆಗೆ ನಗರದಲ್ಲಿ ಒಂದಿಲ್ಲೊಂದು ಅಪಘಾತಗಳು ಸಂಭವಿಸಿ ಆನೇಕ ಸಾವು-ನೋವುಗಳು ಕಂಡುಬರುತ್ತಿವೆ. ಅಪಘಾತ ಪ್ರಕರಣಗಳನ್ನು ಕಡಿಮೆ ಮಾಡಲು ಅಪಘಾತಗಳು ಹೆಚ್ಚಾಗಿ ಆಗುವ ಸ್ಥಳಗಳಿಗೆ ನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಹಾಗೂ ಪಿಡಬ್ಲ್ಯೂಡಿ ಇಂಜಿನಿಯರ್ ಪುರುಷೋತ್ತಮ ಅವರು ಭೇಟಿ ನೀಡಿ ಪರಿಶೀಲಿಸಿ, ಅಪಘಾತ ನಡೆಯದಂತೆ ತಡೆಯಲು ಯಾವೆಲ್ಲಾ ಮುನ್ನೆಚ್ಚರಿಕೆ‌ ಕ್ರಮಗಳನ್ನು ಅಳವಡಿಸಬೇಕು ಎಂದು ಸಮಾಲೋಚಿಸಿದರು.

ನಾಗರಕೆರೆ ರಸ್ತೆ, ಶಾಂತಿನಗರ ರಸ್ತೆ, ಒಕ್ಕಲಿಗರ ಭವನ ಮುಂಭಾಗ, ಎಪಿಎಂಸಿ ಯಾರ್ಡ್ ಮುಖ್ಯದ್ವಾರದ ಮುಂದೆ ಮತ್ತು ಸರ್ಕಾರಿ ಆಸ್ಪತ್ರೆ ಮುಂಭಾಗದ ರಸ್ತೆಗಳಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿದ್ದು, ಈ ಸ್ಥಳಗಳನ್ನು ಆಕ್ಸಿಡೆಂಟ್ ಝೋನ್ ಎಂದು ಪರಿಗಣಿಸಿ ಈ‌ ಸ್ಥಳಗಳಲ್ಲಿ ಹಂಪ್, ಸೂಚನಾ ಫಲಕಗಳು ಸೇರಿದಂತೆ ಇತರೆ ಸಂಚಾರ ಸೂಚನಾ ಫಲಗಳನ್ನು ಅಳವಡಿಸಲು ಚಿಂತಿಸಲಾಗಿದೆ.

ಇನ್ನು ಮುಂದೆ ನಗರದಲ್ಲಿ ವಾಹನ ಚಲಾಯಿಸುವವರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು, ವೀಲಿಂಗ್ ಮಾಡುವುದು, ಮನಸೋಇಚ್ಛೆ ತಮಗೆ ಇಷ್ಟ ಬಂದ ಕಡೆ ವಾಹನ ತಿರುಗಿಸುವುದು, ತಪ್ಪು ದಾರಿಯಲ್ಲಿ ವಾಹನ ಚಲಾಯಿಸುವುದು, ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುವುದು, ಸೀಟ್ ಬೆಲ್ಟ್ ಇಲ್ಲದೇ ಕಾರು ಚಲಾಯಿಸುವುದು, ತ್ರಿಬಲ್ ರೈಡಿಂಗ್, ಅಪ್ರಾಪ್ತ ವಯಸ್ಕರು ವಾಹನ ಓಡಿಸುವುದು, ಡಿಎಲ್, ಎಲ್ ಎಲ್ ಇಲ್ಲದೇ ಬೈಕ್, ಕಾರು ಸೇರಿದಂತೆ ಇತರೆ ವಾಹನಗಳನ್ನು ಓಡಿಸುವುದು ಸೇರಿದಂತೆ ಇತರೆ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಲಾಯಿಸಿದರೆ ಕಡ್ಡಾಯವಾಗಿ ದಂಡ, ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *