ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಕ್ವಾಲಿಟಿ ಸಮಿಟ್- ರಕ್ತಪರೀಕ್ಷೆ ಮೂಲಕ ಹೃದಯ ವೈಫಲ್ಯವನ್ನು ಪತ್ತೆಹಚ್ಚಿ, ತ್ವರಿತ ಚಿಕಿತ್ಸೆ ನೀಡುವ ಸಾಧ್ಯತೆ ಕುರಿತು ಪ್ರಬಂಧ ಮಂಡಿಸಿದ ವೈದ್ಯ ಡಾ.ಅರ್ಜುನ್

ಅಕ್ಟೋಬರ್ 14 ಮತ್ತು 15 ರಂದು ಅಮೆರಿಕಾದ ಕೊಲೊರಾಡೋ ರಾಜ್ಯದ ಡೆನ್‌ವರ್‌ನಲ್ಲಿ ನಡೆದ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಕ್ವಾಲಿಟಿ ಸಮಿಟ್ 2025 ನಲ್ಲಿ ಫ್ಯಾಕಲ್ಟಿಯಾಗಿ ನನ್ನ ಸಂಶೋಧನಾ ಪ್ರಬಂಧವನ್ನು ಪ್ರಸ್ತುತಪಡಿಸುವ ಅವಕಾಶ ದೊರಕಿತು ಎಂದು ದೊಡ್ಡಬಳ್ಳಾಪುರದ ಹೀಲ್ ಆಸ್ಪತ್ರೆ ವೈದ್ಯ ಡಾ.ಅರ್ಜುನ್ ತಿಳಿಸಿದರು.

ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ಒಂದು ರಕ್ತಪರೀಕ್ಷೆಯ ಮೂಲಕ ಹೃದಯ ವೈಫಲ್ಯವನ್ನು ಪತ್ತೆಹಚ್ಚಿ, ತ್ವರಿತವಾಗಿ ಚಿಕಿತ್ಸೆ ನೀಡುವ ಸಾಧ್ಯತೆ ಕುರಿತು ಈ ಪ್ರಬಂಧವನ್ನು ಪ್ರಸ್ತುತಪಡಿಸಲಾಯಿತು ಎಂದರು.

ಈ ಫಲಿತಾಂಶಗಳನ್ನು ಜಗತ್ತಿಗೆ ತಿಳಿಸಿ, ಪ್ರಪಂಚದ ಎಲ್ಲ ಗ್ರಾಮೀಣ ಭಾಗದ ಜನರಿಗೆ ಈ ಸೌಲಭ್ಯ ಲಭ್ಯವಾಗಬೇಕೆಂಬ ಉದ್ದೇಶದಿಂದ, ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಪತ್ರಿಕೆಯಲ್ಲಿ ಈ ವಾರ ಈ ಲೇಖನ ಪ್ರಕಟಗೊಂಡಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!