ಅಮೆರಿಕಾದ ಮಿಸಿಸಿಪ್ಪಿಯಲ್ಲಿ ಭೀಕರ ಸುಂಟರಗಾಳಿ; ಕನಿಷ್ಠ 26 ಮಂದಿ ಸಾವು

ಅಮೆರಿಕದ ದಕ್ಷಿಣ ರಾಜ್ಯ ಮಿಸಿಸಿಪ್ಪಿಯಲ್ಲಿ ಬೀಸಿದ ಭೀಕರ ಸುಂಟರಗಾಳಿಗೆ ಅಪಾರ ನಷ್ಟ ಸಂಭವಿಸಿದ್ದು ಅಲ್ಲಿನ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಂಟರಗಾಳಿಗೆ ಕನಿಷ್ಠ 26 ಮಂದಿ ಮೃತಪಟ್ಟಿದ್ದಾರೆ‌ ಎಂದು ಮೂಲಗಳಿಂದ‌ ತಿಳಿದುಬಂದಿದೆ.

ಮಿಸ್ಸಿಸ್ಸಿಪ್ಪಿ ರಾಜ್ಯದಲ್ಲಿ ಸುಮಾರು 160 ಕಿಮೀ ವೇಗದಲ್ಲಿ ಬೀಸಿದ ಸುಂಟರಗಾಳಿ. ಭೀಕರ ಸುಂಟರಗಾಳಿಯಿಂದಾಗಿ ಅಪಾರ ಸಾವು ನೋವಿನ ಜೊತೆಗೆ, ಆಸ್ತಿಪಾಸ್ತಿ ನಷ್ಟವಾಗಿದೆ. ಈ ಹಿನ್ನೆಲೆ ಮಿಸಿಸಿಪ್ಪಿ ರಾಜ್ಯದ ಗವರ್ನರ್‌ ಟೇಟ್‌ ರೀವ್ಸ್‌ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

ಅಬ್ಬರದ ಚಂಡಮಾರುತದೊಂದಿಗೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಭೀಕರ ಸುಂಟರಗಾಳಿಗೆ ಹಲವೆಡೆ ಕಟ್ಟಡಗಳು ಕುಸಿದು ಬಿದ್ದಿದ್ದು, ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ವಾಹನಗಳು ಜಖಂಗೊಂಡಿವೆ.

ವಿದ್ಯುತ್ ಸಂಪರ್ಕ ಕಡಿತದಿಂದಾಗಿ ಅಲ್ಲಿನ‌ ನಿವಾಸಿಗಳಿಗೆ ತೊಂದರೆ ಎದುರಾಗಿದೆ. ಮಿಸಿಸಿಪ್ಪಿಯ ರಾಲಿಂಗ್ ಫಾರ್ಕ್ ಪಟ್ಟಣದಲ್ಲಿ 2,000ದಷ್ಟು ಮಂದಿ ಮನೆ ಕಳೆದುಕೊಂಡಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಘಾತ ವ್ಯಕ್ತಪಡಿಸಿದ್ದು, ಜನರ ರಕ್ಷಣೆಗಾಗಿ ಎಲ್ಲ ರೀತಿಯ ನೆರವು ಹಾಗೂ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Ramesh Babu

Journalist

Recent Posts

ಅಂತರರಾಜ್ಯ ಗಾಂಜಾ ಮಾರಾಟ ಜಾಲ ಪತ್ತೆ: ಮೂವರ ಬಂಧನ: 7 ಲಕ್ಷ ರೂ. ಮೌಲ್ಯದ ಗಾಂಜಾ, ಬೈಕ್ ವಶ

ದೊಡ್ಡಬಳ್ಳಾಪುರ: ಖಾಸಗಿ ಕಾಲೇಜಿನ ಸಮೀಪದ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದರೆಂಬ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ…

13 hours ago

ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಬೇಟೆ: 28 ಕೋಟಿ ಗಾಂಜಾ, 1.75 ಕೋಟಿ ಚಿನ್ನ ಜಪ್ತಿ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಸರಣಿ ಕಾರ್ಯಾಚರಣೆಯಲ್ಲಿ 28 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ…

13 hours ago

ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆ ಕಲಿಸಬೇಕು ಎಂಬುದು ಆಧುನಿಕ ಕಾಲದ ಬಹುದೊಡ್ಡ ಆಶಯ….

ಪರಿವರ್ತನೆಯ ಹಾದಿಯಲ್ಲಿ........ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆ ಕಲಿಸಬೇಕು ಎಂಬುದು ಆಧುನಿಕ ಕಾಲದ ಬಹುದೊಡ್ಡ ಆಶಯ. ಮಾಧ್ಯಮಗಳಲ್ಲೂ, ಅನೇಕ…

22 hours ago

ಸೆ. 28 ರಂದು ಮಾಕಳಿ ದುರ್ಗಾ ಬೆಟ್ಟದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಸೆಪ್ಟೆಂಬರ್ 28 ರಂದು ದೊಡ್ಡಬಳ್ಳಾಪುರ ತಾಲ್ಲೂಕು ಮಾಕಳಿ ದುರ್ಗಾ ಬೆಟ್ಟದಲ್ಲಿ ಆಯೋಜಿಸಲಾಗುತ್ತಿದ್ದು ಅಗತ್ಯ ಸಿದ್ಧತೆ ಕೈಗೊಳ್ಳಲು…

23 hours ago

ಅಲ್ಝೈಮರ್‌ ಬಗ್ಗೆ ಜಾಗೃತಿ ಅಗತ್ಯ: ಪ್ರೇಮ್‌ಕುಮಾರ್ ರಾಜ್

ದೊಡ್ಡಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಸ್ಮರಣಶಕ್ತಿ ಕುಂಠಿತಗೊಳ್ಳುವ ಅಲ್ಝೈಮರ್ ಹಾಗೂ ಡಿಮೆನ್ಶಿಯಾ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಈ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ…

2 days ago

ಯುಕೆಪಿ-3 ಭೂಸ್ವಾಧೀನ ಪ್ರಕ್ರಿಯೆಗೆ ಚುರುಕು—ಮುಳುಗಡೆ ಸಂತ್ರಸ್ತರಿಗೆ ಆದ್ಯತೆಯ ಪರಿಹಾರ

ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಹಂತ-1 ಮತ್ತು 2ರ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಆದ್ಯತೆಯ ಮೇರೆಗೆ ಪರಿಹಾರ ನೀಡಬೇಕು ಹಾಗೂ…

2 days ago