ಅಮಿತ್ ಶಾ ಸಂಪುಟದಿಂದ ವಜಾಗೊಳಿಸುವಂತೆ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ

ಕೋಲಾರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕ‌ರವರನ್ನು ಸಂಸತ್ತಿನಲ್ಲಿ ಅವಮಾನಿಸಿದ ಗೃಹ ಮಂತ್ರಿ ಅಮಿತ್‌ ಷಾ ರವರನ್ನು ಸಂಪುಟದಿಂದ ವಜಾ ಮಾಡುವಂತೆ ಒತ್ತಾಯಿಸಿ ನಗರದ ತಹಶಿಲ್ದಾರ್ ಕಛೇರಿ ಮುಂದೆ ಸಂಯುಕ್ತ ಹೋರಾಟ ಸಮಿತಿ, ಸಿಪಿಐಎಂ, ಹಾಗೂ ದಸಂಸ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸಿಪಿಐಎಂ ತಾಲೂಕು ಕಾರ್ಯದರ್ಶಿ ಟಿ.ಎಂ ವೆಂಕಟೇಶ್ ಮಾತನಾಡಿ, ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನದ 75ನೇ ವರ್ಷಾಚರಣೆಯ ಚರ್ಚೆಯಲ್ಲಿ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಮಾತನಾಡುವಾಗ ಸಂವಿಧಾನ ಶಿಲ್ಪ ಡಾ. ಬಿ.ಆರ್. ಅಂಬೇಡ್ಕ‌ರವರನ್ನು ವ್ಯಸನಕ್ಕೆ ಹೋಲಿಕೆ ಮಾಡಿರುವುದು ಅತ್ಯಂತ ಖಂಡನೀಯ. ಇದು ಅವರ ದುರಹಂಕಾರ ಮತ್ತು ಅಂಬೇಡ್ಕರ್ ರವರ ಬಗ್ಗೆ ಸಂಘ ಪರಿವಾರ ಹೊಂದಿರುವ ನಿಜ ಸ್ಥಿತಿಯನ್ನು ಬಯಲು ಮಾಡಿದೆ ಕಳೆದ ಲೋಕಸಭಾ ಚುನಾವಣೆಗಳು ಉತ್ತರ ಕೊಟ್ಟಿವೆ ಆದರೂ ಬಿಜೆಪಿ ಮತ್ತು ಸಂಘ ಪರಿವಾರದ ದುರಹಂಕಾರ ಕಮ್ಮಿ ಹಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು

ಪ್ರತಿಭಟನೆಯನ್ನು ಉದ್ದೇಶಿಸಿ ದಸಂಸ ಜಿಲ್ಲಾ ಸಂಚಾಲಕ ಹಾರೋಹಳ್ಳಿ ರವಿ ಮಾತನಾಡಿ ಚುನಾವಣಾ ಸಮಯದಲ್ಲಿ ಅಂಬೇಡ್ಕರ್ ಕುರಿತು ದೊಡ್ಡ ಮಟ್ಟದಲ್ಲಿ ಜಪಿಸಿ ದಲಿತರ ಮತ ಪಡೆಯಲು ಯತ್ನಿಸಿತ್ತು. ಇದೀಗ ಕೇಂದ್ರ ಸಚಿವ ಅಂಬೇಡ್ಕ‌ರ್ ರವರ ಕುರಿತು ತಮ್ಮ ಮನದಾಳದಲ್ಲಿನ ಸಂಘ ಪರಿವಾರದ ಸಂಸ್ಕೃತಿಯನ್ನು ಪ್ರತಿಪಾದಿಸಿದೆ. ಅಮಿತ್ ಷಾರವರ ಮಾತುಗಳು ದೇಶದಾದ್ಯಂತ ಜನರ ಭಾವನೆಗಳನ್ನು ಕೆರಳಿಸಿದೆ ಆರಂಭದಿಂದಲೂ ಅಂಬೇಡ್ಕರ್ ರವರು ರಚಿಸಿದ ಸಂವಿಧಾನವನ್ನೇ ಒಪ್ಪದ ಆರ್.ಎಸ್.ಎಸ್.. ಮನುಸ್ಮೃತಿಯನ್ನೇ ಈ ದೇಶದಲ್ಲಿ ಜಾರಿ ಮಾಡಲು ಅಂತರ್ಗತ ಕಾರ್ಯ ಸೂಚಿಯನ್ನು ಹೊಂದಿದೆ. ಅಂಬೇಡ್ಕರ್‌ರವರು ಪ್ರತಿಪಾದಿಸಿದ ವಿಚಾರಗಳು ದಲಿತ, ದಮನಿತ ಶೋಷಿತ ವರ್ಗಗಳು, ಆದಿವಾಸಿಗಳು, ಹಿಂದುಳಿದ ವರ್ಗಗಳಿಗೆ ಬೆಳಕಾಗಿದೆ. ಇಂತಹವರನ್ನು ಅವಮಾನಿಸಿದ ಅಮಿತ್ ಷಾರವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಖಜಾಂಚಿ ಹೆಚ್.ಬಿ ಕೃಷ್ಣಪ್ಪ ಮಾತನಾಡಿ, ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರನ್ನು ಕುರಿತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿರವರು ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದು ಖಂಡನೀಯ ಬುದ್ದಿ ಜೀವಿಗಳ ಸದನ ಎಂದು ಕರೆಯುವ ವಿಧಾನಪರಿಷತ್‌ನಲ್ಲಿ ಈ ಘಟನೆ ನಡೆದಿರುವುದು ದುರದೃಷ್ಟಕರ. ಕೂಡಲೇ ಸಿ.ಟಿ.ರವಿರವರ ವಿಧಾನಪರಿಷತ್ ಸದಸ್ಯ ಸ್ಥಾನದಿಂದ ವಜಾ ಮಾಡಬೇಕು ಸಚಿವರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರೂ ಘನ ನ್ಯಾಯಾಲಯ ನೀಡಿರುವ ಜಾಮೀನು ವಿರುದ್ಧ ಮೇಲ್ಮನವಿ ಸಲ್ಲಿಸಬೇಕು. ಸಿ.ಟಿ. ರವಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು

ಈ ಸಂದರ್ಭದಲ್ಲಿ ಸಂಯುಕ್ತ ಹೋರಾಟ ಸಮಿತಿಯ ಮುಖಂಡರಾದ ನಗರಸಭೆ ಮಾಜಿ ಅಧ್ಯಕ್ಷ ಅಫ್ರೋಜ್ ಪಾಷ, ವಿ.ಗೀತಾ, ಎಂ.ವಿಜಯಕೃಷ್ಣ, ಬೀರಮಾನಹಳ್ಳಿ ಅಂಜಿನಪ್ಪ, ಭೀಮರಾಜ್, ವಿ.ನಾರಾಯಣರೆಡ್ಡಿ, ಸೀಪುರ ದೇವರಾಜ್, ಆಶಾ, ಕೆ.ವಿ.ಮಂಜುನಾಥ್, ಸುಶೀಲ, ಯಲ್ಲಪ್ಪ, ಕುಚೇಲಪ್ಪ, ದಿಂಬಚಾಮನಹಳ್ಳಿ ಮುನಿಯಪ್ಪ, ರಾಜೇಂದ್ರ, ಮುಂತಾದವರು ಇದ್ದರು.

Leave a Reply

Your email address will not be published. Required fields are marked *