ಬೆಂಗಳೂರು: ಚಾರ್ಕೋಟ್ಸ್ ಪಾದ (ಪಾದದ ವಿರೂಪತೆ)ದಿಂದ ಬಳಲುತ್ತಿರುವ ಸೌದಿ ಅರೇಬಿಯಾದ 52 ವರ್ಷದ ಮಹಿಳೆಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಯಿತು .
ಚಾರ್ಕೋಟ್ ಪಾದ ಎಂದರೆ, ನರಗಳಿಗೆ ಹಾನಿಯುಂಟು ಮಾಡುವ ಅಪರೂಪದ ಸ್ಥಿತಿಯಿಂದ ಪಾದದ ಮೂಳೆಗಳು ಮತ್ತು ಕೀಲುಗಳನ್ನು ದುರ್ಬಲಗೊಳಿಸಿ, ಪಾದವನ್ನು ವಿರೂಪಗೊಳಿಸುತ್ತದೆ. ಫೋರ್ಟಿಸ್ ಆಸ್ಪತ್ರೆಯ ಆರ್ಥೋಪೆಡಿಕ್ ಸರ್ಜನ್ ಡಾ. ಮೋಹನ್ ಪುಟ್ಟಸ್ವಾಮಿ ಅವರ ಪರಿಣಿತ ಆರೈಕೆಯಲ್ಲಿ, ರೋಗಿಯು ಇಲಿಜಾರೋವ್ ಎಂಬ ಉಪಕರಣದ ಸಹಾಯದಿಂದ ಚಿಕಿತ್ಸೆ ನೀಡಲಾಯಿತು. ಈ ಪ್ರಕ್ರಿಯೆಯು ಅವರ ಪಾದವನ್ನು ಸ್ಥಿರಗೊಳಿಸಿ, ಚಲನಶೀಲತೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡಿತು. ಈ ಶಸ್ತ್ರಚಿಕಿತ್ಸೆಯು ಸುಮಾರು 8 ಗಂಟೆಗಳ ಕಾಲ ನಡೆಯಿತು, ರೋಗಿಯನ್ನು 7 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ರೀಟಾ (ಹೆಸರು ಬದಲಾಯಿಸಲಾಗಿದೆ) ಎಂಬ ರೋಗಿಯು ಸುಮಾರು ಒಂಬತ್ತು ವರ್ಷಗಳ ಕಾಲ ತನ್ನ ಎಡ ಪಾದದ ದೀರ್ಘಕಾಲದ ನೋವು, ಊತ ಮತ್ತು ವಿರೂಪತೆಯಿಂದ ಬಳಲುತ್ತಿದ್ದರು. ಈ ಸ್ಥಿತಿಯು ಆಕೆಯ ಚಲನಶೀಲತೆಯ ಮೇಲೆ ತೀವ್ರ ಪರಿಣಾಮ ಬೀರಿತ್ತು, ಇದರಿಂದ ಅವರು ಕುಂಟುತ್ತಾ ನಡೆಯಬೇಕಿತ್ತು. ಕಾಲಕ್ರಮೇಣ ಈ ಆರೋಗ್ಯ ಸ್ಥಿತಿ ಇನ್ನಷ್ಟು ಜಟಿಲಗೊಂಡ ಕಾರಣ ಅವರು ನಡೆಯಲು ಸಹ ಸಾಧ್ಯವಾಗದೇ, ಅವರ ಕಾಲನ್ನೇ ಕಳೆದುಕೊಳ್ಳುವ ಸ್ಥಿತಿಗೆ ತೆರಳಿದರು. ಕೂಡಲೇ ಅವರು ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು. ಈ ಆರೋಗ್ಯ ಸಮಸ್ಯೆ ಜೊತೆಗೆ ಅವರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಯಿಂದಲೂ ಬಳಲುತ್ತಿರುವುದು ಸಂಪೂರ್ಣ ತಪಾಸಣೆಯಿಂದ ತಿಳಿದುಬಂತು.
