ಕೋಲಾರ: ಸಂವಿಧಾನ ರಚನೆಕಾರ ಅಂಬೇಡ್ಕರ್ ಕುರಿತು ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಅವಹೇಳನಕಾರಿ ಹೇಳಿಕೆ ಹಾಗೂ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಅಶ್ಲೀಲ ಪದ ಬಳಕೆಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಖಂಡಿಸಿದ ಅವರು ಬಿಜೆಪಿ ಮತ್ತು ಆರ್.ಎಸ್.ಎಸ್ ಸಂಘಪರಿವಾರದವರು ಪದೇ ಪದೇ ತಮ್ಮ ಅನಾಗರಿಕ ಸಂಸ್ಕೃತಿಯನ್ನು ತೋರಿಸುತ್ತಿದ್ದಾರೆ, ದೇಶದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರ ಬಹುಮುಖ್ಯವಾಗಿದೆ ಅಂತಹ ಪಕ್ಷದ ಹಿರಿಯ ಮುಖಂಡರಿಗೆ ಒಂದಲ್ಲ ಒಂದು ರೀತಿಯಲ್ಲಿ ಅವಹೇಳನಕಾರಿ ಭಾಷೆಯನ್ನು ಬಳಸುತ್ತಾ ಬಂದಿರುವ ಅವರು ತಮ್ಮ ಹರುಕು ಬಾಯಿಯನ್ನು ಮತ್ತೆ ಅವಾಚ್ಯಕ ಶಬ್ದಗಳಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬಳಸಿರುವುದು ಇಡಿ ಸ್ತ್ರೀ ಕುಲಕ್ಕೆ ಮಾಡಿದ ಅವಮಾನವಾಗಿದೆ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರವು ಎಂಎಲ್ಸಿ ಸಿ.ಟಿ ರವಿ ಅವರನ್ನು ಕಾನೂನು ಪ್ರಕಾರ ಬಂಧಿಸಿ ಬಿಡುಗಡೆ ಮಾಡಿದ್ದು ಸರಿಯಿದ್ದು ಬಿಜೆಪಿ ಕುಟುಂಬದ ಹೆಣ್ಣು ಮಕ್ಕಳಿಗೆ ಏನಾದರೂ ಈ ರೀತಿಯಲ್ಲಿ ಅವಮಾನ ಮಾಡಿದ್ದರೆ ಸುಮ್ಮನೆ ಇರತ್ತಾ ಇದ್ದರಾ ಕಾನೂನು ಎಲ್ಲರಿಗೂ ಒಂದೇ ಇದ್ದು ವಿನಾಕಾರಣ ಬಿಜೆಪಿ ಸರಕಾರದ ವಿರುದ್ದ ಆರೋಪಿಸಿದ್ದಾರೆ ಎಂದು ತಿಳಿಸಿದರು.
ಗೃಹ ಸಚಿವ ಅಮಿತ್ ಷಾ ಅವರು ಅಂಬೇಡ್ಕರ್ ಬಗ್ಗೆ ಮತ್ತು ಸಿ.ಟಿ.ರವಿ ಅವರು ಮಹಿಳೆಯ ಬಗ್ಗೆ ಹೇಳಿರುವುದು ಎಷ್ಟು ಸರಿ, ಹಾಗೆ ಹೆಣ್ಣು ಮಕ್ಕಳಿಗೆ ಸ್ವತಂತ್ರಯನ್ನು ಕೊಟ್ಟಂತವರ ಬಗ್ಗೆ ಅವಹೇಳನಕಾರಿ ಮಾತುಗಳನಾಡಿದ್ದು ಕೂಡ ಇಡೀ ಕಾಂಗ್ರೆಸ್ ಪಕ್ಷವು ವಿರೋಧಿಸುತ್ತದೆ ಕೂಡಲೇ ಅಮಿತಾ ಶಾ ಮತ್ತು ಸಿ.ಟಿ.ರವಿ ಅವರನ್ನು ಜನಪ್ರತಿನಿಧಿಯಾಗಿ ರಾಜೀನಾಮೆ ಕೊಡಿಸಿ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೈಲಾಂಡಹಳ್ಳಿ ಮುರಳಿ ಆಗ್ರಹಿಸಿದ್ದಾರೆ.