ಅವಕಾಶವಾದಿಗಳಿಗೆ ಕಾಂಗ್ರೆಸ್ ಪಕ್ಷದಲ್ಲಿ ಅವಕಾಶವಿಲ್ಲ- ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ

ಅವಕಾಶವಾದಿಗಳಿಗೆ ಕಾಂಗ್ರೆಸ್ ಪಕ್ಷದಲ್ಲಿ ಅವಕಾಶವಿಲ್ಲ. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಯಾರು ಬೇಕಾದರೂ ಸೇರ್ಪಡೆಯಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದವರಲ್ಲಿ ಕೆಲವರು ಮತ್ತೆ ಕಾಂಗ್ರೆಸ್ ಬಾಗಿಲು ತಟ್ಟಿದ್ದಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅವರು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಅವಕಾಶಗಳಿಗೋಸ್ಕರ ಕಾಂಗ್ರೆಸ್ ಪಕ್ಷವನ್ನ ಸೇರುವವರಿಗೆ ಪಕ್ಷದಲ್ಲಿ ಎಂದೂ ಮಣೆ ಹಾಕುವುದಿಲ್ಲ. ಅವರ ಅನುಕೂಲ ಸಿದ್ಧವಾಗಿ ನಮ್ಮ ಪಕ್ಷ ಇಲ್ಲ. ಪಕ್ಷಕ್ಕೆ ಬಂದ ಮೇಲೆ ಸಿದ್ಧಾಂತದ ಮೇಲೆ ನಿಲ್ಲ ಬೇಕಾಗುತ್ತದೆ. ಬರೀ ಅವಕಾಶಕ್ಕೆ ಬರೋವವರಿಗೆ ಪಕ್ಷದಲ್ಲಿ ಸ್ಥಾನ ಇಲ್ಲ. ಸದ್ಯ ನನ್ನ ಸಂಪರ್ಕದಲ್ಲಿ ಯಾವುದೇ ಬಿಜೆಪಿ-ಜೆಡಿಎಸ್ ಶಾಸಕರು ಇಲ್ಲ ಎಂದರು.

ಕಾಂಗ್ರೆಸ್ ಸರ್ಕಾರ 6 ತಿಂಗಳೊಳಗೆ ಬೀಳುತ್ತದೆ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಅವರಿಗೆ ಮುಖ್ಯಮಂತ್ರಿ ಆಗೋ ಆತುರ, ಅವರು ಈ ಜನ್ಮದಲ್ಲಿ ಮುಖ್ಯಮಂತ್ರಿ ಆಗೋ ಭರವಸೆ ಇಲ್ಲ. ಅವರನ್ನು ಅವರ ಪಕ್ಷದಲ್ಲೇ ಗಂಭೀರವಾಗಿ ತೆಗೆದುಕೊಂಡಿಲ್ಲ, ಇನ್ನು ನಾವು ತೆಗೆದುಕೊಳ್ಳಲಾಗುತ್ತದೆಯೇ..? ಇದೆಲ್ಲಾ ಊಹಾಪೋಹಗಳು ಅಷ್ಟೇ ಎಂದು ತಿಳಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಒಕ್ಕೂಟವನ್ನು ಮಣಿಸುವ ಉದ್ದೇಶದಿಂದ ವಿರೋಧ ಪಕ್ಷಗಳು ತಮ್ಮ ಒಕ್ಕೂಟಕ್ಕೆ ಇಂಡಿಯನ್​ ನ್ಯಾಷನಲ್ ಡೆವೆಲಪ್​ಮೆಂಟಾಲ್​​ ಇನ್ ಕ್ಲೂಸಿವ್​ ಅಲಯನ್ಸ್ (Indian National Developmental Inclusive Alliance)​ ಎಂದು ನಾಮಕರಣ ಮಾಡಿದ್ದು, ಈ 26 ಪಕ್ಷಗಳ ನಾಯಕರು ಮೋದಿಯನ್ನು ಸೋಲಿಸಲಿಕ್ಕೆ ಒಗ್ಗಟ್ಟಿನಿಂದ ಕೆಲಸಮಾಡಲಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!