ಏ.2ರಂದು ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಫ್ಲಾಟ್ ಫಾರಂ ನಂಬರ್ ನಂ. 4, ಹಳೆಯ ರೈಲ್ವೆ ಪೊಲೀಸ್ ಹೊರ ಉಪ ಠಾಣೆಯ ಪಕ್ಕದ ಮರದ ನೆರಳಿನಲ್ಲಿ ಸ್ವಾಭಾವಿಕವಾಗಿ ಮೃತಪಟ್ಟಿದ್ದು, ಸದ್ಯ ವಾರಸುದಾರರು ಪತ್ತೆಯಾಗಿರುವುದಿಲ್ಲ.
*ಮೃತರ ಚಹರೆ* :- ಸುಮಾರು 160cm ಎತ್ತರ, ಸಾಧಾರಣ ಎಣ್ಣೆ ಕೆಂಪು ಮೈಬಣ್ಣ, ದುಂಡು ಮುಖ, ತಲೆಯಲ್ಲಿ ಎರಡು ಇಂಚು ಉದ್ದದ ಮಿಶ್ರಿತ ತಲೆಕೂದಲು, ಅರ್ಧ ಇಂಚು ಉದ್ದದ ಮಿಶ್ರಿತ ಗಡ್ಡ ಮೀಸೆ, ದಪ್ಪನೆಯ ಮೂಗು, ದೃಢ ಕಾಯ ಶರೀರವನ್ನು ಹೊಂದಿದ್ದು, ಬಲಗಾಲು ತೊಡೆಯ ಸಮಕ್ಕೆ ಕತ್ತರಿಸಿ ತೆಗೆದಿರುವ ಗುರುತು ಇದ್ದು, ಶವದ ಪಕ್ಕದಲ್ಲಿ ಕಬ್ಬಿಣದ ಊರುಗೋಲು ಇರುತ್ತದೆ.
*ಬಟ್ಟೆಗಳು*:- ಒಂದು ಬಿಳಿ ಬಣ್ಣದ ಉದ್ದನೆಯ ಗೆರೆಗಳಿರುವ ತುಂಬು ತೋಳಿನ ಶರ್ಟ್ ಧರಿಸಿದ್ದು, ಕಡು ಕಾಫಿ ಬಣ್ಣದ ಅರ್ಧ ತೋಳಿನ ಬನಿಯನ್ ಮತ್ತು ಕಡುಪಾಚಿ ಬಣ್ಣದ ಫ್ಯಾನ್ಸಿ ರೆಡಿಮೇಡ್ ನಿಕ್ಕರ್ ಧರಿಸಿರುತ್ತಾರೆ.
ವಾರಸುದಾರರು ಯಾರಾದರೂ ಇದ್ದಲ್ಲಿ ರೈಲ್ವೆ ಪೊಲೀಸ್ ಹೊರ ಉಪಠಾಣೆ ದೊಡ್ಡಬಳ್ಳಾಪುರ 9480802143 ಸಂಖ್ಯೆಯನ್ನು ಸಂಪರ್ಕಿಸಲು ಈ ಮೂಲಕ ಕೋರಲಾಗಿದೆ.