ತಂದೆ-ತಾಯಿ ಮರಣ ಹೊಂದಿದ ನಂತರ ಮಾನಸಿಕವಾಗಿ ಖಿನ್ನತೆಗೆ ಒಳಗಾದ ಯುವಕ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ತಾಲೂಕಿನ ಗೌಡನಕುಂಟೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಮೃತ ಯುವಕನನ್ನು ಕೃಷ್ಣರಾಜ್(26) ಎಂದು ಗುರುತಿಸಲಾಗಿದೆ.
ಮೃತ ಕೃಷ್ಣರಾಜ್ ನವೆಂಬರ್ 21ರಂದು ಅಯ್ಯಪ್ಪ ಮಾಲೆ ಧರಿಸಿದ್ದು, ನ.29 ರಂದು ಶಬರಿ ಮಲೆಗೆ ತೆರಳಬೇಕಿತ್ತು. ಆದರೆ ಶನಿವಾರ ರಾತ್ರಿ ಭಜನೆ ಮುಗಿಸಿ ಮಲಗಿದವರು, ಬೆಳಗ್ಗೆ ದೇವಾಲಯದ ಸಮೀಪದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಇತ್ತೀಚೆಗೆ ಮೃತ ಕೃಷ್ಣರಾಜ್ ತಂದೆ ತಾಯಿ ಇಬ್ಬರು ಮರಣ ಹೊಂದಿದ್ದು, ಪೋಷಕರನ್ನು ಕಳೆದುಕೊಂಡ ನಂತರ ಒಬ್ಬೊಂಟಿಯಾಗುತ್ತಾನೆ. ಇದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾನೆ. ತೀವ್ರ ಜಿಗುಪ್ಸೆಗೊಂಡ ಯುವಕ ನೇಣಿಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ…
ಸ್ಥಳಕ್ಕೆ ಹೊಸಹಳ್ಳಿ ಠಾಣೆ ಸಬ್‌ಇನ್ಸೆಕ್ಟರ್ ರವಿಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.