ಇತ್ತೀಚೆಗೆ ನಡೆದ ಜಾಲಪ್ಪನವರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು ಅವರ ಕಾರ್ಯಕ್ರಮದಲ್ಲಿ ಹಾಲಿ ಶಾಸಕರು ಗುಂಪು ಮನೆಗಳಿಗೆ 40 ಎಕರೆ ಜಾಗ ಇದ್ದು ಮನೆಗಳನ್ನು ನಿರ್ಮಿಸಿಕೊಡಿ ಎಂದಿದ್ದಾರೆ. ಆದರೆ, ಈ ಜಾಗ ಎಲ್ಲಿದೆ? ಅದರ ಪಹಣಿಗಳನ್ನು ನೀಡಲಿ. ಇನ್ನು ಕಾವೇರಿ ನದಿ ಬಾಶೆಟ್ಟಿಹಳ್ಳಿಯವರೆಗೆ ತರಲು ಪೈಪ್ ಲೈನ್ ಗಳಿವೆ ಎಂದಿದ್ದಾರೆ. ಆದರೆ, ಅವು ನೀರಿನ ಶುದ್ದೀಕರಣಕ್ಕಾಗಿ ಹಾಕಿರುವ ಪೈಪ್ ಗಳು, ಶಾಸಕರ ಈ ದಾರಿ ತಪ್ಪಿಸುವ ಮಾತುಗಳನ್ನು ಪ್ರಶ್ನಿಸಸಬೇಕಿದೆ ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹೇಳಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಶಾಸಕ ಧೀರಜ್ ಮುನಿರಾಜ್, ಪಾಪ ಯಾರೋ ಅಮಾಯಕರು ಈ ಬಗ್ಗೆ ಕೇಳಿದರೆ ಅದಕ್ಕೆ ಉತ್ತರ ಕೊಡಬಹುದು. ಆದರೆ ಮಾಜಿ ಶಾಸಕರಿಗೆ ಎಲ್ಲಾ ಅಧಿಕಾರವಿದೆ ಹೆಚ್ಚಿನ ಮಾಹಿತಿಗಾಗಿ ಪಹಣಿ ಬೇಕೆಂದರೆ ಜಿಲ್ಲಾಧಿಕಾರಿಯವರನ್ನ ಕೇಳಬೇಕು, ಜಾಗ ನೋಡಬೇಕಾದರೆ ತಹಶೀಲ್ದಾರ್ ಬಳಿ ಕೇಳಬೇಕು. 40 ಎಕರೆ ಜಾಗದಲ್ಲಿ ಗುಂಪು ಮನೆಗಳನ್ನು ಕಟ್ಟಿಸಿಕೊಡಲೇಬೇಕು. ಈಗಾಗಲೇ ಜಾಗ ಗುರುತಿಸಿದ್ದೇವೆ. 9 ಎಕರೆ 38 ಗುಂಟೆ, 9 ಎಕರೆ 38 ಗುಂಟೆಗೆ ಪಹಣಿ ಬೇರೆ ಬೇರೆ ಬರುತ್ತದೆ. ಪಹಣಿ ಒಂದು ದಿನದಲ್ಲಿ ಬಂದುಬಿಡಲ್ಲ. ಜಿಲ್ಲಾಧಿಕಾರಿ ಅನುಮೋದನೆ ಮಾಡಿದ ಮೇಲೆ ಪಹಣಿ ಬರುತ್ತೆ. ಪಹಣಿ ಬಂದ ಮೇಲೆ ಅದನ್ನು ಅವರಿಗೆ ತಲುಪಿಸುವ ಕಾರ್ಯ ಮಾಡುತ್ತೇನೆ ಎಂದರು.
