ದಿ. ಪವರ್ ಸ್ಟಾರ್ ಪುನಿತ್ ರಾಜಕುಮಾರ್ 50ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಐದು ಕಿಲೋಮೀಟರ್ ದೂರದ ಪವರ್ ಸ್ಟೆಪ್ಸ್ ಹೆಸರಿನ ಮ್ಯಾರಥಾನ್ ಓಟವನ್ನು ನಗರದಲ್ಲಿ ಆಯೋಜನೆ ಮಾಡಲಾಗಿತ್ತು.
ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರಿಡಾಂಗಣದಲ್ಲಿ ಮ್ಯಾರಥಾನ್ ಗೆ ಶಾಸಕ ಧೀರಜ್ ಮುನಿರಾಜು ಚಾಲನೆ ನೀಡಿದರು.
ಮಕ್ಕಳು ಮಹಿಳೆಯರು ಸೇರಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅಪ್ಪು ಅಭಿಮಾನಿಗಳು ಮ್ಯಾರಥಾನ್ ಓಟದಲ್ಲಿ ಭಾಗಿಯಾಗಿದ್ದರು.
ಓಟಕ್ಕೂ ಮುನ್ನ ಪುನಿತ್ ರಾಜ್ ಕುಮಾರ್ ಸಿನಿಮಾದ ಹಾಡುಗಳಿಗೆ ಮಕ್ಕಳು, ಮಹಿಳೆಯರು, ಅಪ್ಪು ಫ್ಯಾನ್ಸ್ ಕುಣಿದು ಕುಪ್ಪಳಿಸಿದರು.