ಅದ್ಧೂರಿಯಾಗಿ ನಡೆದ ತೂಬಗೆರೆ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

ತಾಲೂಕಿನ ಇತಿಹಾಸ ಪ್ರಸಿದ್ಧ ತೂಬಗೆರೆಯ ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟರಮಸ್ವಾಮಿ ಬ್ರಹ್ಮರಥೋತ್ಸವ ಇಂದು ಮಧ್ಯಾಹ್ನ 12-30 ರಿಂದ 1-15 ರೊಳಗಿನ ಅಭಿಜಿನ್ ಲಗ್ನದಲ್ಲಿ ಅದ್ಧೂರಿಯಾಗಿ ನೆರವೇರಿತು.

ಬಿರು ಬಿಸಿಲಿನ ನಡುವೆ ಬ್ರಹ್ಮ ರಥೋತ್ಸವಕ್ಕೆ ಜಿಲ್ಲೆಯ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು‌, ರಥಕ್ಕೆ ಬಾಳೆಹಣ್ಣು ದವನ ಎಸೆದು ಸ್ವಾಮಿಯ ಕೃಪೆಗೆ ಪಾತ್ರರಾದರು.

ಬ್ರಹ್ಮರಥೋತ್ಸವಕ್ಕೆ ಮುನ್ನ ರಥೋತ್ಸವಕ್ಕೆ ಹೂವಿನ ಅಲಂಕಾರ ಸಿಂಗಾರ ಮಾಡಿ ರಥಾಂಗ ಹೋಮ, ರಥಾಂಗ ಪ್ರತಿಷ್ಠೆ ಗಣಪತಿ ಹೋಮಗಳನ್ನು ಮಾಡಿ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಯಿತು.

ಬ್ರಹ್ಮರಥೋತ್ಸದ ಪ್ರಯುಕ್ತ ದೇಗುಲವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು.

ರಥೋತ್ಸವದ ನಂತರ ಅನ್ನಸಂತರ್ಪಣೆ ಹಾಗೂ ವಿವಿಧ ಸಂಘಟನೆಗಳ ಮೂಲಕ ಪಾನಕ ಮಜ್ಜಿಗೆ ವಿತರಣೆ  ಮಾಡಲಾಯಿತು.

ರಾತ್ರಿ 7 ಗಂಟೆಗೆ ವರ್ಣರಜಿಂತ ಬಾಣಬಿರುಸುಗಳ ಪ್ರದರ್ಶನದ ಜೊತೆಗೆ ಸ್ವಾಮಿಗೆ ಸೂರ್ಯಮಂಡಲೋತ್ಸವ ನಡೆಯಲಿದೆ.

Ramesh Babu

Journalist

Recent Posts

ತಾಲೂಕಿನಲ್ಲಿ 250 ಕೋಟಿ ವೆಚ್ಚದ ಟೆಟ್ರಾಪ್ಯಾಕ್ ಘಟಕ ಸ್ಥಾಪನೆ: ಶೀಘ್ರದಲ್ಲೇ ಸಿಎಂ ಡಿ.ಕೆ.ಶಿ ಅವರಿಂದ ಶಂಕುಸ್ಥಾಪನೆ- ಬಮುಲ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್

ದೊಡ್ಡಬಳ್ಳಾಪುರ: ತಾಲ್ಲೂಕಿನ ಹುಸ್ಕೂರು ಗೇಟ್ ಬಳಿ 15 ಎಕರೆ ವಿಸ್ತೀರ್ಣದಲ್ಲಿ ಬಮುಲ್ ವತಿಯಿಂದ 250 ಕೋಟಿ ವೆಚ್ಚದಲ್ಲಿ ಟೆಟ್ರಾಪ್ಯಾಕ್ ತಯಾರಿಕಾ…

10 hours ago

ಬಿಲ್ಡಿಂಗ್ ಪೇಂಟ್ ಮಾಡಲು ಬಂದಿದ್ದ ಕಾರ್ಮಿಕ ಕಟ್ಟಡದ ಮೇಲಿಂದ ಬಿದ್ದು ಸಾವು

ದೊಡ್ಡಬಳ್ಳಾಪುರ: ಬಿಲ್ಡಿಂಗ್‌ಗೆ ಪೇಂಟ್ ಮಾಡಲು ಬಂದಿದ್ದ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಕಟ್ಟಡದ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ…

14 hours ago

ಪ್ರಿಯಕರನನ್ನು ಅಪಹರಿಸಿ ಹಲ್ಲೆ ನಡೆಸಿದ 19 ವರ್ಷದ ಯುವತಿ ಸೇರಿದಂತೆ ಐವರು ಅರೆಸ್ಟ್!

  ಕೇರಳ: ತಿರುರ್‌ನ 19 ವರ್ಷದ ಸಫಾನಾ ಎಂಬ ಯುವತಿ ತನ್ನ ಪ್ರಿಯಕರನನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ…

19 hours ago

ತಂದೆಯಿಂದಲೇ ಮಗನ ಕೊಲೆ: ಮಗನ ಕೊಲೆ ಆರೋಪಿಗೆ ಗ್ರಾಮಸ್ಥರಿಂದ ಹಿಗ್ಗಾಮುಗ್ಗ ಥಳಿತ; ಪೊಲೀಸ್ ಜೀಪಿನಿಂದ ಎಳೆದು ಹಲ್ಲೆ

ಕುಣಿಗಲ್, ನ.15: ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಚೌಡನಾಯಕನಪಾಳ್ಯ ಗ್ರಾಮದಲ್ಲಿ ತಂದೆಯೇ ತನ್ನ 16 ವರ್ಷದ ಮಗನನ್ನು ಹಾರೆಕೋಲಿನಿಂದ ಹೊಡೆದು…

1 day ago

ಜೇನುಕೃಷಿಯ ಸಿಹಿ ಬದುಕು; ವರ್ಷಕ್ಕೆ ಲಕ್ಷಾಂತರ ಆದಾಯ ಗಳಿಸುತ್ತಿರುವ ಮಧುರೆಯ ಯುವಕ

ದೊಡ್ಡಬಳ್ಳಾಪುರ: ತಿಂಗಳ ಸಂಬಳಕ್ಕಾಗಿ ಮತ್ತೊಬ್ಬರ ಬಳಿ ಕೆಲಸ ಮಾಡುವುದಕ್ಕಿಂತ ಸ್ವಂತ ಕೃಷಿ ಭೂಮಿಯಲ್ಲೇ ಹೊಸ ಉದ್ಯಮ ಆರಂಭಿಸಿ ಸ್ವಾವಲಂಬಿ ಬದುಕು…

1 day ago

ಮಾರುತಿನಗರ ವಾರ್ಡ್‌ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ಆರಂಭದಲ್ಲೇ ಕಾಯಿಲೆ ಪತ್ತೆ ಹಚ್ಚುವುದು ಮುಖ್ಯ: ಆದಿಲಕ್ಷ್ಮಿ

ದೊಡ್ಡಬಳ್ಳಾಪುರ: ನಗರದ ಮಾರುತಿನಗರದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಿಸಿಡಿಸಿ (ಸೆಂಟರ್ ಫಾರ್ ಕ್ರಾನಿಕ್ ಡಿಸೀಸ್ ಕಂಟ್ರೋಲ್) ಸಂಸ್ಥೆಯ ಸಹಯೋಗದೊಂದಿಗೆ ಉಚಿತ…

2 days ago