
ನಿನ್ನೆ ರಾತ್ರಿ ನಡೆದ ಭೀಕರ ಅಪಘಾತದಲ್ಲಿ ಯುವಕ ಮೃತನಾಗಿದ್ದು… ಮೃತನ ಕಣ್ಣು ದಾನ ಮಾಡುವ ಮೂಲಕ ಮೃತನ ಕುಟುಂಬ ಸಾವಿನಲ್ಲೂ ಸಾರ್ಥಕತೆ ಮೆರೆದಿದೆ.
ನಿನ್ನೆ ರಾತ್ರಿ ನಡೆದ ಭೀಕರ ಅಪಘಾತದಲ್ಲಿ ದೇವನಹಳ್ಳಿ ತಾಲ್ಲೂಕಿನ ಅಕ್ಕುಪೇಟೆ ಗ್ರಾಮದ ಯುವಕ ಮನೋಜ್(25) ಸಾವು.
ಅಪಘಾತದಲ್ಲಿ ಮೃತನಾದ ಮನೋಜ್ ಕುಟುಂಬ ಕಣ್ಣಿನ ದಾನ ಮಾಡಿದೆ.
ದೇವನಹಳ್ಳಿ ತಾಲ್ಲೂಕಿನ ನೀಲೇರಿ ಗೇಟ್ ಬಳಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ ನಡೆದಿತ್ತು. ಕಾರು ಡಿಕ್ಕಿ ಹೊಡದ ರಭಸಕ್ಕೆ ಸ್ಥಳದಲ್ಲೇ ಯುವಕ ಮೃತಪಟ್ಟಿದ್ದ. ಬೇರೆಯವರ ಕಣ್ಣಿನಲ್ಲಿ ಮೃತ ಮನೋಜ್ ಕಾಣಲು ಕುಟುಂಬ ನಿರ್ಧಾರ ಮಾಡಿ, ಮೃತನ ಕಣ್ಣು ದಾನ ಮಾಡುವ ಮೂಲಕ ಮೃತನ ಕುಟುಂಬ ಸಾವಿನಲ್ಲೂ ಸಾರ್ಥಕತೆ ಮೆರೆದಿದೆ.