ಅನೈತಿಕ‌ ಸಂಬಂಧ ಹೊಂದಿದ್ದ ಮಹಿಳೆ ಎದುರೇ ನಡೀತು ಮತ್ತೊಬ್ಬಾಕೆಯ ಅತ್ಯಾಚಾರ, ಕೊಲೆ…! ಇಷ್ಟಕ್ಕೂ ಆ ಕಾಮುಕ‌ ಯಾರು? ಎಲ್ಲಿ ಘಟನೆ ನಡೀತು ಎಂಬ ಸ್ಟೋರಿ‌ ಇಲ್ಲಿದೆ ನೋಡಿ…

ತನ್ನ ಕಾಮದ ತೀಟೆಯನ್ನು ತೀರಿಸಿಕೊಳ್ಳಲು ಪರಿಚಯಸ್ಥ ಮಹಿಳೆ ಜೊತೆ ಈಗಾಗಲೇ ಅನೈತಿಕ ಸಂಬಂಧ ಹೊಂದಿದ್ದ. ಇಷ್ಟಕ್ಕೆ ಸುಮ್ಮನಾಗದ ಈತ ಮತ್ತೊಬ್ಬ ಹೆಂಗಸಿನ ಮೇಲೆ ಕಣ್ಣು ಇಟ್ಟಿದ್ದ. ಈ ಕಾಮುಕನ ಬಳಿ ಕೂಲಿ ಕೆಲಸಕ್ಕೆಂದು ಬಂದಿದ್ದ ಮಹಿಳೆಗೆ ಮದ್ಯ ಕುಡಿಸಿ ಈಗಾಗಲೇ ಆತನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಎದುರೇ ಬೇಡ ಬೇಡ ಅಂದರೂ ಅತ್ಯಾಚಾರ ಎಸಗಿ ಕೊಲೆ ಮಾಡಿ ಕ್ರೌರ್ಯ ಮೆರೆದ ಪಾಪಿ..

ಯೆಸ್, ಈ ಘಟನೆ ಕಳೆದ ಶನಿವಾರ ಗೌರಿಬಿದನೂರಿನ ಕೊನಗಾನಹಳ್ಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಸುಮಾರು 40 ವರ್ಷದ ಅಲುವೇಲಮ್ಮ ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಸಂಜೀವಪ್ಪ ಎಂಬಾತ ಅತ್ಯಾಚಾರ ಎಸಗಿ ಕೊಲೆ ಮಾಡಿದ ವ್ಯಕ್ತಿ. ರಾಮಾಂಜಿನಮ್ಮ ಎಂಬಾಕೆ ಕೊಲೆ ಆರೋಪಿ ಸಂಜೀವಪ್ಪನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ.

ಕಳೆದ ಶನಿವಾರ ರಾಮಾಂಜಿನಮ್ಮ ಹಾಗೂ ಅಲುವೇಲಮ್ಮ ಇಬ್ಬರೂ ಜೊತೆಗೂಡಿ ಸಂಜೀವಪ್ಪ ಎಂಬಾತನ ಬಳಿ ಕೂಲಿ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ. ರಾಮಾಂಜಿನಮ್ಮ ಹಾಗೂ ಸಂಜೀವಪ್ಪ ಇಬ್ಬರೂ ಸುಮಾರು 8 ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು ಎಂದು ತಿಳಿದು ಬಂದಿದ್ದು, ರಾಮಾಂಜಿನಮ್ಮನ ಮನೆಗೆ ಆಗಾಗ ಸಂಜೀವಪ್ಪ ಬಂದು ಹೋಗುತ್ತಿದ್ದ ಎಂಬುದು ಸ್ಥಳೀಯರ ಮಾತಾಗಿದೆ.

ಒಂದು ದಿನ ಸಂಜೀವಪ್ಪ ಹಾಗೂ ರಾಮಾಂಜಿನಮ್ಮ ಜೊತೆಗೂಡಿ ಅಲುವೇಲಮ್ಮನವರನ್ನು ಕರೆದುಕೊಂಡು ಹೋಗಿ ಆಕೆಗೆ ಮದ್ಯ ಕುಡಿಸಿ, ಕುಡಿತದ ಅಮಲಿನಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ಕೊನಗಾನಹಳ್ಳಿಯಲ್ಲಿ ಅಲುವೇಲಮ್ಮ 3 ದಿನಗಳಿಂದ ಕಾಣಿಸಿಲ್ಲ ಎಂಬುದು ಬಹಿರಂಗವಾದಾಗ ರಾಮಾಂಜಿನಮ್ಮನ ಮೇಲೆ ಅನುಮಾನಗೊಂಡ ಗ್ರಾಮಸ್ಥರು ರಾಮಾಂಜಿನಮ್ಮಳನ್ನು ಮನೆಯಲ್ಲಿ ಕೂಡಿಹಾಕಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಈ ವೇಳೆ ಅಲುವೇಲಮ್ಮ ಸಾವಿನ ವಿಚಾರ ಬೆಳಕಿಗೆ ಬಂದಿದೆ ಎಂದು ಸ್ಥಳೀಯರು ವಿವರಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇನ್ನು ಅಲುವೇಲಮ್ಮರಿಗೆ ಮದ್ಯ ಕುಡಿಸಿ, ಅತ್ಯಾಚಾರ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ರಾಮಾಂಜಿನಮ್ಮ ಎದುರಿನಲ್ಲಿಯೇ ಅತ್ಯಾಚಾರ ಮತ್ತು ಹತ್ಯೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಇನ್ನಷ್ಟು ಸತ್ಯಾಂಶ ಪೊಲೀಸ್ ತನಿಖೆಯಿಂದ ಹೊರಬರಲಿದೆ.

Leave a Reply

Your email address will not be published. Required fields are marked *

error: Content is protected !!