ಅಬಕಾರಿ ಅಕ್ರಮಗಳ ಬಗ್ಗೆ ದೂರು ನೀಡಿ

ಮುಂಬರುವ ಲೋಕಸಭಾ ಚುನಾವಣೆ 2024ರ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಭಾರತೀಯ ತಯಾರಿಕಾ ಮದ್ಯ ಹಾಗೂ ಅಬಕಾರಿ ವಸ್ತುಗಳ ಹೊಂದುವಿಕೆ, ದಾಸ್ತಾನು, ಸಾಗಾಣಿಕೆ, ಮಾರಾಟ ಮತ್ತು ಸಾರ್ವಜನಿಕರಿಗೆ ಹಂಚುವಿಕೆ ಇತ್ಯಾದಿ ಅಬಕಾರಿ ಅಕ್ರಮಗಳ ಬಗ್ಗೆ ಯಾವುದೇ ದೂರುಗಳು/ಮಾಹಿತಿಗಳು ಕಂಡು ಬಂದಲ್ಲಿ ಅಬಕಾರಿ ಉಪ ಆಯುಕ್ತರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ ತಾಲ್ಲೂಕು ರವರ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಅಬಕಾರಿ ನಿಯಂತ್ರಣಾ ಕೊಠಡಿಯ ದೂರವಾಣಿ ಸಂಖ್ಯೆ “080-29787450” ಅಥವಾ ಟೋಲ್ ಫ್ರೀ ದೂರವಾಣಿ ಸಂಖ್ಯೆ: 18004255273 ಗಳಿಗೆ ಕರೆಮಾಡಿ ತಿಳಿಸಬಹುದಾಗಿದೆ.

ಜೊತೆಗೆ ಜಿಲ್ಲೆಯ ಅಬಕಾರಿ ಇಲಾಖಾ ಅಧಿಕಾರಗಳ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದ್ದು ನೆಲಮಂಗಲ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಪರಮೇಶ್ವರಪ್ಪ ಎನ್.ಹೆಚ್( 9449597036), ಹೊಸಕೋಟೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಬಸಪ್ಪ ಪೂಜಾರ್(9449597034), ನೆಲಮಂಗಲ ವಲಯದ ಅಬಕಾರಿ ನಿರೀಕ್ಷಕರಾದ ಸುಮಲತಾ ಸಿ.ಕೆ(9449597271), ದೊಡ್ಡಬಳ್ಳಾಪುರ ವಲಯದ ಅಬಕಾರಿ ನಿರೀಕ್ಷಕರಾದ ಅರುಣ್ ಕುಮಾರ್ ವಿ(9449597269), ದೇವನಹಳ್ಳಿ ವಲಯದ ಅಬಕಾರಿ ನಿರೀಕ್ಷಕರಾದ ಸುನಿಲ್ ಬಿ.ಎಂ(9449597268), ಹೊಸಕೋಟೆ ವಲಯದ ಅಬಕಾರಿ ನಿರೀಕ್ಷಕರಾದ ಶೈಲಜಾ ಹೆಚ್.ಆರ್(9449597270), ನೆಲಮಂಗಲ ಉಪವಿಭಾಗದ ಅಬಕಾರಿ ನಿರೀಕ್ಷಕರಾದ ಟಿ.ಜೆ ದಿವ್ಯಶ್ರೀ(9449597037), ಹೊಸಕೋಟೆ ಉಪವಿಭಾಗದ ಅಬಕಾರಿ ನಿರೀಕ್ಷಕರಾದ ಭರತ್ ಜಿ.ಎನ್(9449597035), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕರಾದ ಆಶಿಷ್ ಎನ್(9449597031) ಇವರನ್ನು ಸಂಪರ್ಕಿಸಿ ಸಾರ್ವಜನಿಕರು ದೂರು/ಮಾಹಿತಿ ನೀಡಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಬಕಾರಿ ಉಪ ಆಯುಕ್ತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *