ಅಸ್ಪೃಶ್ಯ ಜನಾಂಗಕ್ಕೆ ಹೆಚ್.ಡಿ.ಕೆ ಅವಮಾನ; ನಗರದ ಪ್ರವಾಸಿಮಂದಿರದಲ್ಲಿ ಛಲವಾದಿ ಮಹಾಸಭಾ ಆಕ್ರೋಶ

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಜೆಡಿಎಸ್ ಅಧಿಕಾರಕ್ಕೆ ಬಂದರೆ ನಾನೇ ಸಿಎಂ ಆಗಬಹುದು ಎಂಬ ಹೇಳಿಕೆಗೆ ನ.27ರಂದು ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಂಚರಥ ಯಾತ್ರೆಯ ಸಂದರ್ಭದಲ್ಲಿ ಆಂಗ್ಲ ಭಾಷೆಯ ಖಾಸಗಿ ಚಾನೆಲ್ ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಸಿಎಂ ಇಬ್ರಾಹಿಂ ಅವರು ಸಿಎಂ ಏಕೆ ಆಗಬಾರದು ಅವರೇನು ಅಸ್ಪೃಶ್ಯರೆ ಎಂದು ಪ್ರಶ್ನೆ ಮಾಡುವ ಮೂಲಕ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳಿಗೆ ಅವಮಾನ ಮಾಡಿರುತ್ತಾರೆ. ಇದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ನೋವಿನ ವಿಚಾರವಾಗಿದೆ ಎಂದು ಕುಮಾರಸ್ವಾಮಿಯವರ ಅಸ್ಪೃಶ್ಯತೆ ಎಂಬ ಪದ ಬಳಕೆ ವಿರುದ್ಧ  ದೊಡ್ಡಬಳ್ಳಾಪುರದ ಛಲವಾಧಿ ಮಹಾಸಭಾ  ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿ ನಡೆಸಿದರು.

ಇಂತಹ ಹೇಳಿಕೆ ಅಸ್ಪೃಶ್ಯತೆ ಆಚರಣೆಯಲ್ಲಿರುವುದು ಸಾಬೀತು ಮಾಡಿದೆ, ಜೆಡಿಎಸ್ ಪಕ್ಷದ ಜಾತ್ಯತೀತ ಪದವನ್ನ ತೆಗೆದು ಜಾತಿವಾದಿ ಜೆಡಿಎಸ್ ಪಕ್ಷವೆಂದು ಹೆಸರು ಬದಲಾಯಿಸಿಕೊಳ್ಳಿ, ಕುಮಾರಸ್ವಾಮಿಯವರ ಅವಹೇಳನಕಾರಿ ಹೇಳಿಕೆ ಕಾನೂನು ಬಾಹಿರವಾಗಿದೆ, ಅವರು ಬೇಷರತ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು, ಅಲ್ಲದೆ ಕುಮಾರಸ್ವಾಮಿಯವರ ವಿರುದ್ದ ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸ್ ಉಪ ನಿರೀಕ್ಷರ ಕಚೇರಿಯಲ್ಲಿ  ದೂರು ನೀಡಿದರು.

Leave a Reply

Your email address will not be published. Required fields are marked *