ಇವರಲ್ಲಿ ಕೆಟ್ಟ ಸಂಸ್ಕೃತಿ, ಹೀನಾಯ ಬುದ್ದಿ ಇದೆ. ಬೇಕಾದರೆ ಗುಂಪು ಮನೆಗಳು ನಿರ್ಮಾಣವಾಗುವುದಕ್ಕೂ ಅಡ್ಡಿಪಡಿಸಲುಬಹುದು. ಇಂತಹ ಹೀನಾಯ ಮನಸ್ಥಿತಿಯುಳ್ಳವರು ಇದ್ದಾಗ ನಾವು ರಹಸ್ಯವಾಗಿ ಅಭಿವೃದ್ಧಿ ಕೆಲಸಗಳನ್ನ ಮಾಡಬೇಕಾಗುತ್ತದೆ… ಯಾರಿಗಾದರೂ ಒಳ್ಳೆದಾಗುತ್ತದೆ ಎಂದರೆ ಅವರಿಗೆ ತಡೆದುಕೊಳ್ಳಲು ಆಗಲ್ಲ ಎಂದು ಗುಡುಗಿದರು.
ನಗರಕ್ಕೆ ಕಾವೇರಿ ನೀರು ಬೇಕು, ಅದನ್ನು ಮಾತನಾಡಿದ್ದು ಸುಳ್ಳಾ…. ಅದನ್ನು ಕೇಳಿದ್ದು ತಪ್ಪಾ…..? ಕಾವೇರಿ ನೀರಿನ ಪೈಪ್ ಲೈನ್ ಬಂದಿದೆಯೋ ಇಲ್ವೋ ಎಂಬ ಮಾಹಿತಿ ನನಗಿದೆ. ಹತ್ತು ವರ್ಷ ಆಡಳಿತ ಮಾಡಿದ ನಿಮಗೆ ಇಲ್ಲ. ಇಡೀ ದೊಡ್ಡಬಳ್ಳಾಪುರದಲ್ಲಿ 150MM ಡಯಾ ಇರುವ ಪೈಪ್ ನಲ್ಲಿ ಜಕ್ಕಲಮಡಗು ನೀರು ಸರಬರಾಜು ಆಗುತ್ತದೆ. ಜಕ್ಕಲಮಡಗಿಂದ ದೊಡ್ಡಬಳ್ಳಾಪುರಕ್ಕೆ 700MM ಡಯಾ ಇರುವಂತಹ ಪೈಪ್ ನಲ್ಲಿ ನೀರು ಬರುತ್ತದೆ ಎಂದರು.
ಸಂಸ್ಕರಿಸಿದ ನೀರಿನ ಬಗ್ಗೆ ಮಾತನಾಡಿದ್ದಾರೆ, 2004ರಲ್ಲಿ ಸಂಸ್ಕರಿಸಿದ ನೀರು ಇತ್ತಾ…? ಸಂಸ್ಕರಿಸಿದ ನೀರು ಯಾವ್ಯಾವುದು. ಎಚ್.ಎನ್ ವ್ಯಾಲಿ, ಕೆಸಿ ವ್ಯಾಲಿ, ವೃಷಭಾವತಿ ವ್ಯಾಲಿಗಳು ಆಗಿದ್ದು ಯಾವ ವರ್ಷದಲ್ಲಿ..? ಅಂದು ಯಾರು ಅಧಿಕಾರದಲ್ಲಿದ್ದರು…ಈ ಕುರಿತು ಸಂಪೂರ್ಣ ದಾಖಲೆ ನಾನು ಕೊಡಬಲ್ಲೆ… 2004ರಲ್ಲಿ ಜಾಲಪ್ಪ ಅವರ ಕಾಲದಲ್ಲಿ ಹೆಬ್ಬಾಳದಲ್ಲಿ ಪಂಪ್ ಹೌಸ್ ಉದ್ಘಾಟನೆ ಮಾಡಿದಾಗ ಹೆಬ್ಬಾಳದಿಂದ ದೊಡ್ಡಬಳ್ಳಾಪುರದ ಸ್ಕೌಟ್ಸ್ ಮತ್ತು ಗೈಡ್ಸ್ ಕ್ಯಾಂಪ್ ವರೆಗೂ ಪೈಪ್ ಲೈನ್ ಬಂದಿದೆ…ಯಾವ ನೀರನ್ನು ತೆಗೆದುಕೊಂಡು ಬರಲು ಪಂಪ್ ಹೌಸ್ ಉದ್ಘಾಟನೆ ಮಾಡಿರುವ ಮಾಹಿತಿ ನೀವು ಕಲೆಹಾಕಿ, ಜನಗಳಿಗೆ ತಪ್ಪು ಮಾಹಿತಿ ನೀಡಿ ಏಕೆ ದಾರಿತಪ್ಪಿಸುತ್ತೀರಾ.. ಎಂದು ಪ್ರಶ್ನಿಸಿದರು..
