ದೇವನಹಳ್ಳಿಯ ಚನ್ನರಾಯಪಟ್ಟಣ ಗ್ರಾಮ ಪಂಚಾಯಿತಿ ಪಿಡಿಒ ಸಿ. ಮುನಿರಾಜು ಅವರು ಅಧಿಕಾರ ದುರ್ಬಳಕೆ ಮತ್ತು ಕರ್ತವ್ಯ ಲೋಪ ಹಿನ್ನೆಲೆ ಸಸ್ಪೆಂಡ್ ಆಗಿದ್ದಾರೆ.. ಸಿ. ಮುನಿರಾಜು ಅವರನ್ನು ಅಮಾನತು ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಅನುರಾಧಾ ಆದೇಶ ಮಾಡಿದ್ದಾರೆ.
ಈ ಹಿಂದೆ ಸಮೇತನಹಳ್ಳಿ ಗ್ರಾ.ಪಂನಲ್ಲಿ ಪಿಡಿಒ ಆಗಿದ್ದ ಸಿ.ಮುನಿರಾಜು, ಬೇಜಾವಬ್ದಾರಿ, ಕರ್ತವ್ಯ ನಿರ್ಲಕ್ಷ್ಯ ಹಾಗೂ ಅಧಿಕಾರ ದುರ್ಬಳಕೆ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ..
ಸಮೇತನಹಳ್ಳಿ ಬಳಿ ರಾಫೆಲ್ ರೆಸಿಡೆನ್ಸಿ ವಿಲ್ಲಾಗಳ ಇ-ಸ್ವತ್ತಿನಲ್ಲಿ ಅಕ್ರಮ ಬಯಲು ಹಾಗೂ ನೈಜತೆ ಇಲ್ಲದ ಛಾಯಾಚಿತ್ರಗಳನ್ನು ಅಪ್ಲೋಡ್ ಮಾಡಿದ್ದ ಆರೋಪದ ಮೇಲೆ ಪಿಡಿಒ ಸಿ. ಮುನಿರಾಜು ಅಮಾನತುಗೊಂಡಿದ್ದಾರೆ.