ಡಾ. ಪುಟ್ಟಸ್ವಾಮಿ ಅವರ ನೃತೃತ್ವದಲ್ಲಿ ಇಲಿಜರೋವ್ ಎಂಬ ಉಪಕರಣದ (ಮುರಿದ ಮೂಳೆ, ವಿರೂಪತೆ ಮತ್ತು ಇತರ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಬಳಸುವ ಉಂಗುರದ ಆಕಾರದ ಬ್ರೇಸ್ ಉಪಕರಣ) ಸಹಾಯದಿಂದ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈ ಶಸ್ತ್ರಚಿಕಿತ್ಸೆಯಿಂದ ಭವಿಷ್ಯದಲ್ಲಿ ಅವರ ಕಾಲನ್ನು ಕಳೆದುಕೊಳ್ಳುವ ಅಪಾಯವೂ ತಪ್ಪಲಿದೆ.
ಈ ಕುರಿತು ಮಾತನಾಡಿದ ಡಾ. ಮೋಹನ್ ಪುಟ್ಟಸ್ವಾಮಿ, ರೀಟಾ ಅವರ ಸಂಕೀರ್ಣ ಪ್ರಕರಣವು ದೀರ್ಘಕಾಲದ ಪಾದದ ವಿರೂಪತೆಯ ಜೊತೆಗೆ CKD ಸೋಂಕು ಅವರನ್ನು ಹೆಚ್ಚು ಬಾಧಿಸುತ್ತಿತ್ತು. ಕೂಡಲೇ ಅವರಿಗೆ ಮೂತ್ರಪಿಂಡದ ಕಾಯಿಲೆಗೆ ಸೂಕ್ತ ಚಿಕಿತ್ಸೆ ಒದಗಿಸಿದ ಬಳಿಕ ಅವರ ಕಾಲಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆ ನೀಡಿದೆವು. ಈ ರೀತಿಯ ಪ್ರಕರಣವು ಪ್ರತಿ ವರ್ಷ 10 ಸಾವಿರ ವ್ಯಕ್ತಿಗಳಲ್ಲಿ 7 ಜನರಲ್ಲಿ ಕಂಡು ಬರಲಿದೆ. ಇಂತಹ ಆರೋಗ್ಯ ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಇದರಿಂದ ಕಾಲನ್ನೇ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಪ್ರಸ್ತುತ ರೋಗಿಯು ಸಂಪೂರ್ಣವಾಗಿ ಗುಣವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಇಂದು ಹೊಸ ವರ್ಷ ಹಿನ್ನೆಲೆ 800 ವರ್ಷಗಳ ಇತಿಹಾಸಯುಳ್ಳ ಆವತಿ ತಿಮ್ಮರಾಯಸ್ವಾಮಿ ಬೆಟ್ಟದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ…
ಹೊಸ ವರ್ಷದ ಮೊದಲ ದಿನವಾದ ಇಂದು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದು ನಮ್ಮ ಪದ್ಧತಿ. ಹಿಂದೂ ಪದ್ಧತಿಯಲ್ಲಿ ಯುಗಾದಿ ಹೊಸ ವರ್ಷವಾಗಿದ್ದರೂ,…
ಇಂದು ಬೆಂಗಳೂರಿನ ಎಸ್ಪಿ ಕಚೇರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಚಂದ್ರಕಾಂತ್ ಎಂ.ವಿ ಅಧಿಕಾರ ವಹಿಸಿಕೊಂಡಿದ್ದಾರೆ.... ಬೆಂಗಳೂರು…
ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಅಜಾಕ್ಸ್ ಶಾಲೆ ಹಿಂಭಾಗ ಶವ ಪತ್ತೆಯಾಗಿದೆ... ಮೃತ ದುರ್ದೈವಿಯನ್ನು ಒರಿಸ್ಸಾ ಮೂಲದ ಸುಮಂತ್(24) ಎಂದು ಗುರುತಿಸಲಾಗಿದೆ....…
ಏನೇನು ಅವತಾರಗಳೋ, ಅಬ್ಬಬ್ಬಾ......... ಹೊಸ ವರ್ಷವೆಂಬ ಸಂಭ್ರಮ ಮತ್ತು ಉನ್ಮಾದ........... ಸಾವಿರಾರು ಪೋಲೀಸರ ಬಿಗಿ ಬಂದೋ ಬಸ್ತ್, ದ್ರೋಣ್ ಕ್ಯಾಮರಾದ…
ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್‌ಪಿ ಆಗಿದ್ದ ಸಿ.ಕೆ ಬಾಬಾ ಅವರಿಗೆ ಬಡ್ತಿ ನೀಡಿ ಕರ್ನಾಟಕ ರಾಜ್ಯ ಮೀಸಲು ಪಡೆಯ ಡಿಐಜಿ…