ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಸಾವು

ದೊಡ್ಡಬಳ್ಳಾಪುರ ಮತ್ತು ವಡ್ಡರಹಳ್ಳಿ ರೈಲು ನಿಲ್ದಾಣಗಳ ಮಾರ್ಗ ಮಧ್ಯೆ ಅಪರಿಚಿತ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಮೃತ ವ್ಯಕ್ತಿಗೆ ಸುಮಾರು 70 ರಿಂದ 75 ವರ್ಷವಾಗಿದ್ದು, ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ.

ಯಶವಂತಪುರ ರೈಲ್ವೆ ಪೊಲೀಸ್ ಠಾಣೆ ಯು.ಡಿ ಆರ್.ನಂ. 190/2024 ಕಲಂ 194 BNSS ರೀತ್ಯಾ  ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

*ಚಹರೆ* – 5.5ಅಡಿ ಎತ್ತರ, ಕಪ್ಪು ಬಿಳಿ ಮಿಶ್ರಿತ ಬಣ್ಣ, ತಲೆಯಲ್ಲಿ ಸುಮಾರು 1.5 ಇಂಚು ಉದ್ದದ ಬಿಳಿ ಕೂದಲು, ದುಂಡು ಮುಖ ಇದ್ದು, ಸಾಧಾರಣವಾದ ಮೈಕಟ್ಟು ಹೊಂದಿರುತ್ತಾರೆ. ಬಿಳಿ ಗಡ್ಡಾ ಮೀಸೆ ಹೊಂದಿರುತ್ತಾನೆ.

*ಬಟ್ಟೆಗಳು* – ಬಿಳಿ ಬಣ್ಣದ ಚೌಕಲಿ ಶರ್ಟ್, ಕಪ್ಪುಬಣ್ಣದ ಪ್ಯಾಂಟ್, ಸೊಂಟದಲ್ಲಿ ಕಪ್ಪು ನೈಲಾನ್ ಉಡದಾರ, ಕಪ್ಪು   ಸ್ವೆಟ್ಟರ್, ಕಡು ಹಸಿರು ಒಳಚಡ್ಡಿ ಮತ್ತು ಕಂದು ಮತ್ತು ಕ್ರೀಂ ಮಿಶ್ರಿತ ಮಂಕಿ ಕ್ಯಾಪ್, ತಿಳಿ ಕಂದು ಬಣ್ಣದ ಕೆಂಪನಯ ಬಾರ್ಡರ್ ಇರುವ ಶಾಲು, ಕಪ್ಪು ಬಣ್ಣದ ಬೆಲ್ಟ್ ಚಪ್ಪಲಿ ಇದ್ದು ವಾರಸುದಾರರು ಯಾರಾದರು ಕಂಡು ಬಂದಲ್ಲಿ ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್  9480802143 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!