ದೊಡ್ಡಬಳ್ಳಾಪುರ ನಗರದ ಅರಣ್ಯ ಇಲಾಖೆ ಸಮೀಪದಲ್ಲೇ ಹೆಜ್ಜೇನು ದಾಳಿ ನಡೆಸಿದ್ದು ಹಲವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಂದು ಮಧ್ಯಾಹ್ನ ವೇಳೆ ಹೆಜ್ಜೇನು ದಾಳಿ ಆರಂಭವಾಗಿದ್ದು, ಆಸ್ಪತ್ರೆಗೆ ಹೋಗಿ ಬರುವವರ ರೋಗಿಗಳು, ವೃದ್ಧನ ಮೇಲೆ ಹೆಜ್ಜೇನು ದಾಳಿ ನಡೆಸಿವೆ.
ಹೆಜ್ಜೇನು ದಾಳಿಯಿಂದ ಸುಮಾರು ನಾಲ್ಕು ಮಂದಿ ಗಾಯಗೊಂಡಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಜ್ಜೇನು ಭೀತಿಯಿಂದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಓಡಾಡುವವರು, ಆಸ್ಪತ್ರೆ, ಮೆಡಿಕಲ್ ಶಾಪ್ ಗಳಿಗೆ ಬರುವವರು ಭಯಪಡುವ ಸ್ಥಿತಿ ಉಂಟಾಗಿತ್ತು.
ಇಲ್ಲಿನ ಹೆಜ್ಜೇನು ಗೂಡುಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಯಾವ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿ ಮೆರೆದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.