
ವರ್ಕೌಟ್ ವಾರಿಯರ್ಸ್ ವತಿಯಿಂದ ನವರಾತ್ರಿ ಪ್ರಯುಕ್ತ ಮೂರನೇ ವರ್ಷದ ರಾಜ್ಯಮಟ್ಟದ ಓಪನ್ ದೇಹದಾರ್ಢ್ಯ ಸ್ಪರ್ಧೆ, ಡೆನಿಮ್ ಜೀನ್ಸ್ ಮಾಡೆಲಿಂಗ್, ತಾಲೂಕು ಮಟ್ಟದ ಬಾಡಿ ಬಿಲ್ಡಿಂಗ್ ಮತ್ತು ಮೆನ್ಸ್ ಫಿನಿಕ್ ಸ್ಪರ್ಧೆನ್ನು ಸೆ.21ರಂದು ದೊಡ್ಡಬಳ್ಳಾಪುರದ ಲಕ್ಷ್ಮಿ ಟಾಕಿಸ್ ಮುಂಭಾಗ ಏರ್ಪಡಿಸಲಾಗಿತ್ತು.
ತ್ವಸ್ತಿ ರಿಯಲ್ ಎಸ್ಟೇಟ್ ಮತ್ತು ಕನ್ಸ್ಟ್ರಕ್ಷನ್ ಎಸ್ ಬಿ ಎಂ ಎಂಟರ್ ಪ್ರೈಸಸ್ ನ ಭರತ್ ಎಚ್ ಓ ಹಾಗೂ ವಿ ಎಂಎಂ ಲಾಜಿಸ್ಟಿಕ್ ಪ್ರೈವೆಟ್ ಲಿಮಿಟೆಡ್ ನ ನವೀನ್ ಪಾಟೀಲ್ ಗೌಡ ಅವರ ನೇತೃತ್ವದಲ್ಲಿ “ಮಿಸ್ಟರ್ ಯುವರತ್ನ 2025-26” ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಗೆದ್ದವರಿಗೆ ಪ್ರಶಸ್ತಿ, ನಗದು ಬಹುಮಾನ ನೀಡಿ ಗೌರವಿಸಲಾಯಿತು….