ದೊಡ್ಡಬಳ್ಳಾಪುರ (ಡಿ.4): ತಾಲೂಕಿನ ತೂಬಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಯ್ಯಪ್ಪಸ್ವಾಮಿ ಭಜನಾ ಮಂದಿರ ಬುಧವಾರ ಉದ್ಘಾಟನೆಗೂಂಡಿತು.
ಗಣಪತಿ ಹೋಮ, ಸ್ವಸ್ತಿ ವಾಚನ, ಪಂಚಗವ್ಯ,ಕಳಸ ಸ್ಥಾಪನೆ ಸೇರಿದಂತೆ ಅಯ್ಯಪ್ಪ ಸಹಿತ ವಾಸ್ತು ಬಲಿ ಪ್ರದಾನ ಪೂರ್ಣಾಹುತಿ ಪೂಜೆಗಳು ನಡೆದವು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಭಾಗವಹಿಸಿ ಮಾತನಾಡಿ,
ತೂಬಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿ ವರ್ಷ ಸುಮಾರು 500-600 ಭಕ್ತರು ಅಯ್ಯಪ್ಪ ಸ್ವಾಮಿ ವ್ರತವನ್ನು ಮಾಡುತ್ತಿದ್ದು, ವ್ರತದ 45 ದಿನದ ಅವಧಿಯಲ್ಲಿ ಅವರಿಗೆ ವಾಸ್ತವ್ಯಕ್ಕೆ ಸರಿಯಾದ ಸ್ಥಳದ ಕೊರತೆ ಕಾಡುತ್ತಿತ್ತು, ಆ ದಿಶೆಯಲ್ಲಿ ಈ ಭಜನಾ ಮಂದಿರ ಮಾಡಲಾಗಿದ್ದು ಮಾಲಾಧಾರಿಗಳಿಗೆ ಇನ್ನೂ ಮುಂದೆ ಅನುಕೂಲವಾಗುತ್ತದೆ ಎಂದರು.
ಅಯ್ಯಪ್ಪ ಭಕ್ತರು ಆಗಮಿಸಿ ಹೂ ಹಣ್ಣು-ಕಾಯಿ ಸೇವೆ, ದವಸ ಧಾನ್ಯ ಸೇವೆ ಮುಂತಾದವುಗಳನ್ನು ಸಮರ್ಪಿಸಿದರು. ವಿಶೇಷ ಅಲಂಕಾರದೊಂದಿಗೆ ಶ್ರೀ ಅಯ್ಯಪ್ಪಸ್ವಾಮಿಯ ಪಂಚಲೋಹ ಮೂರ್ತಿ ಕಂಗೊಳಿಸುತ್ತಿತ್ತು ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು.
ಈ ವೇಳೆ ಗುರುಸ್ವಾಮಿ ಶಿವಾನಂದ, ಪುರುಷೋತ್ತಮ್, ಪುಟ್ಟಣ್ಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಪ್ಪಯ್ಯಣ್ಣ, ಮುಖಂಡರಾದ ಕನಕದಾಸ, ಸುಬ್ರಹ್ಮಣ್ಯ, ಉದಯ ಆರಾಧ್ಯ ಹಾಗೂ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹಾಜರಿದ್ದರು.
ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು…
ದೂಡ್ಡಬಳ್ಳಾಪುರದ ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಕಡೇ ಕಾರ್ತೀಕ ಸೋಮವಾರ ಪ್ರಯುಕ್ತ ಈ ದಿನ ಬೆಳಿಗ್ಗೆ ಗಣಪತಿ…
ದೊಡ್ಡಬಳ್ಳಾಪುರ: ನಾಳೆ (ನ.18) ನಗರದ ಹೊರವಲಯದಲ್ಲಿರುವ 66/11ಕಿವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ತಾಲೂಕಿನ ಹಲವೆಡೆ ವಿದ್ಯುತ್…
18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…
ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…
ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…