ಅಲ್ಪಸಂಖ್ಯಾತ ನಿಗಮದಿಂದ ವಾಹನಗಳ ವಿತರಣೆ

ಕೋಲಾರ: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಮಂಗಳವಾರ ನಗರದ ಶಾಸಕರ ಕಛೇರಿ ಬಳಿ ಫಲಾನುಭವಿಗಳಿಗೆ ಶಾಸಕ ಕೊತ್ತೂರು ಜಿ.ಮಂಜುನಾಥ್ ಫಲಾನುಭವಿಗಳಿಗೆ ವಾಹನವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೊತ್ತೂರು ಮಂಜುನಾಥ್, ರಾಜ್ಯ ಸರಕಾರದ ವಿವಿಧ ನಿಗಮಗಳಿಂದ ನಿರುದ್ಯೋಗ ಯುವಕರಿಗೆ ಅಗತ್ಯತೆಗೆ ಅನುಗುಣವಾಗಿ ವಾಹನಗಳನ್ನು ಕೊಡುವ ಕೆಲಸವನ್ನು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಇಲಾಖೆಗಳಿಂದ ಅರ್ಹರನ್ನು ಗುರುತಿಸಿ ಇಲಾಖೆಗಳ ಅನುಸಾರವಾಗಿ ಹೆಚ್ಚಿನ ವಾಹನಗಳನ್ನು ವಿತರಿಸಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ರನೀರಾ ತಾಜ್, ರಾಜ್ಯ ಮೈನಾರಿಟಿ ನಿಗಮ ನಿರ್ದೇಶಕ, ಅಬ್ದುಲ್ ಖಯ್ಯಾಮ್, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಟ್ರಾಕ್ಟರ್ ಮುಸ್ತಫಾ, ಕಠಾರಿಪಾಳ್ಯ ಗಂಗಣ್ಣ, ಮುಂತಾದವರು ಇದ್ದರು.

Leave a Reply

Your email address will not be published. Required fields are marked *