
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಪಟ್ಟಣದಲ್ಲಿರುವ ಆಕಾಶ್ ಗ್ರೂಪ್ ಆಫ್ ಇನ್ಸಿಸ್ಟೂಷನ್ ವತಿಯಿಂದ ಮ್ಯಾರಾಥಾನ್ ಓಟ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮವು ಆಕಾಶ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಮುನಿರಾಜು ಅವ್ರು ಚಾಲನೆ ನೀಡಿದ್ರು. ಮ್ಯಾರಾಥಾನ್ ಕ್ರೀಡೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಣ ಸಿಬ್ಬಂದಿ ಮತ್ತು ಶಿಕ್ಷಣೇತರ ಸಿಬ್ಬಂದಿ ಭಾಗವಹಿಸಿದ್ರು. ಕಾಲೇಜು ವಿದ್ಯಾರ್ಥಿಗಳು ಮ್ಯಾರಾಥಾನ್ ನಲ್ಲಿ ಪಾಲ್ಗೊಂಡಿರುವುದು ಖುಷಿ ಆಗಿದೆ. ದೈಹಿಕವಾಗಿ ಸಧೃಢವಾಗಿರಲು ಇಂತಹ ಕಾರ್ಯಕ್ರಮಗಳು ಸಹಾಯ ಮಾಡುತ್ತದೆ ಎಂದು ಆಕಾಶ್ ಗ್ರೂಪ್ ಆಫ್ ಇನ್ಸಿಸ್ಟೂಷನ್ ನ ಆಡಳಿತ ಮಂಡಳಿ ತಿಳಿಸಿದೆ.