ಇನ್ನೊಂದು ಜಿಲ್ಲಾಸ್ಪತ್ರೆ ಬೇಕು ಎಂದು ಕೇಳಿದೆ. ತಾಲೂಕಿಗೆ ಜಿಲ್ಲಾಸ್ಪತ್ರೆ ಬೇಕು ಎಂದು ತಮ್ಮದೇ ಸರ್ಕಾರದ ಬಳಿ ಕೇಳಿದರೆ ಏನಾಗುತ್ತೆ. ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದವರು, ಗ್ಯಾರಂಟಿ ಸಮಾವೇಶದಂದು ಗುದ್ದಲಿ ಪೂಜೆಯಾದಾಗ ಇವರು ಅಲ್ಲೇ ಇದ್ದರು, ಇದು ಕನಸಿನ ಯೋಜನೆ ಎಂದು ಬೇರೆ ಹೇಳಿದ್ದೀರಿ. ನಿಮ್ಮ ಕನಸಿನ ಯೋಜನೆಗೆ ಏಕೆ ಕಲ್ಲು ಹಾಕುತ್ತಿದ್ದೀರಾ…? ಗುದ್ದಲಿ ಪೂಜೆ ಮಾಡಿ ಹಲವು ದಿನಗಳು ಕಳೆದರೂ ಇನ್ನು ಕಾಮಗಾರಿ ಪ್ರಾರಂಭಗೊಂಡಿಲ್ಲ. ಈ ಕುರಿತು ಸಿಎಂ ಸಿದ್ದರಾಮಯ್ಯ, ಆರೋಗ್ಯ ಮಂತ್ರಿಗಳ ಬಳಿ ಕೇಳೋದು ಬಿಟ್ಟು, ಜಿಲ್ಲಾಸ್ಪತ್ರೆಯಾಗುವುದನ್ನು ತಡೆಯಲು ನಾನಾ ಪ್ರಯತ್ನಗಳನ್ನು ಮಾಡಿರುವುದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮಲ್ಲಿ ಇವೆ. ದಯವಿಟ್ಟು ಜಿಲ್ಲಾಸ್ಪತ್ರೆಗೆ ಅಡ್ಡಗಾಲು ಹಾಕೋದು ಬಿಟ್ಟು, ಕಾಮಗಾರಿ ಪ್ರಾರಂಭ ಮಾಡಲು ನಿಮ್ಮದೇ ಸರ್ಕಾರವನ್ನು ಕೇಳಿ, ಒಂದು ವೇಳೆ ಕಾಮಗಾರಿ ಪ್ರಾರಂಭವಾಗಿ ಕಟ್ಟಡ ನಿರ್ಮಾಣವಾದರೆ ಅದಕ್ಕೆ ನಿಮ್ಮದೇ ಹೆಸರು ಅಂದರೆ ಎಟಿವಿ ಜಿಲ್ಲಾಸ್ಪತ್ರೆ ಎಂದು ಇಡೋಣ ಎಂದು ಹೇಳಿದರು…
ಸಾರ್ವಜನಿಕರು ಕಟ್ಟಿರುವ ತೆರಿಗೆ ಹಣವನ್ನು ನಮ್ಮ ತೀಟೆ, ತೆವಲಿಗೋಸ್ಕರ ಬಳಸಿಕೊಂಡು ಹಾಳು ಮಾಡುವುದಿಲ್ಲ. ಯಾವ ಸರ್ಕಾರಲ್ಲಿ ಯಾವ ಅಭಿವೃದ್ಧಿ ಕೆಲಸಗಳು ಆಗಿರುತ್ತವೋ ಆಗುತ್ತವೋ ಅವುಗಳನ್ನು ಮುಂದುವರಿಸುತ್ತೇವೆ. ಸಿದ್ದಲಿಂಗಪ್ಪ, ರಾಮೇಗೌಡ, ಜಾಲಪ್ಪ, ನರಸಿಂಹಸ್ವಾಮಿ, ಗಂಟಿಗಾನಹಳ್ಳಿ ಕೃಷ್ಣಪ್ಪ, ಆರ್‌ಜಿ ವೆಂಕಟಾಚಲಯ್ಯನವರು ಮಾಡಿದಂತಹ ಕೆಲಸಗಳನ್ನೇ ನಾನು ಶಾಸಕನಾಗಿ ಮುಂದುವರಿಸಿಕೊಂಡಿದ್ದೇನೆ. ನಾನೇನು ಸೃಷ್ಟಿಕರ್ತನಲ್ಲ ಎಲ್ಲವನ್ನು ಸೃಷ್ಟಿ ಮಾಡುವುದಕ್ಕೆ. ಜಾಲಪ್ಪನವರ ಕಾರ್ಯಕ್ರಮದಲ್ಲಿ ತಾಲೂಕಿಗೆ ಏನು ಬೇಕೋ ಅದನ್ನು ಸಿಎಂ ಸಿದ್ದರಾಮಯ್ಯ ಬಳಿ ಕೇಳಿದ್ದೇನೆ. ನೀವು ಏನು ಹೇಳಿದ್ದೀರೋ ಅದನ್ನು ಟೆಪ್ ರೆಕಾರ್ಡರ್ ಹಾಕಿಕೊಂಡು ಕೇಳಿ, ಅಂದು ನಿಮ್ಮನ್ನು ನೀವು ಹೊಗಳಿಕೊಳ್ಳುವ ಕೆಲಸ ಮಾಡಿಕೊಂಡಿರುವುದು ಸಾರ್ವಜನಿಕವಾಗಿ ಎಲ್ಲರಿಗೂ ಗೊತ್ತಿದೆ. ನನ್ನ ಕಾಲದಲ್ಲಿ ಅರ್ಧ ಕಿಲೋಮೀಟರ್ ರಸ್ತೆ ಕಾಮಗಾರಿ ನಡೆದರೆ ಸುಮಾರು 20 ವರ್ಷಗಳ ಕಾಲ ಬಾಳಿಕೆ ಬರುವಹಾಗೇ ನೋಡಿಕೊಳ್ಳುತ್ತೇನೆ. ಆದರೆ ನೀವು ಊರೆಲ್ಲಾ ರಸ್ತೆ ಮಾಡಿಸಿದ್ದೇನೆ ಅಂತಾ ಹೇಳಿಕೊಂಡು ಡಬಲ್ ತ್ರಿಬಲ್ ಬಿಲ್ ಗಳನ್ನು ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ..ಎಂದು ಹೇಳಿದರು..
ನಾನು ಶಾಸಕನಾಗಿರೋದು ನನ್ನ ಸ್ವಾಹಿತಾಸಕ್ತಿಗಲ್ಲ. ನನಗೆ ದುಡ್ಡಿನ ಮೇಲೆ ವ್ಯಾಮೋಹವಿಲ್ಲ. ನನಗೆ ತಾಲೂಕಿನ ಅಭಿವೃದ್ಧಿ ಮುಖ್ಯ. ತಾಲೂಕಿನ ಜನರ ಕ್ಷೇಮಾಭಿವೃದ್ಧಿ ಮುಖ್ಯ. ಸರ್ಕಾರಗಳ ಯೋಜನೆ, ಸವಲತ್ತುಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ನೋಡಿಕೊಂಡು ತಾಲೂಕಿನಲ್ಲಿ ಜನ ಬೆಂಬಲ ಗಳಿಸುವುದು ನನ್ನ ಗುರಿ ಎಂದರು…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…
ಟಿಎಪಿಎಂಸಿಎಸ್ ಚುನಾವಣೆ ಸೋಲಿಗೆ ನಾನೇ ನೇರ ಕಾರಣ. ಸೋಲಿನ ಸಂಪೂರ್ಣ ಜವಾಬ್ದಾರಿ ಶಾಸಕನಾಗಿ ನಾನೇ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಧೀರಜ್…
ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದಿಂದ ಹೊಲಿಗೆ ಯಂತ್ರ ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಪ್ರವರ್ಗ-3-ಬಿ…