ಅರಳುಮಲ್ಲಿಗೆ ವ್ಯವಸಾಯ ಸಹಕಾರ ಸಂಘಕ್ಕೆ ನೂತನ ನಿರ್ದೇಶಕರ ಆಯ್ಕೆ

ದೊಡ್ಡಬಳ್ಳಾಪುರ: ಅರಳುಮಲ್ಲಿಗೆ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ 12ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ ಹನ್ನೊಂದು ಸ್ಥಾನಗಳಿಗೆ ಕೆಲವು ದಿನಗಳ ಹಿಂದೆ ಚುನಾವಣೆ ನಡೆದು ತಾಂತ್ರಿಕ ಕಾರಣಗಳಿಂದ ಮಾ.4ರಂದು ಮತ ಎಣಿಕೆ ನಡೆದಿದ್ದು ಅದರಲ್ಲಿ ಸಾಮಾನ್ಯ ವರ್ಗದಿಂದ ಚಿಕ್ಕೇಗೌಡ ಸಿ, ಮಹೇಶ್ ಕೆ. ಏನ್., ಲಕ್ಷ್ಮೀನಾರಾಯಣ ಜಿ. ಪಿ., ಜಲೆಂದ್ರ, ರಾಜಣ್ಣ ಎ.ಹಿಂದುಳಿದ ಎ ವರ್ಗದಿಂದ ಲಕ್ಷ್ಮೀನಾರಾಯಣ, ಹಿಂದುಳಿದ ಬಿ. ವರ್ಗದಿಂದ ಅರುಣ್ ಕುಮಾರ್ ಎ. ಪಿ.ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಅಶ್ವಥ್ ನಾರಾಯಣ್,ಮಹಿಳಾ ಮೀಸಲು ಸ್ಥಾನದಿಂದ ಮಂಜಮ್ಮ, ಉಮಾದೇವಿ, ಪರಿಶಿಷ್ಟ ಪಂಗಡದ ಸ್ಥಾನಕ್ಕೆ ಕೊಂಡ ತಿಮ್ಮಯ್ಯ.. ಅವಿರೋಧ ಆಯ್ಕೆ. ಸಾಲಗಾರರಲ್ಲದ ಕ್ಷೇತ್ರದಿಂದ ವೆಂಕಟೇಶ್ ಎಂ. ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಶಿವಕುಮಾರ್ ವಿ. ವಿದ್ಯಕ್ತವಾಗಿ ಘೋಷಿಸಿದ್ದಾರೆ.

ತೀರಾ ಗಮನ ಸೆಳೆದಿದ್ದ ಈ ಚುನಾವಣೆಯಲ್ಲಿ ದಳ ಬಿಜೆಪಿ ಮೈತ್ರಿಕೂಟ ಬೆಂಬಲಿತ ಎಂಟು ಸ್ಥಾನ, ಕಾಂಗ್ರೆಸ್ ಬೆಂಬಲಿತ ಮೂರು ಅಭ್ಯರ್ಥಿಗಳು ಹಾಗೂ ಪಕ್ಷೇತರ ಮಹಿಳಾ ಅಭ್ಯರ್ಥಿ ಆಯ್ಕೆಯಾಗಿದ್ದು, ಮೈತ್ರಿಕೂಟ ಸಹಕಾರ ಸಂಘದ ಅಧಿಕಾರ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಈ ಸಂದರ್ಭದಲ್ಲಿ ಮೈತ್ರಿ ಕೂಟದ ಮುಖಂಡರಾದ ಎಸ್. ಎಂ. ಗೊಲ್ಲಳ್ಳಿ ಮಲ್ಲೇಶ್, ಆಲಹಳ್ಳಿ ಚಂದ್ರಶೇಖರ್, ಕುಂಟನಹಳ್ಳಿ ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ ಅವಧಿಯ ಆಡಳಿತ ಮಂಡಳಿಯ ದುರಾಡಳಿತಕ್ಕೆ ಬೇಸತ್ತು ಮತದಾರರು ನಮ್ಮ ಮೈತ್ರಿ ಕೂಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಂದಿನ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಶಾಸಕ ಧೀರಜ್ ಮುನಿರಾಜು ಹಾಗೂ ದಳದ ಮುಖಂಡರಾದ ಮುನೇಗೌಡರ ನೇತೃತ್ವದಲ್ಲಿ ಚುನಾವನೆಗಳನ್ನು ಎದುರಿಸುತ್ತೇವೆ. ಇಂದಿನ ಚುನಾವಣಾ ತೀರ್ಪು ಮುಂದಿನ ಚುನಾವಣೆಗಳು ಮೈತ್ರಿ ಪಕ್ಷಕ್ಕೆ ಶುಭ ಸೂಚನೆ ಸಿಕ್ಕಂತಾಗಿದೆ. ನಮ್ಮ ಮೈತ್ರಿ ಕೂಟಕ್ಕೆ ಮತ ನೀಡಿದ ಎಲ್ಲಾ ಮತದಾರ ಬಂದುಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಹೇಳಿದರು.

ಆಲಹಳ್ಳಿ ಗೋಪಾಲ ಕೃಷ್ಣ ಬೆಂಬಲಿತ ಪಕ್ಷೇತರ ಮಹಿಳಾ ವಿಜೇತ ಅಭ್ಯರ್ಥಿ ಉಮಾದೇವಿ ಮಾತನಾಡಿ, ನನ್ನನ್ನು ಸಹಕಾರ ಸಂಘದ ವ್ಯಾಪ್ತಿಯ ಎಲ್ಲಾ ಗ್ರಾಮಗಳ ರೈತರು ಪಕ್ಷಾತೀತವಾಗಿ ಗೆಲ್ಲಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸಹಕಾರ ಸಂಘದಿಂದ ಎಲ್ಲಾ ರೈತಬಂದುಗಳಿಗೂ ಸಾಲ ಕೊಡಿಸುವುದು ಸೇರಿದಂತೆ ಸದಸ್ಯರ ಸಮಸ್ಯೆಗಳಿಗೆ ನನ್ನ ಕೈಲಾದ ಸಹಕಾರ ನೀಡಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನನ್ನು ಚುನಾವಣೆಯಲ್ಲಿ ಬೆಂಬಲಿಸಿದ ಆಲಹಳ್ಳಿ ಗೋಪಾಲಕೃಷ್ಣ ಹಾಗೂ ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡಿ ಗೆಲ್ಲಿಸಿದ ಎಲ್ಲಾ ಮತದಾರ ಬಂದುಗಳಿಗೆ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!