ಅಮೆರಿಕಾದ ಮಿಸಿಸಿಪ್ಪಿಯಲ್ಲಿ ಭೀಕರ ಸುಂಟರಗಾಳಿ; ಕನಿಷ್ಠ 26 ಮಂದಿ ಸಾವು

ಅಮೆರಿಕದ ದಕ್ಷಿಣ ರಾಜ್ಯ ಮಿಸಿಸಿಪ್ಪಿಯಲ್ಲಿ ಬೀಸಿದ ಭೀಕರ ಸುಂಟರಗಾಳಿಗೆ ಅಪಾರ ನಷ್ಟ ಸಂಭವಿಸಿದ್ದು ಅಲ್ಲಿನ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಂಟರಗಾಳಿಗೆ ಕನಿಷ್ಠ 26 ಮಂದಿ ಮೃತಪಟ್ಟಿದ್ದಾರೆ‌ ಎಂದು ಮೂಲಗಳಿಂದ‌ ತಿಳಿದುಬಂದಿದೆ.

ಮಿಸ್ಸಿಸ್ಸಿಪ್ಪಿ ರಾಜ್ಯದಲ್ಲಿ ಸುಮಾರು 160 ಕಿಮೀ ವೇಗದಲ್ಲಿ ಬೀಸಿದ ಸುಂಟರಗಾಳಿ. ಭೀಕರ ಸುಂಟರಗಾಳಿಯಿಂದಾಗಿ ಅಪಾರ ಸಾವು ನೋವಿನ ಜೊತೆಗೆ, ಆಸ್ತಿಪಾಸ್ತಿ ನಷ್ಟವಾಗಿದೆ. ಈ ಹಿನ್ನೆಲೆ ಮಿಸಿಸಿಪ್ಪಿ ರಾಜ್ಯದ ಗವರ್ನರ್‌ ಟೇಟ್‌ ರೀವ್ಸ್‌ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

ಅಬ್ಬರದ ಚಂಡಮಾರುತದೊಂದಿಗೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಭೀಕರ ಸುಂಟರಗಾಳಿಗೆ ಹಲವೆಡೆ ಕಟ್ಟಡಗಳು ಕುಸಿದು ಬಿದ್ದಿದ್ದು, ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ವಾಹನಗಳು ಜಖಂಗೊಂಡಿವೆ.

ವಿದ್ಯುತ್ ಸಂಪರ್ಕ ಕಡಿತದಿಂದಾಗಿ ಅಲ್ಲಿನ‌ ನಿವಾಸಿಗಳಿಗೆ ತೊಂದರೆ ಎದುರಾಗಿದೆ. ಮಿಸಿಸಿಪ್ಪಿಯ ರಾಲಿಂಗ್ ಫಾರ್ಕ್ ಪಟ್ಟಣದಲ್ಲಿ 2,000ದಷ್ಟು ಮಂದಿ ಮನೆ ಕಳೆದುಕೊಂಡಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಘಾತ ವ್ಯಕ್ತಪಡಿಸಿದ್ದು, ಜನರ ರಕ್ಷಣೆಗಾಗಿ ಎಲ್ಲ ರೀತಿಯ ನೆರವು ಹಾಗೂ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *