ಅಪ್ಪ, ಮಗನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ವಿಚಾರ: ಹೆಣ್ಣಿನ ವಿಚಾರಕ್ಕೆ ಯುವಕನ ಕೊಲೆ ಯತ್ನ ಆರೋಪ: ಎಎಸ್ಪಿ ನಾಗರಾಜ್ ಭೇಟಿ, ಪರಿಶೀಲನೆ

ಅಪ್ಪ, ಮಗನ ಮೇಲೆ‌‌ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಿನ್ನೆ(ಡಿ.13)ರ ಸಂಜೆ ಸುಮಾರು 4 ಗಂಟೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ನಡೆದಿತ್ತು…

ಹಲ್ಲೆಗೊಳಗಾದವರನ್ನು ಅಪ್ಪ ಮಧುಸೂದನ್(49), ಮಗ ಕಾರ್ತಿಕ್ ಕುಮಾರ್(26) ಎಂದು ಗುರುತಿಸಲಾಗಿದೆ….

ಅಡಕಮಾರನಹಳ್ಳಿ‌ ಮೂಲದ ಮಹಿಳೆ ಜೊತೆಯಲ್ಲಿ ಕಾರ್ತಿಕ್ ಕುಮಾರ್ ಗೆ ಅನೈತಿಕ ಸಂಬಂಧವಿತ್ತು. ಈಕೆಯೇ ಈಗ ಕಾರ್ತಿಕ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿಸಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ…

ನವೆಂಬರ್ 23 ರಂದು ಮೊದಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗ ಎರಡು ಕುಟುಂಬಗಳು ರಾಜಿ ಸಂಧಾನ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಅಕ್ರಮ‌ ಸಂಬಂಧದ ಹಿನ್ನೆಲೆ‌ ಕಾರ್ತಿಕ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಯತ್ನ ನಡೆಸಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ..

ಮಗನನ್ನು ಬಿಡಿಸಲು ಹೋದ ತಂದೆ ಮಧುಸೂದನ್ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ.

ಇಬ್ಬರಿಗೂ ತಲೆ, ಮುಖ ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ….

ಮಹಿಳೆ ಸೇರಿದಂತೆ ಐದು ಜನಕ್ಕೂ ಹೆಚ್ಚು ದುಷ್ಕರ್ಮಿಗಳು ಸ್ಯಾಂಟ್ರೊ ಕಾರಲ್ಲಿ ಬಂದು ಅಟ್ಯಾಕ್ ಮಾಡಿ ಎಸ್ಕೇಪ್ ಆಗಿದ್ದರು, ಸ್ಥಳದಲ್ಲಿ ಬಿಗುವುನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದರು..

ಕೊನೆ ಕ್ಷಣದಲ್ಲಿ ಗ್ರಾಮಸ್ಥರ ಸಹಾಯದಿಂದ ತಂದೆ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಸ್ಪತ್ರೆಗೆ ಎಎಸ್ಪಿ ನಾಗರಾಜ್ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿದ್ದಾರೆ.

ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..,

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಸಲಾಗಿದೆ…..

Leave a Reply

Your email address will not be published. Required fields are marked *

error: Content is protected !!